
ನವದೆಹಲಿ, (ಮೇ.17): 20 ವರ್ಷದ ಯುವಕನೊಬ್ಬ ತನ್ನ ತಾಯಿಯ ಬಾಯ್ ಫ್ರೆಂಡ್‌ನನ್ನು ಚಾಕುವಿನಿಂದ ಹಿರಿದು ಹತ್ಯೆ ಮಾಡಿರುವ ಘಟನೆ ದೆಹಲಿಯ ಬಾಬಾ ಹರಿದಾಸ್ ನಗದಲ್ಲಿ ನಡೆದಿದೆ.
2012ರಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಇಬ್ಬರ ಮಕ್ಕಳ ಜೊತೆ ವಾಸವಿದ್ದ ಮಹಿಳೆ, ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.
ಆದ್ರೆ ಹತ್ಯೆಯಾದ ವ್ಯಕ್ತಿ ತಾನು ಸಂಬಂಧ ಬೆಳೆಸಿದ್ದ ಮಹಿಳೆಯ 15 ವರ್ಷದ ಮಗಳ ಮೇಲೆ ಕಣ್ಣಾಕ್ಕಿದ್ದ. ಅಷ್ಟೇ ಅಲ್ಲದೇ ಪ್ರತಿದಿನ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಇದರಿಂದ ಕುಪಿತಗೊಂಡ ಯುವತಿ ಅಣ್ಣ, ತಾಯಿಯ ಪ್ರಿಯತಮನನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ ಎಂದು ಪೋಲಿಸ್ ಕಮಿಷನರ್ ಆಂಟೊ ಆಲ್ಫೋನ್ಸ್ ತಿಳಿಸಿದ್ದಾರೆ. ಸಧ್ಯ ಯುವಕನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ