ಕೈ ಜಾರಿ ಒಡೆದ ಮುತ್ತು, ನೀವೀಗ ಕಳೆದ ಹೊತ್ತು: ಡ್ರಗ್ಸ್ ಸೇವಿಸಿದ 150 ವಿದ್ಯಾರ್ಥಿಗಳ ಬಂಧನ!

By Web DeskFirst Published May 4, 2019, 9:18 PM IST
Highlights

ಮಾದಕ ವಸ್ತು ಮಾರಾಟ ಜಾಲ ಬೇಧಿಸಿದ ಪೊಲೀಸರು| ರೆಸಾರ್ಟ್ ಮೇಲೆ ಪೊಲೀಸರ ದಾಳಿ| 150 ಕಾಲೇಜು ವಿದ್ಯಾರ್ಥಿಗಳ ಬಂಧನ| ತಮಿಳುನಾಡಿನ ಪೊಲಾಚಿ ಜಿಲ್ಲೆಯಲ್ಲಿ ಕಾರ್ಯಾಚರಣೆ|  ಬಂಧಿತರದಲ್ಲಿ ಬಹುತೇಕರು ಕೇರಳ ಮೂಲದವರು| ಗಾಂಜಾ, ಕೊಕೈನ್ ಮತ್ತಿತರ ಮಾದಕ ವಸ್ತು ಸೇವನೆ ಆರೋಪ|

ಕೊಯಂಬತ್ತೂರು(ಮೇ.04): ಮಾದಕ ವಸ್ತು ಮಾರಾಟ ಜಾಲವನ್ನು ಬೇಧಿಸಿರುವ ತಮಿಳುನಾಡು ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ 150 ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಇಲ್ಲಿನ ಪೊಲಾಚಿ ಬಳಿಯ ರೆಸಾರ್ಟ್ ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ಮಾರಾಟ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರೆಸಾರ್ಟ್ ನಲ್ಲಿದ್ದ ಸುಮಾರು 150 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೆಸಾರ್ಟ್ ನಲ್ಲಿರುವ ನೂರಾರು ಯುವಕರು ಮಾದಕ ವ್ಯಸನಿಗಳಾಗಿದ್ದಾರೆ ಎಂಬ ದೂರಿನ ಆಧಾರದ ಮೇಲೆ  ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ, ಕೊಕೈನ್ ಮತ್ತಿತರ ಮಾದಕ ವಸ್ತು ಸೇವಿಸಿದ್ದ ಆರೋಪದ ಮೇರೆಗೆ 15೦ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಬಹುತೇಕ ವಿದ್ಯಾರ್ಥಿಗಳು ನೆರೆಯ ಕೇರಳದಿಂದ ಬಂದವರಾಗಿದ್ದು, ಕೊಯಂಬತ್ತೂರು ಸುತ್ತಮುತ್ತಲಿನ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎನ್ನಲಾಗಿದೆ. 

click me!