
ಮುಂಬೈ: ಅಧಿಕಾರದ ಆಸೆ ಮುಂದೆ ರಕ್ತಸಂಬಂಧವೂ ನಗಣ್ಯ ಎನ್ನುವುದನ್ನು ಇಂತಹ ಪಾಪಿ ತಂದೆ ನೋಡಿ ಹೇಳುವುದು ಎನಿಸುತ್ತದೆ. ಮಹಾರಾಷ್ಟ್ರದಲ್ಲಿ 3 ಮಕ್ಕಳ ತಂದೆಯೊಬ್ಬ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು ತನ್ನದೇ ಮಗುವನ್ನು ಕೊಂದ ಆಘಾತಕಾರಿ ಘಟನೆ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್‌ನ ಕೆರೂರು ಗ್ರಾಮದಲ್ಲಿ ವಿರಾಟ್ ಸಲೂನ್ ನಡೆಸುತ್ತಿದ್ದ ಪಾಂಡುರಂಗ ಕೊಂಡಮಂಗಲೆ ( 28) ಎಂಬಾತನಿಗೆ 1 ಗಂಡು, 2 ಹೆಣ್ಣುಮಕ್ಕಳು. ಈ ವರ್ಷದ ಜೂನ್‌ನಲ್ಲಿ ಗ್ರಾಮದಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಲ್ಲುವ ಆಸೆ ಆತನಿಗೆ ಬಂದಿತ್ತು ಆದರೆ ಅಲ್ಲಿನ ನಿಯಮ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಗ್ರಾಮದ ಸರಪಂಚ್ ಆಗೋ ದುರಾಸೆಗೆ ಬಿದ್ದ ಈತ ಹಾಲಿ ಸರಪಂಚ್ ಬಳಿ ಸಲಹೆ ಪಡೆದು, ಆರಂಭದಲ್ಲಿ ಹಿರಿ ಮಗಳನ್ನು ದತ್ತು ನೀಡುವ ಬಗ್ಗೆ ಚಿಂತಿಸಿದ್ದಾರೆ. ಆದರೆ ಕೊಲೆ ಸ್ಕೆಚ್ ರೂಪಿಸಿದ್ದಾರೆ.
ಅದರಂತೆ ಮಗಳನ್ನು ನಿಜಾಮಾಬಾದ್‌ಗೆ ಬೈಕ್‌ನಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ ಪಾಪಿ ತಂದೆ ಗದ್ದೆಯಲ್ಲಿದ್ದ ನೀರಿಗೆ ಬಾಲಕಿ ತಳ್ಳಿ ಓಡಿದ್ದಾನೆ. ಮಗುವಿನ ದೇಹ ಕಾಲುವೆಯಲ್ಲಿ ತೇಲುತ್ತಿರುವುದಿಂದ ಗ್ರಾಮಸ್ಥರು ನೋಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ