ಸಾವಿನಲ್ಲೂ ಒಂದಾದ ಅವಳಿ ಸಹೋದರಿಯರು!

By Suvarna News  |  First Published Jul 5, 2021, 11:32 AM IST

* ಮನೆಯಲ್ಲೇ ನೇಣಿಗೆ ಶರಣಾದ ಅಕ್ಕ-ತಂಗಿ

* ಹುಣಸನಹಳ್ಳಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ

* ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮ


ಮಂಡ್ಯ(ಜು.05): ಅವಳಿ ಮಕ್ಕಳೆಂದರೆ ಸಾಮಾನ್ಯವಾಗಿ ಎಲ್ಲಾ ಸಂದರ್ಭದಲ್ಲೂ ಒಟ್ಟಾಗಿರುತ್ತಾರೆ. ಬಹುತೇಕ ಅವಳಿ ಮಕ್ಕಳ ಒಟನಾಟ ಚೆನ್ನಾಗಿರುತ್ತದೆ ಹಾಗೂ ಇಷ್ಟಗಳೂ ಒಂದೇ ತೆರನಾಗಿರುತ್ತವೆ. ಆದರೀಗ ಮಂಡ್ಯ ಜಿಲ್ಲೆಯ ಅವಳಿ ಸಹೋದರಿಯರು ಒಟ್ಟಾಗಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

Tap to resize

Latest Videos

undefined

ಒಟ್ಟಿಗೆ ಹುಟ್ಟಿ, ಒಟ್ಟಿಗೆ ಬೆಳೆದ ಅವಳಿಗಳು 24ನೇ ಹುಟ್ಟುಹಬ್ಬದಂದೇ ದೂರವಾದರು!

ಹೌದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ದೀಪಿಕಾ (19) ಮತ್ತು ದಿವ್ಯ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದ ಸಹೋದರಿಯರು ಚಿಕ್ಕಂದಿನಿಂದ ಅನ್ಯೋನ್ಯತೆಯಿಂದ ಇದ್ದರು. ಆದರೀಗ ಮನೆಯ ಬೇರೆ ಬೇರೆ ಕೊಠಡಿಯಲ್ಇ ನೇಣಿಗೆ ಶರಣಾಗಿದ್ದಾರೆ.

ಸದ್ಯ ಕುಟುಂಬಸ್ಥರು ಈ ಅವಳಿಗಳ ಒಟ್ಟಿಗೆ ಅಂತ್ಯಕ್ರಿಯೆ ನೆರವೇರಿಸಿದ್ದು, ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

click me!