
ಉತ್ತರ ಪ್ರದೇಶ (ಆ. 28): ಸಮಯಕ್ಕೆ ಸರಿಯಾಗಿ ಊಟ ಬಡಿಸಲು ವಿಫಲಳಲಾದ ತನ್ನ 22 ವರ್ಷದ ಮಗಳನ್ನು ಕೊಂದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಶನಿವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮೃತಳನ್ನು ರೇಷ್ಮಾ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 4 ರಂದು ಮಗಳಿಗೆ ಮದುವೆ ನಿಶ್ಚಯವಾಗಿತ್ತು ಎಂದು ವರದಿಗಳು ತಿಳಸಿವೆ. ಆರು ಮಕ್ಕಳ ತಂದೆಯಾದ ಆರೋಪಿ ಮೊಹಮ್ಮದ್ ಫರಿಯಾದ್‌ನನ್ನು ಐಪಿಸಿಯ ಸೆಕ್ಷನ್ 302 (ಕೊಲೆ) ಅನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ
ಮೊಹಮ್ಮದ್ ಫರಿಯಾದ್ ತನ್ನ ಮಗಳು ರೇಷ್ಮಾಳೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊಹಮ್ಮದ್ ಫರಿಯಾದ್‌ನ ಆರು ಮಕ್ಕಳಲ್ಲಿ ರೇಷ್ಮಾ ಎರಡನೆಯಳಾಗಿದ್ದು, ಊಟ ಬಡಿಸಲು ವಿಳಂಬ ಮಾಡಿದಕ್ಕೆ ತಂದೆ ಬೈದಿದ್ದ ಎಂದು ಆರೋಪಿಸಲಾಗಿದೆ.
ಊಟ ಬಡಿಸುವಲ್ಲಿ ವಿಳಂಬವಾಗಿದ್ದಕ್ಕೆ ಆಕೆಯ ತಂದೆ ಬೈದಾಗ ರೇಷ್ಮಾ ಅವರಿಗೆ ಕೋಪದಿಂದ ಉತ್ತರಿಸಿದ್ದಾಳೆ. ಕೋಪದ ಭರದಲ್ಲಿ ಫರಿಯಾದ್ ಚೂಪಾದ ಹುಲ್ಲು ಕಡಿಯಲು ಬಳಸುತ್ತಿದ್ದ ಬ್ಲೇಡ್ ತೆಗೆದುಕೊಂಡು ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ದಾಳಿಯಲ್ಲಿ ಮಗಳಿಗೆ ತೀವ್ರ ಗಾಯವಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಬೆಂಗಳೂರು: ದೂರವಾಗಿದ್ದ ಪ್ರಿಯಕರನ ಅಪಹರಿಸಿ ಥಳಿಸಿದ ಪ್ರಿಯತಮೆ..!
ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಚಂದ್ರ ತಿಳಿಸಿದ್ದಾರೆ. ಈ ಸಂಬಂಧ ಬಾಬುಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಎಎಸ್ಪಿ ತಿಳಿಸಿದ್ದಾರೆ.
ಬುದ್ಧಿ ಹೇಳಿದವನನ್ನೇ ಇರಿದು ಕೊಂದ ಪುಂಡ: ತನಗೆ ಬುದ್ಧಿ ಮಾತು ಹೇಳಿದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಪುಂಡ ಯುವಕನೊಬ್ಬ ಕೊಂದು ಪರಾರಿಯಾಗಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗ್ಗನಹಳ್ಳಿಯ ಮಾರುತಿನಗರದ ಅಜೀಮುಲ್ಲಾ ಖಾನ್ (43) ಮೃತ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಆಟೋ ಚಾಲಕ ಆರೋಪಿ ಅನೀಫ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಖಾನ್ ಮತ್ತು ಅನೀಫ್ ಮಧ್ಯೆ ಬುಧವಾರ ರಾತ್ರಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಕೆರಳಿದ ಆರೋಪಿ, ಖಾನ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತಕ್ಷಣವೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ.
ಜೆ.ಜೆ.ನಗರದಲ್ಲಿದ್ದ ಅನೀಫ್, ಕೆಲ ವರ್ಷಗಳ ಹಿಂದಷ್ಟೇ ಮಾರುತಿ ನಗರಕ್ಕೆ ಬಂದು ನೆಲೆಸಿದ್ದ. ಕೆಲಸ ಮಾಡದೆ ಪುಂಡಾಟ ಮಾಡಿಕೊಂಡಿದ್ದ ಆತನಿಗೆ ಅಜೀಮುಲ್ಲಾ ಖಾನ್ ತಂದೆ ಬುದ್ಧಿ ಮಾತು ಹೇಳಿದ್ದರು. ಆಗ ನೀನು ಯಾರು ಕೇಳಲು ಎಂದು ಅನೀಫ್ ಪ್ರಶ್ನಿಸಿದ್ದಾನೆ. ಈ ಹಂತದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ