
ದಾವಣಗೆರೆ(ಸೆ.25): ಬಾರ್‌ವೊಂದರಲ್ಲಿ ಕುಳಿತು ಮಧ್ಯ ಸೇವಿಸುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಘಟನೆಗೆ ಅನೈತಿಕ ಸಂಬಂಧ ಹಾಗೂ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದುದೇ ಕಾರಣ ಎಂಬ ಸಂಗತಿ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ.
ನಗರದ ಕೆಟಿಜೆ ನಗರದ ನಿಟುವಳ್ಳಿ ಮುಖ್ಯರಸ್ತೆಯ ಪ್ರಕಾಶ ಬಾರ್‌ನಲ್ಲಿ ಸೆ.21ರಂದು ಹನುಮಂತ ಅಲಿಯಾಸ್ ಕುಮಾರ (30) ಎಂಬಾತ ಸ್ನೇಹಿತರೊಂದಿಗೆ ಕುಳಿತಿದ್ದ. ಈ ವೇಳೆ ಹಿಂದಿನಿಂದ ಬಂದ ಗೌತಮ್ ಪವಾರ್ (36) ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವಕನ ಜತೆ ವಿವಾಹಿತ ಮಹಿಳೆಯ ಲವ್ವಿ ಡವ್ವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ತಾಯಿಯನ್ನೇ ಕೊಂದ ಮಗಳು..!
ಕೊಲೆ ಪ್ರಕರಣ ಬೇಧಿಸಲು ಪೊಲೀಸರು ತನಿಖೆ ಕೈಗೊಂಡಿದ್ದರು. ಹನುಮಂತ ಅಲಿಯಾಸ್ ಕುಮಾರ ಮಹಿಳೆಯೊಬ್ಬಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆಯಾದ ಹನುಮಂತ (ಕುಮಾರ)ನ ಸ್ನೇಹಿತ ಗೌತಮ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಕೊಲೆಗೆ ಆರೋಪಿಯ ಸಹೋದರಿ ಜತೆ ಹೊಂದಿದ್ದ ಅನೈತಿಕ ಸಂಬಂಧ, ಕೆಲ ಖಾಸಗಿ ಫೋಟೋಗಳ ವೈರಲ್ ಮಾಡುವ ಬೆದರಿಕೆ ಹಾಕಿದ್ದೇ ಕಾರಣವೆಂಬ ವಿಚಾರ ಬಯಲಾಗಿದೆ.
ಖಾಸಗಿ ಫೋಟೋಗಳನ್ನು ವೈರಲ್ ಮಾಡದಂತೆ ಆರೋಪಿ ಗೌತಮ್ ಸಾಕಷ್ಟು ಸಲ ಮನವಿ ಮಾಡಿದ್ದ. ಆದರೂ ಹನುಮಂತ ಕಿವಿಗೊಟ್ಟಿರಲಿಲ್ಲ. ಹಾಗಾಗಿ ಹನುಮಂತನನ್ನು ಚಾಕುವಿನಿಂದ ಇರಿದು ಕೊಂದಿದ್ದಾಗಿ ಆರೋಪಿ ಗೌತಮ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇನ್ನಷ್ಟು ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ