ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಮತಾಂತರಗೊಂಡಿದ್ದ ಮಹಿಳೆಯನ್ನು ಆಕೆಯ ಸಹೋದರ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ.
ಗದಗ (ಸೆ.24): ಕಳೆದ ಮೂವತ್ತು ವರ್ಷಗಳಿಂದ ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದ ಕಾಳಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಮೆಹಬೂಬ್‌ನನ್ನು ಮದುವೆ ಮಾಡಿಕೊಂಡು ಖುರ್ಷಿದಾ ಆಗಿ ಮತಾಂತರ ಆಗಿದ್ದಾಳೆ. ಈಗ ಆತನ ಅಣ್ಣ ಈಶ್ವರನ ಮನೆಗೆ ಬಂದು ನನಗೆ 15 ಎಕರೆ ಪಿತ್ರಾರ್ಜಿತ ಆಸ್ತಿ ಬೇಕು ಎಂದು ಕೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅಣ್ಣ ಈಶ್ವರ್ ಕಾಳಮ್ಮ ಅಲಿಯಾಸ್ ಖುರ್ಷಿದಾಳನ್ನು ಹತ್ಯೆ ಮಾಡಿದ್ದಾನೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಘಟನೆ ನಡೆದಿದೆ. ಕಾಳಮ್ಮ ಕ್ಯಾದಿಗೆಹಳ್ಳಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆ ಆಗಿದ್ದಾಳೆ. ಕಾಳಮ್ಮನ ಅಣ್ಣ ಈಶ್ವರಪ್ಪ ಕ್ಯಾದಿಗೇಹಳ್ಳಿ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ನನಗೆ ಪಿತ್ರಾರ್ಜಿತ ಆಸ್ತಿ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದ ಕಾಳಮ್ಮ ಅಲಿಯಾಸ್ ಖುರ್ಷಿದಾ ಮನೆಗೆ ಆಸ್ತಿ ವ್ಯಾಜ್ಯ ವಾಪಾಸ್ ಪಡೆಯುವಂತೆ ಆಕೆಯ ಅಣ್ಣ ಈಶ್ವರ್ ತೆರಳಿದ್ದಾನೆ. ಈ ವೇಳೆ ಮಾತು ಕೇಳದ ತಂಗಿಗೆ ಚಾಕುವನ್ನು ಚುಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಚಾಕು ಚುಚ್ಚಿದ ನಂತರವೂ ಆಕೆ ಚೀರಾಡುತ್ತಾ ಬೇರೊಬ್ಬರ ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಾಗ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ವಿಕೃತಿ ಮೆರೆದಿದ್ದಾನೆ.
undefined
ಆಟೋದಲ್ಲಿ ಕುಳಿತಲ್ಲೇ ಚಾಲಕ ಸಾವು: ಬೀದಿಗಳಲ್ಲಿ ಹೆಣ ಬೀಳ್ತಿದ್ದರೂ ಕಣ್ಮುಚ್ಚಿ ಕುಳಿತ ಸರ್ಕಾರ!
ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ 15 ಎಕರೆ ಜಮೀನು ವಿಚಾರವಾಗಿ ವ್ಯಾಜ್ಯ ನಡೆಯುತ್ತಿತ್ತು. ಪಿತ್ರಾರ್ಜಿತ ಆಸ್ತಿಗಾಗಿ ಕಾಳಮ್ಮ ಅಲಿಯಾಸ್ ಖರ್ಷಿದಾ ಕೇಸ್ ದಾಖಲಿಸಿದ್ದಳು. ಕಳೆದ 4 ವರ್ಷದ ಹಿಂದೆ ಕಾಳಮ್ಮ ಮನೆಯವರ ವಿರೋಧ ಕಟ್ಟಿಕೊಂಡು ಮೆಹಬೂಬ್ ಬೆಟಗೇರಿ ಎಂಬಾತನೊಂದಿಗೆ ಅಂತರ್ ಧರ್ಮೀಯವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ಈಕೆ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕು ಎಂದು ಅಪ್ಪನಿಗೆ ಸೇರಿದ್ದ ಚಿಕ್ಕ ಮನೆಯಲ್ಲಿ ಕಾಳಮ್ಮ ಹಾಗೂ ಮೆಹಬೂಬ್ ವಾಸವಾಗಿದ್ದರು.
ಇನ್ನು ಮುಸ್ಲಿಂ ವ್ಯಕ್ತಿಯನ್ನ ಮದ್ವೆಯಾಗಿದ್ದ ಕಾಳಮ್ಮ ಖುರ್ಷಿದಾ ಅಂತಾ ಹೆಸರು ಬದಲಿಸಿಕೊಂಡಿದ್ದಳು. ಮದುವೆ ನಂತರ ಅಪ್ಪನಿಗೆ ಸೇರಿದ ಮನೆಯಲ್ಲಿ ವಾಸ ಮಾಡುತ್ತಿದ್ದೀಯ. ಮನೆಯವರ ವಿರೋಧದೊಂದಿಗೆ ಮದುವೆ ಮಾಡಿಕೊಂಡು ಹೋಗಿದ್ದರೂ ಅಪ್ಪನ ಆಸ್ತಿ ಮೇಲೇಕೆ ಕಣ್ಣು ಹಾಕಿದ್ದೀಯಾ ಎಂದು ಅಣ್ಣ ಈಶ್ವರ ಆಗಾಗ ಜಗಳ ಮಾಡುತ್ತಿದ್ದನು. ಇದೀಗ ಅಣ್ಣ - ತಂಗಿ ಆಸ್ತಿ ವ್ಯಾಜ್ಯದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಆಟೋ ಡ್ರೈವರ್ ಸೀಟಿನಲ್ಲಿ ಆಫೀಸ್ ಚೇರ್: ಲವ್ ಯೂ ಬೆಂಗಳೂರು ಎಂದ ಶಿವಾನಿ!