ಮೃತರನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಲು ಮೂಲದ 30 ವರ್ಷದ ವ್ಯಕ್ತಿ ಎನ್. ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಬುಧವಾರ ತಿರುಪತಿಯ ಖಾಸಗಿ ಲಾಡ್ಜ್‌ನಲ್ಲಿ ಇವರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಿರುಪತಿ (ಮೇ 10, 2023): ಪವಿತ್ರ ತೀರ್ಥಕ್ಷೇತ್ರ ತಿರುಪತಿಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಲಾಡ್ಜ್‌ನಲ್ಲಿ ಅವರ ಶವ ದೊರೆತಿದ್ದು, ಮೃತರನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಲು ಮೂಲದ 30 ವರ್ಷದ ವ್ಯಕ್ತಿ ಎನ್. ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಬುಧವಾರ ತಿರುಪತಿಯ ಖಾಸಗಿ ಲಾಡ್ಜ್‌ನಲ್ಲಿ ಇವರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನು, ಮೃತ ವಿನೋದ್ ಕುಮಾರ್ ಮಂಗಳವಾರ ಮಹಿಳೆಯೊಂದಿಗೆ ಆ ಖಾಸಗಿ ಲಾಡ್ಜ್‌ಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ, ಬುಧವಾರ ಬೆಳಗ್ಗೆ ರೂಂ ಬಾಯ್‌ಗಳು ಹಲವು ಬಾರಿ ಬಾಗಿಲು ಬಡಿದರೂ ವಿನೋದ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಹಿನ್ನೆಲೆ, ಅನುಮಾನಗೊಂಡ ಅವರು ಏನೋ ಆಗಿರಬಹುದು ಎಂದು ಶಂಕಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!
ಬಳಿಕ, ಪೊಲೀಸರ ಸಮ್ಮುಖದಲ್ಲಿ ಕೊಠಡಿಯ ಬಾಗಿಲು ಒಡೆದು ನೋಡಿದಾಗ ವಿನೋದ್ ಕುಮಾರ್ ಅವರ ಶವ ದೊರೆತಿದೆ. ಮೇಲ್ಛಾವಣಿಯ ಸೀಲಿಂಗ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು, ಈ ಹಿನ್ನೆಲೆ ತಿರುಪತಿ ಪೂರ್ವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ವಿಆರ್‌ಆರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ, ವಿನೋದ್ ಕುಮಾರ್ ಜೊತೆಗಿದ್ದ ಮಹಿಳೆಗಾಗಿ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!
ಕಳೆದ ವರ್ಷವೂ ತಿರುಪತಿಯಲ್ಲಿ ನೇಣಿಗೆ ಶರಣಾಗಿದ್ದ ಜೋಡಿ
ತಿರುಪತಿಯ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ಯುವಜೋಡಿಯೊಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕಳೆದ ವರ್ಷ ನಡೆದಿತ್ತು.. ಮೃತರನ್ನು ಪೂರ್ವ ಗೋದಾವರಿಯ ಕೊವ್ವುರು ನಿವಾಸಿ ಅನುಷಾ ಹಾಗೂ ಹೈದರಾಬಾದ್ ನಿವಾಸಿ ಕೃಷ್ಣರಾವ್ ಎಂದು ಗುರುತಿಸಲಾಗಿತ್ತು. ಈ ಜೋಡಿ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ರೂಮ್ ಪಡೆದಿದ್ದರು.
ಆದರೆ ಲಾಡ್ಜ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಲವು ಬಾರಿ ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಲಾಡ್ಜ್ ಮಾಲೀಕ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ನಂತರ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಇಬ್ಬರ ಶವ ಕೊಠಡಿಯೊಳಗಿನ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು.
ಅನುಷಾಗೆ ನಾಲ್ಕು ತಿಂಗಳ ಹಿಂದಷ್ಟೇ ಬೇರೆ ವ್ಯಕ್ತಿಯ ಜೊತೆ ವಿವಾಹವಾಗಿದ್ದು, ಆಕೆಯ ಸಮ್ಮತಿ ಇಲ್ಲದೇ ಪೋಷಕರು ಒತ್ತಾಯಪೂರ್ವಕವಾಗಿ ಈ ವಿವಾಹ ಮಾಡಿದ್ದರು. ಆದರೆ ಈಗ ಮತ್ತೋರ್ವ ಪುರುಷನೊಂದಿಗೆ ಹೊಟೇಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಷಾ ಪೋಷಕರು ಈ ಬಗ್ಗೆ ಕೊವ್ವುರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತಿರುಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ಅನ್ನ ಮಾಡ್ಲಿಲ್ಲ ಅಂತ ಪತ್ನಿ ಜತೆ ಜಗಳವಾಡಿ ಕೊಂದೇ ಬಿಟ್ಟ ಪಾಪಿ ಪತಿ!