ಗರ್ಲ್ ಫ್ರೆಂಡ್ ಭೇಟಿಗೆ ಮನೆಗೆ ಬಂದವ ವಾಪಸ್ ಆಗ್ಲಿಲ್ಲ ! ಇನ್ಸ್ಟಾಗ್ರಾಮ್ ಲವ್ ಸ್ಟೋರಿಯಲ್ಲಿ ಟ್ವಿಸ್ಟ್

Published : Aug 05, 2026, 03:12 PM IST
Love affair

ಸಾರಾಂಶ

Love affair : ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಮಾಡಿ ಮೋಸ ಹೋದವರ ಸಂಖ್ಯೆ ಸಾಕಷ್ಟಿದೆ. ಅದಕ್ಕೆ ಈಗ ಇನ್ನೊಂದು ಉದಾಹರಣೆ ಸಿಕ್ಕಿದೆ. ಹುಡುಗಿ ಹುಡುಕಿಕೊಂಡು ಮನೆಗೆ ಹೋದವನ ಸ್ಥಿತಿ ಈಗ ಏನಾಗಿದೆ ಗೊತ್ತಾ?

ಇನ್ಸ್ಟಾಗ್ರಾಮ್ ನಲ್ಲಿ ಶುರುವಾದ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಒಂದು ವರ್ಷದಿಂದ ಪ್ರೀತಿಯಲ್ಲಿದ್ದ ಯುವಕ, ಪ್ರಿಯತಮೆ ಭೇಟಿಗೆ ಮನೆಗೆ ಬಂದಿದ್ದ. ಆದ್ರೆ ಅಲ್ಲಾಗಿದ್ದೇ ಬೇರೆ. ಕೆಲವೇ ಗಂಟೆಯಲ್ಲಿ ಗರ್ಲ್ ಫ್ರೆಂಡ್ ಸಂಬಂಧಿಕರ ಅಂಗಡಿಯಲ್ಲಿ ಹುಡುಗನ ಶವ ನೇತಾಡಿದೆ.

ದುರಂತ ಅಂತ್ಯಕಂಡ ಪ್ರೇಮ ಕಥೆ

ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಹುಡುಗನ ಹೆಸರು ಮೊಹಮ್ಮದ್ ಅಕ್ಮಲ್. ಈತ ಅಂಬೇಡ್ಕರ್ ನಗರ ಜಿಲ್ಲೆಯ ಪಹಾರ್ಪುರ ಗ್ರಾಮದ ನಿವಾಸಿ. ಪೊಲೀಸರ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ, ಫತೇಪುರದ ಬಕೇವರ್ ಪೊಲೀಸ್ ಠಾಣೆ ಪ್ರದೇಶದ ಸಕುರಾಬಾದ್ ಗ್ರಾಮದ ಯುವತಿಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಸ್ನೇಹ ಶುರುವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಅವರು ಆಗಾಗ್ಗೆ ಫೋನ್ನಲ್ಲಿ ಮಾತನಾಡುತ್ತಿದ್ದರು.

ಮಾಹಿತಿ ಪ್ರಕಾರ, ಹುಡುಗಿ ತಾಯಿ ಅನಾರೋಗ್ಯಕ ಕಥೆ ಹೇಳಿ ಹುಡುಗನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಅಕ್ಮಲ್ ಭೇಟಿಗಾಗಿ ಹುಡುಗಿ ಮನೆಗೆ ಬಂದಿದ್ದಾನೆ. ಅಕ್ಮಲ್, ಅಂಬೇಡ್ಕರ್ ನಗರದಿಂದ ಫತೇಪುರಕ್ಕೆ ಬಂದಾಗ ಸತ್ಯ ಗೊತ್ತಾಗಿದೆ. ಅವನ ಪ್ರೇಯಸಿ ಅಲ್ಲಿರಲಿಲ್ಲ. ಪೊಲೀಸರ ಪ್ರಕಾರ, ಅವಳು ಬಂದಾದಲ್ಲಿರುವ ತನ್ನ ಮಾವನ ಮನೆಯಲ್ಲಿದ್ದಳು. ನಂತ್ರ ನಡೆದ ಘಟನೆ ಎಲ್ಲರನ್ನು ದಂಗಾಗಿಸಿದೆ.

ಅಕ್ಮಲ್ ಮನೆಗೆ ಬರ್ತಿದ್ದಂತೆ ಹುಡುಗಿ ಕುಟುಂಬದವರು ಮೊದಲು ಮಾತುಕತೆ ಮೂಲಕ ಹುಡುಗನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಹುಡುಗನ ಅಣ್ಣನ ಜೊತೆ ಮಾತನಾಡಿದ್ದಾರೆ. ಆದ್ರೆ ಅಕ್ಮಲ್, ವಾಪಸ್ ಹೋಗುವ ಮನಸ್ಸು ಮಾಡಲಿಲ್ಲ. ಅಲ್ಲಿ ಇಲ್ಲಿ ತಿರುಗ್ತಿರೋದನ್ನು ನೋಡಿದ ಹುಡುಗಿ ಮನೆಯವರು, ಸಂಬಂಧಿಕರ ಅಂಗಡಿಯಲ್ಲಿ ಅವನನ್ನು ಕೂಡಿಹಾಕಿ ಶಟರ್ ಎಳೆದಿದ್ದಾರೆ.

ಹುಡುಗಿ ಕುಟುಂಬಸ್ಥರ ಪ್ರಕಾರ, ಕೆಲ ಗಂಟೆ ನಂತ್ರ ಶಟರ್ ತೆಗೆದ್ರೆ ಹುಡುಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ಪತ್ತೆಯಾಗಿದ್ದ. ಮಾಹಿತಿ ಪಡೆದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿತ್ತು. ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಂಗಡಿಯೊಳಗೆ ಏನಾಯಿತು? ಯುವಕ ಆತ್ಮಹತ್ಯೆ ಮಾಡ್ಕೊಂಡನಾ ಅಥವಾ ಇದು ಹತ್ಯೆಯಾ ಎನ್ನುವ ಪ್ರಶ್ನೆ ಕಾಡ್ತಿದೆ. ಸೂಕ್ತ ತನಿಖೆ ನಂತ್ರ ಇದಕ್ಕೆ ಉತ್ತರ ಸಿಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಇದು ನನ್ನ ಕೊನೆಯ ಪೋಸ್ಟ್'​: CJP ಪ್ರತಿಭಟನೆ ವೇಳೆ ವಿವಾದಕ್ಕೀಡಾಗಿದ್ದ ಇನ್​ಫ್ಲುಯೆನ್ಸರ್​ ಶ್ರದ್ಧಾ ಸಿಂಗ್ ಮಾತು
​ಪೀಣ್ಯದಲ್ಲಿ ಪುಂಡರ ಅಟ್ಟಹಾಸ: ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸ! ಕ್ರಮ ಕೈಗೊಳ್ಳದೆ ಕೈತೊಳೆದುಕೊಂಡ ಪೋಲಿಸರು!