
ಸುರತ್( ಆ. 03) ತನ್ನ ಚಿಕ್ಕಪ್ಪನ ವಿರುದ್ಧ 25 ವರ್ಷದ ಯುವತಿ ದೂರು ದಾಖಲಿಸಿದ್ದಾರೆ. ರಿಲೇಶನ್ ಶಿಪ್ ನಲ್ಲಿ ಇದ್ದಾಗ ತೆಗೆದುಕೊಂಡ ಖಾಸಗಿ ವಿಡಿಯೋ ಇಟ್ಟುಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಪುಣಾ ಏರಿಯಾದ ಸೌರಾಷ್ಟ್ರದ ಮಹಿಳೆ ದೂರು ನೀಡಿದ್ದಾರೆ. ಸೀರೆಗೆ ಫಾಲ್ ಮತ್ತು ಅಲಂಕಾರಿಕ ಕೆಲಸ ಮಾಡುವುದುದನ್ನು ಮಹಿಳೆ ತನ್ನ 30 ವರ್ಷದ ಚಿಕ್ಕಪ್ಪನಿಂದ ಮಹಿಳೆ ಕಲಿಯುತ್ತಿದ್ದಳು. ಇದೇ ಕಾರಣಕ್ಕೆ ವ್ಯಕ್ತಿ ಮಹಿಳೆ ಮನೆಗೆ ಪ್ರತಿದಿನ ಬಂದು ಹೋಗುತ್ತಿದ್ದ.
ಕರ್ನಾಟಕ ಕಾಂಗ್ರೆಸ್ ಮಾಜಿ ಅಧ್ಯಕ್ಷನ ಪೋನ್ ನಿಂದ ಸೆಂಡ್ ಆದ ಅಶ್ಲೀಲ ವಿಡಿಯೋ
ವ್ಯಕ್ತಿ ಮಹಿಗೆ ದೂರದ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕು. ನನನ್ನು ನೀನು ಚಿಕ್ಕಪ್ಪ ಎಂದು ಕರೆಯಬಾರದು ಎಂದು ಆಗಾಗ್ಗೆ ಹೇಳುತ್ತಿದ್ದ. ಕಳೆದ ವರ್ಷ ಮಹಿಳೆಗೆ ಆತ ಪ್ರಪೋಸ್ ಸಹ ಮಾಡಿದ್ದ. ಇದಾದ ಮೇಲೆ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದೆ. ಸಂದರ್ಭ ಉಪಯೋಗಿಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಮೂರು ತಿಂಗಳ ಹಿಂದೆ ಯುವತಿಗೆ ಮದುವೆ ಮಾಡಲು ನಿಶ್ಚಯಿಸಿದ ಕುಟುಂಬಸ್ಥರು ಸೂಕ್ತ ಸಂಬಂಧದ ಹುಡುಕಾಡ ನಡೆಸಿದ್ದಾರೆ. ಇದು ಆರೋಪಿತ ವ್ಯಕ್ತಿಗೂ ಗೊತ್ತಾಗಿದೆ. ಮದುವೆಯಾದ ಮೇಲೂ ನೀನು ನನ್ನ ಜತೆ ದೈಹಿಕ ಸಂಬಂಧ ಮುಂದುವರಿಸಬೇಕು ಎಂದು ಬೆನ್ನು ಬಿದ್ದಿದ್ದಾನೆ. ಯುವತಿ ನಿರಾಕರಿಸಿದಾಗ ವಿಡಿಯೋ ವಿಚಾರ ತೆಗೆದಿದ್ದಾನೆ.
ಯುವತಿಯ ತಂದೆ ಸೇರಿದಂತೆ ಸಮುದಾಯದ ಅನೇಕರಿಗೆ ವಿಡಿಯೋ ಸೆಂಡ್ ಮಾಡಿದ್ದು ಯುವತಿ ದೂರಿನ ಆಧಾರದಲ್ಲಿ ಕೇಸ್ ಬುಕ್ ಮಾಡಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ