* ರಾಜವಂಶದ ಹೆಸರು ಹೇಳಿಕೊಂಡು ಮೋಸ ಮಾಡುತ್ತಿದ್ದವನ ಬಂಧನ
*ಹುಡುಗಿಯರಿಂದ ಹಣ ಹಾಕಿಸಿಕೊಂಡು ವಂಚನೆ
* ರಾಜವಂಶದ ಸಂಬಂಧಿ ಎಂದು ಫೋಟೋ ಬಳಸುತ್ತಿದ್ದ
* ಮ್ಯಾಟ್ರೀಮೋನಿ ಸೈಟ್ ಮೂಲಕ ವಂಚನೆ
ಬೆಂಗಳೂರು(ಜು. 12) ಮೈಸೂರು ಅರಸರ ಸಂಬಂಧಿ ಎಂದು ದೋಖಾ ಮಾಡ್ತಿದ್ದ ಖತರ್ನಾಕ್ ಆರೋಪಿ ಸೆರೆಸಿಕ್ಕಿದ್ದಾನೆ. ಸಿದ್ದಾರ್ಥ್ ಬಂಧಿತ ಆರೋಪಿ ಮ್ಯಾಟ್ರಿಮೋನಿ ಸೈಟ್ ನಲ್ಲಿ ಮೋಸಮಾಡುತ್ತಿದ್ದ ಈತನ ವಂಚನೆ ಜಾಲ ಬಯಲಾಗಿದೆ.
ವಿವಿಧ ಮ್ಯಾಟ್ರಿಮೋನಿ ಸೈಟ್ ನಲ್ಲಿ ಮೋಸ ಮಾಡಿರುವುದು ಗೊತ್ತಾಗಿದೆ. "Sangam matrimony" ಮತ್ತು "Kannada matrimony" ಉಪಯೋಗಿಸುತ್ತಿದ್ದವ ತಾನು ರಾಜವಂಶಕ್ಕೆ ಸೇರಿದವ ಎಂದು ನಂಬಿಸುತ್ತಿದ್ದ.
undefined
ಈ ಎರಡೂ ವೆಬ್ ಸೈಟ್ ಉಪಯೋಗಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಯುಎಸ್ಎ ನಲ್ಲಿ ಮೈಕ್ರೋಸಾಫ್ಟ್ ಇಂಜಿನಿಯರ್ ಎಂದು ಹೇಳಿ ನಂಬಿಸುತ್ತಿದ್ದ. ಇದಕ್ಕೆ ಆದಂತ ಒಂದು ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ.
ದರ್ಶನ್ ಹೆಸರಿನಲ್ಲಿ ಪೋರ್ಜರಿ ಯತ್ನಕ್ಕೆ ಮೇಜರ್ ಟ್ವಿಸ್ಟ್
ಮೈಸೂರು ಸಂಸ್ಥಾನದ ರಾಜವಂಶಸ್ಥರ ಸಂಬಂಧಿ ಎಂದು ಕೆಲ ಪೋಟೋಗಳನ್ನು ಶೇರ್ ಮಾಡುತ್ತಿದ್ದ. ಅವರ ಕುಟುಂಬದವನು ಅಂತ "siddarth urs" ಎಂಬ ಹೆಸರಿಟ್ಟುಕೊಂಡಿದ್ದ. ಇದೇ ಹೆಸರಿನ ಮೂಲಕ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಹುಡುಗಿಯರ ಜೊತೆ ಚಾಟ್ ಮಾಡ್ತಿದ್ದ. ರಾಜವಂಶಸ್ಥರ ಜೊತೆ ಇರುವ ಯಾವುದೋ ಚಿಕ್ಕ ಹುಡುಗನ ಫೋಟೋ ಕಳಿಸಿ US ಮತ್ತು Spanish ಭಾಷೆಯಲ್ಲಿ ಮಾತನಾಡಿ ಹುಡುಗಿಯರ ಬಳಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ತಿದ್ದ.
ವೈದ್ಯಕೀಯ ಹಾಗೂ ವೈಯುಕ್ತಿಕ ಕಾರಣ ನೀಡಿ ಯುವತಿಯರಿಂದ ಹಣ ಕೀಳುತ್ತಿದ್ದ. ಒಂದೆಲ್ಲ ಮೂರು ಹೆಸರು ಇಟ್ಟುಕೊಂಡಿದ್ದ ಸಿದ್ದಾರ್ಥ್, ಸ್ಯಾಂಡಿ, ವಿನಯ್ ಎಂದು ತನ್ನನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಈತನ ವಿರುದ್ಧ ವೈಟ್ ಫೀಲ್ಡ್ ಸೈಬರ್ ಸ್ಟೇಷನ್ ನಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿ ಮೈಸೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸಿದ್ದಾರ್ಥ್ ನಿಂದ ಒಂದು ಐ ಫೋನ್, ಒಂದು ಆ್ಯಪಲ್ ಐ ಪೋನ್ 12 pro max, ಒಂದು ಸ್ಯಾಮ್ ಸಂಗ್ ನೋಟ್ 9 ಫೋನ್, ಎಸ್ಬಿಐ ಬ್ಯಾಂಕ್ ಡೆಬಿಟ್ ಕಾರ್ಡ್, ಕೊಟಕ್ ಮಹೀಂದ್ರ ಬ್ಯಾಂಕ್ ನ ಡೆಬಿಟ್ ಕಾರ್ಡ್, 2 ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್, 2 ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ವಶಕ್ಕೆ ಪಡೆದುಕೊಳ್ಳಲಾಗಿದೆ.