ಬೆಂಗಳೂರು: ಹೆಂಡ್ತಿ ಕೊಂದವ ಕಟ್ಟಡದಿಂದ ಜಿಗಿದು ಸಾವು..!

By Kannadaprabha News  |  First Published Aug 8, 2024, 11:38 AM IST

ಬೆಂಗಳೂರಿನ ಸಿದ್ದಾಪುರ ನಿವಾಸಿ ತಬ್ರೇಜ್ ಪಾಷಾ ಮೃತ ಆರೋಪಿ. ಆ.2ರಂದು ಬೆಳಗ್ಗೆ ಸುಮಾರು 30ಕ್ಕೆ ಚಾಮರಾಜಪೇಟೆ ಎಂ.ಡಿ.ಬ್ಲಾಕ್‌ನ ಅತ್ತೆ ಮನೆಗೆ ತೆರಳಿ ಅನಾರೋಗ್ಯ ಪೀಡಿತ ಅತ್ತೆಯ ಎದುರೇ ಪತ್ನಿ ಸೈಯಿದಾ ಫಾಜೀಯಾ ಫಾತೀಮಾಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ.


ಬೆಂಗಳೂರು(ಆ.08): ಕೌಟುಂಬಿಕ ವಿಚಾರಕ್ಕೆ ತವರು ಮನೆ ಸೇರಿದ್ದ ಪತ್ನಿಯನ್ನು ಹಾಡ ಗಲೇ ಬರ್ಬರವಾಗಿ ಕೊಲೆ ಮಾಡಿ ಕೋಲಾರದ ಚಿಕ್ಕಮ್ಮನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯು ಪೊಲೀಸರ ಬಂಧನದ ಭೀತಿಯಲ್ಲಿ ತಪ್ಪಿಸಿಕೊ ಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಜಿಗಿದು ಮೃತಪಟ್ಟಿರುವ ನಡೆದಿದೆ.

ಬೆಂಗಳೂರಿನ ಸಿದ್ದಾಪುರ ನಿವಾಸಿ ತಬ್ರೇಜ್ ಪಾಷಾ(37) ಮೃತ ಆರೋಪಿ. ಆ.2ರಂದು ಬೆಳಗ್ಗೆ ಸುಮಾರು 30ಕ್ಕೆ ಚಾಮರಾಜಪೇಟೆ ಎಂ.ಡಿ.ಬ್ಲಾಕ್‌ನ ಅತ್ತೆ ಮನೆಗೆ ತೆರಳಿ ಅನಾರೋಗ್ಯ ಪೀಡಿತ ಅತ್ತೆಯ ಎದುರೇ ಪತ್ನಿ ಸೈಯಿದಾ ಫಾಜೀಯಾ ಫಾತೀಮಾ(34)ಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಚಾಮರಾಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದರು. 

Tap to resize

Latest Videos

ಬೆಂಗಳೂರು: ಬರ್ತ್‌ಡೇ ಖುಷಿಯಲ್ಲಿ ಗಾಂಜಾ ಸೇವಿಸಿ ಬೈಕ್‌ನಲ್ಲಿ ವ್ಹೀಲಿಂಗ್‌..!

ಚಿಕ್ಕಮ್ಮನ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ:

ಮತ್ತೊಂದೆಡೆ ಆರೋಪಿ ಪತ್ನಿ ಕೊಲೆಗೈದ ಬಳಿಕ ಕೋಲಾರಕ್ಕೆ ತೆರಳಿ ಮೂರು ದಿನ ಮಸೀದಿ ವೊಂದರಲ್ಲಿ ಆಶ್ರಯ ಪಡೆದಿದ್ದ. ಬಳಿಕ ಕೋಲಾರದ ಹೊರವಲಯದ ಜೂಹಳ್ಳಿಯ ಚಿಕ್ಕಮ್ಮನಮನೆಯಲ್ಲಿ ತಲೆಮರೆಸಿಕೊಂಡಿದ್ದ. ಈ ನಡುವೆ ಚಾಮರಾಜಪೇಟೆ ಠಾಣೆ ಪೊಲೀತನ್ನನ್ನು ಹುಡುಕಿಕೊಂಡು ಕೋಲಾರಕ್ಕೆ ಬಂದಿರುವ ವಿಚಾರ ತಿಳಿದ ಆರೋಪಿ ತಬ್ರೇಜ್ ಪಾಷಾ, ಬಂಧನದ ಭೀತಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ 12 ಅಡಿ ಎತ್ತರದ ಕಟ್ಟಡದ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. 

ಅಪ್ಪನ ಖಾಸಗಿ ಅಂಗ ಕತ್ತರಿಸಿ ಹತ್ಯೆ ಮಾಡಿದ್ದ ಅಮ್ಮ- ಮರ್ಡರ್‌ ಮಿಸ್ಟ್ರಿ ಬಿಚ್ಚಿಟ್ಟ ಮಗಳು

ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಬ್ಬೇಜ್ ಪಾಷಾನನ್ನು ಸ್ಥಳೀಯರುಕೂಡಲೇ ಆತನನ್ನು ಸಮೀಪದ ಕರೆದೊಯ್ದಿದ್ದಾರೆ. ಆದರೆ, ಗಂಭೀರ ಗಾಯ ಹಾಗೂ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈ ಸಂಬಂಧ ವರದಿ ಬಂದ ಬಳಿಕ ಘಟನೆಗೆ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನಗೆ ಬದುಕಲು ಇಷ್ಟವಿಲ್ಲ: 

ಆರೋಪಿ ಸೆಲ್ಸಿ ವಿಡಿಯೋ ಪತ್ನಿಯ ಕೊಲೆ ಬಳಕ ತಲೆಮರೆಸಿಕೊಂಡಿದ್ದ ಆರೋಪಿ ತಟೇಜ್ ಪಾಷಾ, ಉರ್ದುವಿನಲ್ಲಿ 7 ನಿಮಿ ಷಗಳ ಸೆಲ್ಲಿ ಏಡಿಯೋ ಮಾಡಿ ಪತ್ನಿ ಕೊಲೆಗೆ ಕಾರಣ ಸೇರಿದಂತೆ ಹಲವು ವಿಚಾರಗಳನ್ನು ಮಾತನಾಡಿ ದ್ದಾನೆ. ಸೈಯಿದಾ ಫಾಜೀಯಾ ಫಾತೀಮಾಳನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದೆ. ಆದರೆ ಪತ್ನಿ ಮತ್ತು ಆಕೆಯ ಮನೆಯವರು ನನಗೆ ಸಾಕಷ್ಟು ಅವಮಾನ ಮಾಡಿದರು. ಪತ್ನಿ ಕೂಡ ನನ್ನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು. ಮನೆಗೆ ವಾಪಾಸ್ ಬರುವಂತೆ ಹಲವು ಬಾರಿ ಕೇಳಿಕೊಂಡೂ ಆಕೆ ಬರಲಿಲ್ಲ. ಮನೆಯಲ್ಲಿದ್ದ ಚಿನ್ನಾ ಭರಣಗಳನ್ನು ಸಹ ಆಕೆ ತೆಗೆದುಕೊಂಡು ಹೋಗಿದ್ದಳು. ನಾನು ಮಾಡುತ್ತಿರುವುದು ತಪ್ಪು ಎಂಬುದು ನನಗೆ ಗೊತ್ತು. ಆದರೂ ನನಗೆ ಬದುಕಲು ಇಷ್ಟವಿಲ್ಲ ಎಂದು ತಬ್ರೇಜ್ ಪಾಷಾ ಆ ಸೆಲ್ಸಿ ವಿಡಿಯೋದಲ್ಲಿ ತಿಳಿಸಿದ್ದಾನೆ.

click me!