ನಾಲ್ಕು ಅಂತಸ್ತಿನ ಬಿಲ್ಡಿಂಗ್ ಏರಿ ಮಾನಸಿಕ ಅಸ್ವಸ್ಥನೋರ್ವ ಹುಚ್ಚಾಟ ಮಾಡಿದ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಹಿಂಭಾಗದ ಕಟ್ಟಡದಲ್ಲಿ ನಡೆದಿದೆ.
ಬೆಂಗಳೂರು (ಆ.8): ನಾಲ್ಕು ಅಂತಸ್ತಿನ ಬಿಲ್ಡಿಂಗ್ ಏರಿ ಮಾನಸಿಕ ಅಸ್ವಸ್ಥನೋರ್ವ ಹುಚ್ಚಾಟ ಮಾಡಿದ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಹಿಂಭಾಗದ ಕಟ್ಟಡದಲ್ಲಿ ನಡೆದಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ನಾಲ್ಕಂತಸ್ತಿನ ಕಟ್ಟಡ. ಕಟ್ಟಡ ಮೇಲೆ ನಿಂತು ನಾನು ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿರುವ ಯುವಕ. 'ನನ್ನ ಹೆಸರು ಮಂಜು, ನನ್ನನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದರು. ನಾನು ತುಂಬಾ ಚೆನ್ನಾಗಿ ಓದುತ್ತಿದ್ದೇನೆ..' ನಾನೀಗ ಇಲ್ಲಿಂದ ಹಾರಿ ಸಾಯುತ್ತೇನೆ ಎನ್ನುತ್ತಿರುವ ಯುವಕ. ಯುವಕನ ಹುಚ್ಚಾಟ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಕೆಳಗೆ ಇಳಿಸಲು ಹರಸಾಹಸ ಪಟ್ಟು ಕೊನೆಗೂ ಮನವೊಲಿಸಿ ಕೆಳಗಿಳಿಸಿದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅನಾವರಣಗೊಳ್ಳಲಿದೆ ಅಂಬೇಡ್ಕರ್ ಜೀವನಗಾಥೆ!
ಏನಿದು ಘಟನೆ?
ಮಾನಸಿಕ ಅಸ್ವಸ್ಥನೋರ್ವ ಇಂದು ಬೆಳಗ್ಗೆ 7.30ರ ಸುಮಾರಿಗೆ ನಾಲ್ಕಂತಸ್ತಿನ ಕಟ್ಟಡ ಹತ್ತಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಸ್ಥಳಕ್ಕೆ ಆಗಮಿಸಿದ್ದ ಶೇಷಾದ್ರಿಪುರ ಪೊಲೀಸರು ಎಷ್ಟೇ ಮನವೊಲಿಸಿದರೂ ಹಿಂದೆ ಸರಿಯದೆ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ. ತನ್ನ ಬಳಿಯಿದ್ದ ಮೊಬೈಲ್ ಮುರಿದು ಕೆಳಗೆಸೆದು, ನಾನು ಇಲ್ಲಿಂದ ಕೆಳಗಿಳಿಯಲು ಹೆಂಡತಿ, ತಾಯಿಯನ್ನು ಕರೆಸಿ ಎಂದು ಯುವಕ ಹೈಡ್ರಾಮಾ ಮಾಡಿದ್ದ. ಒಂದು ಕಡೆ ಯುವಕನ ಮನವೊಲಿಸಿ ಇನ್ನೊಂದು ಕಡೆ ಯುವಕನ ರಕ್ಷಣೆಗಾಗಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸಿದ್ಧತೆ ನಡೆಸಲಾಗಿತ್ತು. ಕೊನೆಗೂ ಯುವಕನ ಮನವೊಲಿಸಿ ಕೆಳಗಿಳಿಸಿದ ಪೊಲೀಸರು. ಯುವಕನನ್ನ ಹೊಯ್ಸಳ ವಾಹನದಲ್ಲಿ ಕರೆದೊಯ್ದ ಪೊಲೀಸರು. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.