ಕಾಮಾಕ್ಷಿಪಾಳ್ಯ ನಿವಾಸಿ ಚಂದನ್‌ಗೌಡ ಬಂಧಿತ. ಆರೋಪಿ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಸುಂಕದಕಟ್ಟೆ ಶಾಂತಿಧಾಮ ಜಂಕ್ಷನ್‌ನಲ್ಲಿ ಡಿಯೋ ಸ್ಕೂಟರ್ ನಲ್ಲಿ ವೀಲಿಂಗ್ ಮಾಡಿಕೊಂಡು ಹುಚ್ಚಾಟ ಮಾಡಿದ್ದಾನೆ. ಅಲ್ಲದೆ, ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಬೆಂಗಳೂರು(ಆ.08): ಹುಟ್ಟುಹಬ್ಬದ ಖುಷಿಯಲ್ಲಿ ಗಾಂಜಾ ಸೇವಿಸಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ ಸವಾರನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ನಿವಾಸಿ ಚಂದನ್‌ಗೌಡ (19) ಬಂಧಿತ. ಆರೋಪಿ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಸುಂಕದಕಟ್ಟೆ ಶಾಂತಿಧಾಮ ಜಂಕ್ಷನ್‌ನಲ್ಲಿ ಡಿಯೋ ಸ್ಕೂಟರ್ ನಲ್ಲಿ ವೀಲಿಂಗ್ ಮಾಡಿಕೊಂಡು ಹುಚ್ಚಾಟ ಮಾಡಿದ್ದಾನೆ. ಅಲ್ಲದೆ, ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದೇ ವೇಳೆ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಕಾನ್ ಸ್ಟೇಬಲ್ ಅವಿನಾಶ್‌ಗೂ ಮಧ್ಯದ ಬೆರಳನ್ನು ತೋರಿಸಿ ಮುಂದಕ್ಕೆ ತೆರಳಿದ್ದಾನೆ. ತಕ್ಷಣ ಅವಿನಾಶ್, ಮುಂದಿನ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಶಿವಶಂಕರ್‌ಗೆ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಮಿತಿಮೀರಿದ ಪುಂಡರ ಹಾವಳಿ! ಬೈಕ್ ಹಿಂಬಾಲಿಸಿ ಹೆದ್ದಾರಿ ಉದ್ದಕ್ಕೂ ಯುವತಿಗೆ ಕೀಟಲೆ!
ಗಾಂಜಾ ಸೇವಿಸಿ ವೀಲಿಂಗ್ ಹುಚ್ಚಾಟ:
ಎಎಸ್‌ಐ ಶಿವಶಂಕರ್ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ದ್ವಿಚಕ್ರ ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ. ನಂತರ ಆತನನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಗೆ ಕರೆತಂದುಆತನಮೊಬೈ ಲ್‌ಪರಿಶೀಲಿಸಿದಾಗ, ವೀಲಿಂಗ್ ವಿಡಿಯೋಗಳು ಹಾಗೂ ಮಾದಕವಸ್ತು ಬಗ್ಗೆ ಚಾಟ್ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಣೆ ಮಾಡಿದಾಗ, ಆರೋಪಿಯು ಗಾಂಜಾ ವ್ಯಸನಿಯಾಗಿದ್ದು, ಹುಟ್ಟುಹಬ್ಬದ ಪ್ರಯುಕ್ತ ಗಾಂಜಾ ಸೇವಿಸಿ ಗಾಂಜಾದ ಅಮಲಿನಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡಿದ್ದಾಗಿ ತಪ್ರೊಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲಿಯೂ ಆರೋಪಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.