Crime News: ಮಾಜಿ ಪತ್ನಿ ಕುಟುಂಬದಿಂದ ಕಿರುಕುಳ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

By Suvarna NewsFirst Published Jun 22, 2022, 9:35 PM IST
Highlights

ಮೃತನ ತಂದೆ ದೂರಿನಲ್ಲಿ ತಮ್ಮ ಮಗ ತನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ, ಅದರಲ್ಲಿ ತನ್ನ ಮಾಜಿ ಪತ್ನಿಯ ಸಂಬಂಧಿಕರು ತನ್ನ ಮಗುವನ್ನು ನೋಡದಂತೆ ತಡೆಯುತ್ತಿದ್ದರು ಮತ್ತು ಅವನನ್ನು ಅವಮಾನಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾನೆ ಎಂದು ಹೇಳಿದ್ದಾರೆ

ಪಂಜಾಬ್‌ (ಜೂ. 22): ಪಂಜಾಬ್‌ನ ಲುಧಿಯಾನ ಜಿಲ್ಲೆಯ ಬೆಹ್ಲೋಲ್‌ಪುರ್ ಗ್ರಾಮದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ವಿಷ ಸೇವಿಸಿ ಸಾವನ್ನಪ್ಪಿದ್ದು, ತನ್ನ ಮಾಜಿ ಪತ್ನಿಯ ಕುಟುಂಬ ಸದಸ್ಯರಿಂದ ಅವಮಾನಿತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ನೂರ್ಪುರ್ ಬೇಡಿಯ ರೋಸ್ಡಾ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಮುನ್ನ ಅದನ್ನು ತನ್ನ ಸಹೋದರನಿಗೆ ಕಳುಹಿಸಿದ್ದಾರೆ. 

ವ್ಯಕ್ತಿ ಬೆಹ್ಲೋಲ್ಪುರ್ ಗ್ರಾಮದಲಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿರುವ ತನ್ನ ಮೂರು ವರ್ಷದ ಮಗನನ್ನು ಭೇಟಿಯಾಗಲು ಹೋಗಿದ್ದರು. ಆದರೆ ಮಗನನ್ನು ಭೇಟಿಯಾಗಲು ಕುಟುಂಬ ಸದಸ್ಯರು ಅವಕಾಶ ನೀಡಿಲ್ಲ.  ಅವರ ಮಾಜಿ ಪತ್ನಿ ಎರಡು ತಿಂಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು. ಈ ಸಂಬಂಧ ವ್ಯಕ್ತಿ ತಂದೆ,  ಮಾಜಿ ಪತ್ನಿ ತಂದೆ ಸೋಹನ್ ಸಿಂಗ್, ಸೋಹನ್ ಸಿಂಗ್ ಅವರ ಪತ್ನಿ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗಾಗಿ ಮಾಚಿವಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ವ್ಯಕ್ತಿ ತಂದೆ ತನ್ನ ದೂರಿನಲ್ಲಿ ತನ್ನ ಮಗ ಬೆಹ್ಲೋಲ್‌ಪುರದ ಮಹಿಳೆಯನ್ನು 2018 ರಲ್ಲಿ ಮದುವೆಯಾಗಿದ್ದಾನೆ ಮತ್ತು ಮೂರು ವರ್ಷದ ಮಗನನ್ನು ಹೊಂದಿದ್ದಾನೆ ಎಂದು ಹೇಳಿದ್ದಾರೆ. ಆದರೆ ಸಂಬಂಧ ಸರಿಹೊಗದ ಹಿನ್ನೆಲೆಯಲ್ಲಿ ದಂಪತಿ ಒಂದು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದರು. ತಮ್ಮ ಮಗನನ್ನು ನೋಡಲು ಬೆಹ್ಲೋಲ್‌ಪುರಕ್ಕೆ ಮಹ ಹೋಗುತ್ತಿದ್ದ  ಎಂದು ಅವರು ಹೇಳಿದ್ದಾರೆ.

ಸೋಮವಾರ ತನ್ನ ಮಗ ಬೆಹ್ಲೋಲ್‌ಪುರಕ್ಕೆ ಹೋಗಿದ್ದ ಎಂದು  ತಂದೆ ತಿಳಿಸಿದ್ದಾರೆ. ತನ್ನ ಮಗ ತನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ, ಅದರಲ್ಲಿ ತನ್ನ ಮಾಜಿ ಪತ್ನಿಯ ಸಂಬಂಧಿಕರು ತನ್ನ ಮಗುವನ್ನು ನೋಡದಂತೆ ತಡೆದಿದ್ದುಅವನನ್ನು ಅವಮಾನಿಸಿದ್ದಾರೆ ಎಂದು ಉಲ್ಲೇಖಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿ: 70ನೇ ವಯಸ್ಸಲ್ಲಿ ಮತ್ತೆ ಮದುವೆಯಾಗಲು ಮುಂದಾದ ವೈದ್ಯ: ಹನಿಟ್ರ್ಯಾಪ್‌ನಲ್ಲಿ 1 ಕೋಟಿ 80 ಲಕ್ಷ ಧೋಖಾ

ವೀಡಿಯೊದಲ್ಲಿ ವ್ಯಕ್ತಿ ತನ್ನ ಮಾಜಿ ಪತ್ನಿ ತನ್ನೊಂದಿಗೆ ವಾಸಿಸಲು ಬಯಸಿದ್ದಳು ಆದರೆ ತನ್ನ ತಾಯಿಯ ಕಡೆಯ ಒತ್ತಡದಿಂದ ಅವಳು ಅವನಿಗೆ ವಿಚ್ಛೇದನ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ. ವೀಡಿಯೊವನ್ನು ಸ್ವೀಕರಿಸಿದ ನಂತರ, ಅವರು ಬೆಹ್ಲೋಲ್‌ಪುರಕ್ಕೆ ಧಾವಿಸಿದರು ಮತ್ತು ಪಿಎಸ್‌ಪಿಸಿಎಲ್ ಕಚೇರಿಯ ಬಳಿ ಅವರ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು ಎಂದು ತಂದೆ ಹೇಳಿದ್ದಾರೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಏತನ್ಮಧ್ಯೆ, ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಮಚ್ಚಿವಾರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಬ್‌ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ

click me!