ಬೆಳದಿಂಗಳ ಬಾಲೆ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರು ನಿವಾಸಿ

Published : Jun 22, 2022, 08:02 PM IST
ಬೆಳದಿಂಗಳ ಬಾಲೆ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರು ನಿವಾಸಿ

ಸಾರಾಂಶ

* ಫೇಸ್ ಬುಕ್ ಫ್ರೆಂಡ್ಸ್ ಶಿಪ್ ಮಾಡೋ‌ ಮುನ್ನ ಎಚ್ಚರ ಎಚ್ಚರ..! * ಬೆಳದಿಂಗಳ ಬಾಲೆ ನಂಬಿದ್ದಕ್ಕೆ 35 ಲಕ್ಷ ಉಂಡೆನಾಮ * ಬೆಂಗಳೂರಿನ ನಿವಾಸಿಗೆ ಮೋಸ ಮಾಡಿದ ವಿದೇಶಿ ಮಹಿಳೆ

ಬೆಂಗಳೂರು, (ಜೂನ್.22) : ಮುಖ ನೋಡೆ ಪ್ರೀತಿ - ಫ್ರೆಂಡ್​ಶಿಪ್ ಮಾಡಿ ಅದನ್ನೇ ನಂಬಿ ಮೋಸ ಹೋಗಿರೋ ಘಟನೆಗಳ ಬಗ್ಗೆ ಆಗಾಗ ಕೇಳುತ್ತಲೇ ಇರ್ತೀರಾ..! ಆದ್ರೂ ಜನರು ಪದೇ ಪದೇ ಫೇಸ್​ಬುಕ್​ ಫ್ರೆಂಡ್​, ಲವ್​ ಅಂತ ನಂಬಿಕೊಂಡು ಮತ್ತೆ ಮತ್ತೆ ವಂಚನೆಗೆ ಬಲಿಯಾಗುತ್ತಲೇ ಇದ್ದಾರೆ. ಇಲ್ಲೊಬ್ಬರು ವ್ಯಕ್ತಿ ಫೇಸ್​ಬುಕ್ನಿಂದಾದ ಮಹಿಳೆ ಜತೆಗಿನ ಪರಿಚಯಕ್ಕೆ 35 ಲಕ್ಷ ಬೆಲೆ ತೆತ್ತಿದ್ದಾರೆ. 

ಹೌದು... ಬೆಂಗಳೂರಿನ ನಿವಾಸಿಯಾಗಿರುವ 48 ವರ್ಷದ ವಿನ್ಸೆಂಟ್ ಎಂಬುವರು ಬಜಾಜ್​ ಫೈನಾನ್ಸ್​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ. 

ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ

ನ್ಯಾನ್ಸಿ ವಿಲಿಯಂ ಫೇಸ್​ಬುಕ್​ನಲ್ಲಿ ಮೊದಲಿಗೆ ವಿನ್ಸೆಂಟ್​ಗೆ ಫ್ರೆಂಡ್​ ರಿಕ್ವೆಸ್​ ಕಳಿಸ್ತಾಳೆ. ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಾಳೆ. ಈ ಸ್ನೇಹ ಫೋನ್​ ನಂಬರ್​ ಎಕ್ಸ್​ಚೇಂಜ್​ ಮಾಡಿಕೊಳ್ಳುವಲ್ಲಿವರೆಗೂ ಹೋಗುತ್ತೆ. ನಂತ್ರ ವಾಟ್ಸ್​ಆ್ಯಪ್​ನಲ್ಲಿ ಚಾಟಿಂಗ್​, ಕಾಲಿಂಗ್​ ಎಲ್ಲ ನಡೆಯುತ್ತೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್​ ಆರಂಭಿಸುವವರೆಗೂ ಹೋಗುತ್ತೆ. ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್​ ಮಾಡೋದಾಗಿ ನಂಬಿಸಿ, ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳುತ್ತಾಳೆ. 

ವಿದೇಶದಲ್ಲಿ ಜ್ಯುವೆಲರಿ ಡೀಲರ್​ ಆಗಿರುವ ನ್ಯಾನ್ಸಿ ಮಾತಿಗೆ ಮರುಳಾದ ವಿನ್ಸೆಂಟ್​ ಹಂತ ಹಂತವಾಗಿ 35 ಲಕ್ಷ ಕೊಡುತ್ತಾನೆ. ಆದ್ರೆ ನ್ಯಾನ್ಸಿ ಮಾತ್ರ ಬೆಂಗಳೂರಿಗೆ ಹೋಗಲಿ, ಭಾರತಕ್ಕೂ ಬರೋದಿಲ್ಲ. ಕಡೆಗೆ ಫೇಸ್​ ಬುಕ್​ ಖಾತೆ ಡಿಲೀಟ್​ ಮಾಡಿ ನಾಪತ್ತೆಯಾಗ್ತಾಳೆ. ಮಹಿಳೆಯ ಬಣ್ಣದ ಮಾತಿಗೆ ಮರುಳಾಗಿದ್ದ ವಿನ್ಸೆಂಟ್​ ಈಗ ವಂಚಕಿಯ ವಿರುದ್ಧ ಪೂರ್ವ ವಿಭಾಗದ ಸೆನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. 

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಸೆನ್​ ಪೊಲೀಸರು ಆರೋಪಿ ನ್ಯಾನ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವರ್ಚುವಲ್​ ಫ್ರೆಂಡ್​ಶಿಪ್ ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಇದ್ರೆ ಒಳ್ಳೆಯದು. ಇಲ್ಲವಾದ್ರೆ ಹಣದ ಜೊತೆಗೆ ಎಷ್ಟೋ ಸಲ ಜೀವನದಲ್ಲಿ ಮರೆಯಲಾಗದ ಕಹಿ ಅನುಭವಗಳು ಹುಡುಕಿ ಬರುತ್ತವೆ ಎಚ್ಚರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ವಿಜಯಪುರದಲ್ಲಿ ಐದು ಖಾಸಗಿ ಬಸ್‌ಗಳ ಸರಣಿ ಅಪಘಾತ; ತಪ್ಪಿದ ಅನಾಹುತ!
ಭದ್ರಾವತಿಯಲ್ಲಿ ದಂಪತಿಗಳ ಅನುಮಾನಾಸ್ಪದ ಸಾವು: ವೈದ್ಯರು ನೀಡಿದ ಇಂಜೆಕ್ಷನ್ ಪ್ರಾಣಕ್ಕೆ ಕುತ್ತು ತಂದಿತೇ?