ಬಾದಾಮಿ: ಹೆಂಡತಿ ಮನೆಗೆ ಬರಲು ನಿರಾಕರಣೆ, ಪತಿ ಆತ್ಮಹತ್ಯೆ

By Kannadaprabha News  |  First Published May 2, 2021, 8:41 AM IST

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂಕನೇರಿ ಗ್ರಾಮದಲ್ಲಿ ನಡೆದ ಘಟನೆ| ಗಂಡನ ಮನೆಯ ಹಲಕುರ್ಕಿ ಗ್ರಾಮಕ್ಕೆ ಬರಲು ನಿರಾಕರಿಸಿದ ಹೆಂಡತಿ| ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಗಂಡ| ಈ ಕುರಿತು ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 


ಬಾದಾಮಿ(ಮೇ.02): ಗಂಡ ಕರೆಯಲು ಹೋದರೂ ತವರು ಮನೆಯಿಂದ ಗಂಡನ ಮನೆಗೆ ಬರಲು ನಿರಾಕರಣೆ ಮಾಡಿದ್ದ ಕಾರಣ ಪತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಕನೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ತಾಲೂಕಿನ ಹಲಕುರ್ಕಿ ಗ್ರಾಮದ ಯಮನಪ್ಪ ಹೇಮಣ್ಣ ಮಮಟಗೇರಿ(38) ಆತ್ಮಹತ್ಯೆಗೆ ಶರಣಾದ ಪತಿ. ತನ್ನ ಹೆಂಡತಿ ತವರು ಮನೆಗೆ ಬಂಕನೇರಿ ಗ್ರಾಮಕ್ಕೆ ಹೋಗಿದ್ದಳು. ಪತಿ ಯಮನಪ್ಪ ತನ್ನ ಹೆಂಡತಿಯನ್ನು ಮರಳಿ ತಮ್ಮ ಹಲಕುರ್ಕಿ ಗ್ರಾಮಕ್ಕೆ ಕರೆದುಕೊಂಡು ಬರಲು ಹೋಗಿದ್ದನು. 

Tap to resize

Latest Videos

ಪ್ರೈಮರಿಯಲ್ಲಿ ಅಟ್ರಾಕ್ಷನ್, ಹೈಸ್ಕೂಲ್‌ನಲ್ಲಿ ಪ್ರೇಮ: ಟ್ರ್ಯಾಜಿಡಿ ಲವ್ ಸ್ಟೋರಿ

ಹೆಂಡತಿ ಗಂಡನ ಮನೆಯ ಹಲಕುರ್ಕಿ ಗ್ರಾಮಕ್ಕೆ ಬರಲು ನಿರಾಕರಿಸಿದ ಕಾರಣ ಪತಿ ಯಮನಪ್ಪ ಹೊರವಲಯದ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!