* ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಕಾರು ಚಾಲಕನ ತುಟಿ ಕಟ್
* ಖ್ಯಾತ ಉದ್ಯಮಿ ಕಾರು ಚಾಲಕನ ತುಟಿ ಕಟ್
* ಹಲ್ಲಿನಿಂದ ತುಟಿಯನ್ನ ಸಂಪೂರ್ಣ ಕತ್ತರಿಸಿಬಿಟ್ಟ
* ಸಂಜಯನಗರ ಠಾಣಾ ವ್ಯಾಪ್ತಿಯ ಡಾಲರ್ಸ್ ಕಾಲೋನಿಯಲ್ಲಿ ಘಟನೆ
ಬೆಂಗಳೂರು(ಡಿ. 27) ಕ್ಷುಲ್ಲಕ ಕಾರಣಕ್ಕೆ ಹಲ್ಲೆಯಾಗುವ(Crime News)ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಕೊಲೆ (Murder) ನಡೆದು ಹೋದ ಉದಾಹರಣೆಗಳು ಇವೆ. ಇದು ಅಂಥದ್ದೇ ಒಂದು ಪ್ರಕರಣ. ಕ್ಷುಲ್ಲಕ ಕಾರಣಕ್ಕೆ ಇಲ್ಲೊಬ್ಬ ತುಟಿ ಕಳೆದುಕೊಂಡಿದ್ದಾನೆ.
ಉದ್ಯಮಿ ಕಾರು ಚಾಲಕ , ಅದೇ ಮನೆಯಲ್ಲಿ ಕೆಲಸ ಮಾಡುವವನ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಚಾಲಕ ಸಂತೋಷ್ ಹಾಗೂ ಪಿಓಪಿ ಕೆಲಸ ಮಾಡುವ ರಾಜೇಶ್ ಶ್ಯಾಂ ಎಂಬುವನ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ನಿದ್ರೆ ಮಾಡುತ್ತಿದ್ದ ವಾಚ್ ಮ್ಯಾನ್ ಈಶ್ವರಪ್ಪ ಎಂಬುವರ ಮೇಲೆ ನೀರು ರಾಜೇಶ್ ಶ್ಯಾಂ ನೀರು ಹಾಕಿದ್ದ.
undefined
ಕಳೆದ 6 ತಿಂಗಳಿನಿಂದ ಕೃಷ್ಣ ಅವರ ಮನೆಯಲ್ಲಿ ಸಂತೋಷ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಡಿ.22ರಂದು ರಾತ್ರಿ 9.30ರಲ್ಲಿ ಸಂತೋಷ್, ರಾಜೇಶ್ ಶ್ಯಾಮ್ ಹಾಗೂ ವಾಚ್‌ಮ್ಯಾನ್ ಈಶ್ವರಪ್ಪ ಊಟ ಮಾಡಿ ಮಲಗಿದ್ದರು. ಆ ವೇಳೆ ಈಶ್ವರಪ್ಪ ಮೇಲೆ ರಾಜೇಶ್ ಶ್ಯಾಮ್ ನೀರು ಚೆಲ್ಲಿ ತೊಂದರೆ ಕೊಡುತ್ತಿದ್ದ.
ಮಲಗಿರುವವರ ಮೇಲೆ ನೀರು ಚೆಲ್ಲಿ ಏಕೆ ತೊಂದರೆ ಕೊಡುತ್ತಿದ್ದೀಯಾ ಎಂದು ಸಂತೋಷ್ ಆತನನ್ನು ಪ್ರಶ್ನಿಸಿದ್ದ. ಇದರಿಂದ ಆಕ್ರೋಶಗೊಂಡ ರಾಜೇಶ್ ಶ್ಯಾಮ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂತೋಷ್ ಜತೆಗೆ ಜಗಳ ಮಾಡಿದ್ದ.
Robbery: ದೊಡ್ಡಧಿಕಾರಿ ಮನೆ ಮಹಿಳೆಯರ ಸೀರಿಯಲ್ ಹುಚ್ಚು, ದರೋಡೆ ನಡೆದಿದ್ದು ಗೊತ್ತೆ ಆಗಲಿಲ್ಲ!
ಇಬ್ಬರು ಕೈಕೈ ಮಿಲಾಯಿಸಿದ್ದು ರಾಜೇಶ್ ಹಲ್ಲಿನಿಂದ ಸಂತೋಷ್ ತುಟಿ ಕತ್ತರಿಸಿದ್ದಾನೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜೇಶ್ ಶ್ಯಾಂ ಬಂಧಿಸಲಾಗಿದೆ.
ಕರೆಯಿಂದ ಕಂಗಾಲಾಗಿದ್ದ ಪೊಲೀಸರು: ಬೆಂಗಳೂರು ಪೊಲೀಸರಿಗೆ (Bengaluru Police) ಅದೊಂದು ಪೋನ್ ಕರೆ ತಲೆಬಿಸಿ ತಂದಿತ್ತು. ಇದೊಂದು ರೀತಿಯ ಸಿನಿಮೀಯ ಪ್ರಕರಣ.. ಗೊಂದಲದ ಪ್ರಕರಣ . ಪೊಲೀಸರಿಗೆ ಟೆನ್ಷನ್ ತರಿಸಿತು . 112 ಗೆ ಬಂದ ಅದೊಂದು ಕಿಡ್ನಾಪ್ (Kidnap) ಕರೆ. ರಾತ್ರಿ 11.50 ಕ್ಕೆ ಐದು ಜನರ ತಂಡ ಓಮಿನಿಯಲ್ಲಿ ಬಲವಂತವಾಗಿ ಯುವಕನನ್ನ ಕರೆದೊಯ್ದಿದ್ದಾರೆ ಎಂಬ ದೂರು ಬಂದಿತ್ತು. ಸ್ಥಳೀಯರು ಕರೆ ಮಾಡಿ ತಿಳಿಸಿದ್ದರು.
ತಕ್ಷಣವೇ ಕಾರ್ಯನಿರತರಾದ ಕೆ ಆರ್ ಪುರ (KR Pura) ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸಿಸಿಟಿವಿ (CCTV)ಪರಿಶೀಲಿಸಿದ್ದಾರೆ. ಇಡೀ ಘಟನೆ ಕಿಡ್ನಾಪ್ ಮಾದರಿಯಲ್ಲೇ ಇದ್ದಿದ್ದು ಗೊತ್ತಾಗಿದೆ. ಯುವಕನನ್ನು ಕರೆದೊಯ್ದ ಓಮಿನಿ ಕಾರು ನಂಬರ್ ಟ್ರೇಸ್ ಮಾಡಿದ್ದಾರೆ. ನಂತರ ಕಾರ್ ಎಲ್ಲಿಯದ್ದು ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಪೊಲೀಸರೇ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಕಾರಿನಲ್ಲಿ ಎರಡು ತಿಂಗಳ ಹಿಂದೆ ಓರ್ವ ಯುವಕನನ್ನು ಬಲವಂತವಾಗಿ ಕರೆದೊಯ್ದಿದ್ದರು ಎಂಬ ಮಾಹಿತಿಯೂ ಗೊತ್ತಾಗಿದೆ.
ಕಿಡ್ನಾಪ್ ಆಗಿದೇ ಅಂತಲೇ ತಲೆ ಕೆಡಿಸಿಕೊಂಡು ಹುಡುಕಾಡಿದ್ದ ಪೊಲೀಸರು ಸುಮ್ಮನಾಗಿದ್ದಾರೆ. ಇದು ಹೊಸಕೋಟೆ ಬಳಿಯ ರಿಹ್ಯಾಬ್ಲಿಟೇಶನ್ ಸೆಂಟರ್ ಒಂದರ ಕಾರು ಅನ್ನೋದು ಗೊತ್ತಾಗಿದೆ. ಘಟನೆಯ ಬಗ್ಗೆ ರಿಹ್ಯಾಬ್ಲಿಟೇಶನ್ ಸೆಂಟರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
35 ವರ್ಷದ ಯುವಕ ಕುಡಿತದ ಚಟಕ್ಕೆ ಬಿದ್ದಿದ್ದ. ಹಲವು ಬಾರಿ ಮನೆಗೂ ಬರ್ತಾ ಇರ್ಲಿಲ್ಲ. ರಿಹ್ಯಾಬ್ಲಿಟೇಶನ್ ಸೆಂಟರ್ ಗೆ ಕಳಿಸುವ ನಿರ್ಧಾರವನ್ನು ಕುಟುಂಬದವರು ಮಾಡಿದ್ದರು. ಹಲವು ಬಾರಿ ಪ್ರಯತ್ನಿಸಿದ್ರು ತಪ್ಪಿಸಿಕೊಂಡು ಹೋಗಿಬಿಡ್ತಿದ್ದ. ಯುವಕನನ್ನ ಕುಟುಂಬಸ್ಥರೇ ಸೇರಿ ಚಿಕಿತ್ಸೆಗೆ ಕಳಿಸುವ ಪ್ಲಾನ್ ಮಾಡಿದ್ದರು. ಎಷ್ಟೇ ಮಾಡಿದ್ದರೂ ಯುವಕ ಕೈಗೆ ಸಿಗುತ್ತಿರಲಿಲ್ಲ. ಈ ಬಾರಿ ಆತನನ್ನ ಬಲವಂತವಾಗಿ ಓಮಿನಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ನೋಡುಗರಿಗೆ ಇದು ಕಿಡ್ನಾಪ್ ಮಾದರಿಯಲ್ಲೇ ಕಂಡಿತ್ತು. ಸ್ಥಳೀಯರು ಭಯಬಿದ್ದು ಕರೆ ಮಾಡಿದ್ದಾರೆ.