ಅಬ್ಬಾ ಹಣಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ: ಬೆಕ್ಕಿನ ಮರಿಗೆ ಬಣ್ಣ ಹಚ್ಚಿ ಹುಲಿಯೆಂದು ಮಾರಲೆತ್ನಿಸಿದವ ಅಂದರ್

Published : Sep 12, 2022, 12:45 PM ISTUpdated : Sep 12, 2022, 12:47 PM IST
ಅಬ್ಬಾ ಹಣಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ: ಬೆಕ್ಕಿನ ಮರಿಗೆ ಬಣ್ಣ ಹಚ್ಚಿ ಹುಲಿಯೆಂದು ಮಾರಲೆತ್ನಿಸಿದವ ಅಂದರ್

ಸಾರಾಂಶ

ಮೈ ಬಾಗಿಸಿ ದುಡಿಯಲು ಬಾರದ ಖದೀಮನೋರ್ವ ಬೆಕ್ಕಿನ ಮರಿಗೆ ಬಣ್ಣ ಹಚ್ಚಿ, ಹುಲಿ ಎಂದು ಮಾರಲೆತ್ನಿಸಿದ್ದಾನೆ. ಪರಿಣಾಮ ಈಗ ಪೊಲೀಸರ ಬಲೆಗೆ ಬಿದ್ದು, ಕಂಬಿ ಎಣಿಸುತ್ತಿದ್ದಾನೆ.

ಕೆಲವರು ಹಣಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಮೈ ಬಾಗಿಸಿ ದುಡಿಯಲು ಬಾರದ ಖದೀಮನೋರ್ವ ಬೆಕ್ಕಿನ ಮರಿಗೆ ಬಣ್ಣ ಹಚ್ಚಿ, ಹುಲಿ ಎಂದು ಮಾರಲೆತ್ನಿಸಿದ್ದಾನೆ. ಪರಿಣಾಮ ಈಗ ಪೊಲೀಸರ ಬಲೆಗೆ ಬಿದ್ದು, ಕಂಬಿ ಎಣಿಸುತ್ತಿದ್ದಾನೆ. ತಮಿಳುನಾಡಿನ ತಿರುವಣ್ಣಮಲೈ ಸಮೀಪದ ಗ್ರಾಮವೊಂದರ ನಿವಾಸಿಯಾದ 24 ವರ್ಷದ ಪಾರ್ಥಿಬನ್ (Parthiban) ಬಂಧಿತ ವ್ಯಕ್ತಿ. ಈತನನ್ನು ಕೇರಳದ ಇಡುಕ್ಕಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಮಾರಾಟಕ್ಕಿಳಿದಿದ್ದ. 


ಕೆಲಸ ಇಲ್ಲದ ಶಿಲ್ಪಿ ಮಗುವಿನ ... ಕೆತ್ತಿದ ಎಂಬ ಗಾದೆ ಮಾತಿದೆ ಅದರಂತೆ, ಕೆಲಸ ಇಲ್ಲದೇ ಖಾಲಿ ಕುಳಿತಿದ್ದ ಈತನಿಗೆ ಸುಲಭದಲ್ಲಿ ದುಡ್ಡು ಮಾಡುವ ಯೋಜನೆ ಹೊಳೆದಿದೆ. ಅದರಂತೆ ಈತ ಮನೆಯಲ್ಲಿದ್ದ ಮೂರು ಆಗಷ್ಟೇ ಕಣ್ಣು ಬಿಟ್ಟಿದ ಬೆಕ್ಕಿನ ಮರಿಗಳಿಗೆ ಕುಳಿತುಕೊಂಡು ಬಣ್ಣ ಹಚ್ಚಲು ಶುರು ಮಾಡಿದ್ದ. ಬಳಿಕ ಅವುಗಳ ಫೋಟೋವನ್ನು (Photo) ತೆಗೆದು ವಾಟ್ಸಪ್‌ನಲ್ಲಿ ಹರಿಬಿಟ್ಟಿದ್ದಾನೆ. ಮೂರು ತಿಂಗಳ ಪ್ರಾಯದ ಮೂರು ಹುಲಿಮರಿಗಳು (Tiger cube) ಮಾರಾಟಕ್ಕಿವೆ ಎಂದು ಆತ ವಾಟ್ಸಾಪ್‌ನಲ್ಲಿ (Whatsapp) ಈ ಬೆಕ್ಕಿನ ಮರಿಗಳ ಫೋಟೋಗಳನ್ನು ಹಾಕಿಕೊಂಡಿದ್ದ.  

Belagavi: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಅಲ್ಲದೇ ಪ್ರತಿ ಬೆಕ್ಕಿನ ಮರಿಗೂ ಈತ 25 ಲಕ್ಷ ರೂಪಾಯಿ ದರ ನಿಗದಿಪಡಿಸಿದ್ದ. ಯಾರಿಗಾದರು ಹುಲಿ ಮರಿ ಬೇಕಿದ್ದಲ್ಲಿ ಖರೀದಿದಾರರ ಮನೆಗೆ ತಲುಪಿಸುವುದಾಗಿಯೂ ಆತ ಹೇಳಿದ್ದ. ಅಲ್ಲದೇ ಹುಲಿ ಮರಿಗಳಿಗೆ ಸ್ಟೀಲ್ ಬೌಲ್‌ನಲ್ಲಿ ಆಹಾರ ತಿನ್ನಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಈ ಖದೀಮನ ಬೆನ್ನು ಬಿದ್ದಿದ್ದರು. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಪಾರ್ಥಿಬನ್ ನಾಪತ್ತೆಯಾಗಿದ್ದ. ಈ ವೇಳೆ ಅರಣ್ಯ ಸಿಬ್ಬಂದಿ ಅತನ ಮನೆಗೆ ಬಂದು ವಿಚಾರಿಸಿದಾಗ ಆತ ಬೆಕ್ಕಿನ ಮರಿಗಳಿಗೆ ಬಣ್ಣ ಹಚ್ಚಿ ಮಾರಲೆತ್ನಿಸಿದ್ದು ತಿಳಿದು ಬಂದಿದೆ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆಗಳಡಿ ಜಾಗ ಕೊಟ್ಟ ಕೋಳಿ: ಫೋಟೋ ವೈರಲ್
ಈ ಹಿಂದೆಯೂ ಈತ ಇದೇ ರೀತಿಯ ಕಿತಾಪತಿಯಲ್ಲಿ ತೊಡಗಿದ್ದ. ಕಳೆದ ತಿಂಗಳಷ್ಟೇ ಈತನನ್ನು ನಕ್ಷತ್ರ ಆಮೆಗಳ ಕಳ್ಳಸಾಗಣೆ (smuggling) ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ ಬಿಡುಗಡೆಯಾಗಿ ಹೊರಗೆ ಬಂದ ಈತ ತನ್ನ ಹಳೇ ಚಾಳಿ ಮುಂದುವರಿಸಿದ್ದ. 

ಅರಣ್ಯ ವಸ್ತುಗಳು ಹಾಗೂ ವನ್ಯಜೀವಿ ಕಳ್ಳಸಾಗಣೆ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಕಠಿಣ ಶಿಕ್ಷೆ ಇದೆ. ಕಳೆದ ಜನವರಿಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಕಳ್ಳ ಸಾಗಣೆ ಜಾಲವನ್ನು ಏರ್‌ಪೋರ್ಟ್‌ನ ಕಸ್ಟಮ್ಸ್‌ ಅಧಿಕಾರಿಗಳು ಬೇಧಿಸಿದ್ದು, ಲಕ್ಷಾಂತರ ರೂಪಾಯಿ ಮೊತ್ತದ ಕಡಲಾಮೆ ಅಥವಾ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಿದ್ದರು. ಒಟ್ಟು 1364 ಜೀವಂತ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಲಾಗಿತ್ತು. ಬಿಳಿ ಬಣ್ಣದ ಥರ್ಮಕೋಲ್‌ ಬಾಕ್ಸ್‌ಗಳಲ್ಲಿ ಇವುಗಳನ್ನು ತುಂಬಿಡಲಾಗಿತ್ತು. ಇದನ್ನು ತೆರೆದು ನೋಡಿದ ಕಸ್ಟಮ್ ಅಧಿಕಾರಿಗಳು ಇಷ್ಟು ಪ್ರಮಾಣದ ನಕ್ಷತ್ರ ಆಮೆಗಳನ್ನು ನೋಡಿ ಅಚ್ಚರಿ ಗೊಂಡಿದ್ದರು. ಈ ನಕ್ಷತ್ರ ಆಮೆಗಳನ್ನು 230  ಕಿ.ಲೋ ತೂಕದ ಜೀವಂತ ಏಡಿಗಳು ಎಂದು ಮೊದಲಿಗೆ ಹೇಳಲಾಗಿತ್ತು. 

ಜನವರಿ  4 ರಂದು ಚೆನ್ನೈ(Chennai) ಏರ್‌ ಕರ್ಗೋ ಕಸ್ಟಮ್ಸ್‌  ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದ ಸಮೀಪವಿರುವ ಮೀನಂಬಾಕ್ಕಂ (Meenambakkam) ನಲ್ಲಿರುವ ಏರ್ ಕಾರ್ಗೋ ರಫ್ತು ಶೆಡ್‌ನಲ್ಲಿ ವನ್ಯಜೀವಿ ಪ್ರಭೇದಗಳನ್ನು ಹೊಂದಿರುವ ಡಬ್ಬಿಗಳಿರುವ ಬಗ್ಗೆ ಶಂಕಿಸಿ ಅವುಗಳ ರವಾನೆಯನ್ನು ತಡೆದಿದ್ದಾರೆ. ಈ ನಕ್ಷತ್ರ ಆಮೆಗಳನ್ನು ಮಲೇಷ್ಯಾಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ