Bengaluru: ವಿಡಿಯೋ ಕಾಲ್‌ನಲ್ಲಿ ಸಹೋದ್ಯೋಗಿ ಆತನ ಹೆಂಡತಿ ತೋರಿಸಿಲ್ಲ ಎಂದು ಹೊಟ್ಟೆಗೆ ಇರಿತ: ಆರೋಪಿ ಬಂಧನ

By Govindaraj S  |  First Published Feb 2, 2023, 9:45 AM IST

ವಿಡಿಯೋ ಕಾಲ್​ನಲ್ಲಿ ಪತ್ನಿ ಮುಖ ತೋರಿಸದ ಸಹೋದ್ಯೋಗಿಗೆ ಕತ್ತರಿಯಿಂದ ಇರಿದ ಘಟನೆ ಬೆಂಗಳೂರಿನ ಹೆಚ್​​​ಎಸ್​ಆರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುರೇಶ್ ಚಾಕು ಇರಿದ ಆರೋಪಿ.


ಬೆಂಗಳೂರು (ಫೆ.02): ವಿಡಿಯೋ ಕಾಲ್​ನಲ್ಲಿ ಪತ್ನಿ ಮುಖ ತೋರಿಸದ ಸಹೋದ್ಯೋಗಿಗೆ ಕತ್ತರಿಯಿಂದ ಇರಿದ ಘಟನೆ ಬೆಂಗಳೂರಿನ ಹೆಚ್​​​ಎಸ್​ಆರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುರೇಶ್ ಚಾಕು ಇರಿದ ಆರೋಪಿ. ರಾಜೇಶ್ ಮಿಶ್ರಾ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸುರೇಶ್ ಮತ್ತು ರಾಜೇಶ್ ಮಿಶ್ರಾ ಹೆಚ್​​ಎಸ್​​ಆರ್​ ಲೇಔಟ್​​ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಜೇಶ್ ಮಿಶ್ರಾ ಫೋನ್​ನಲ್ಲಿ ಪತ್ನಿ ಜೊತೆ ಮಾತನಾಡುತ್ತಿದ್ದ. 

ಈ ವೇಳೆ ಅಲ್ಲಿಗೆ ಬಂದ ಸುರೇಶ್ ಪತ್ನಿ ಜೊತೆ ಮಾತನಾಡುತ್ತಿದ್ದೀಯಾ? ವಿಡಿಯೋ ಕಾಲ್​ ಮಾಡು. ನಿನ್ನ ಹೆಂಡ್ತಿಯನ್ನು ನೋಡಬೇಕು ಎಂದು ಹೇಳಿದ್ದಾನೆ. ತನ್ನ ಹೆಂಡತಿಯನ್ನು ಈತನಿಗೇಕೆ ತೋರಿಸಬೇಕೆಂದು ಶುರುವಾದ ಗಲಾಟೆಯಲ್ಲಿ ಸುರೇಶ್​ ಅಂಗಡಿಯಲ್ಲಿದ್ದ ಕತ್ತರಿಯಿಂದ ರಾಜೇಶ್ ಹೊಟ್ಟೆಗೆ ಇರಿದಿದ್ದಾನೆ. ಸದ್ಯ ಹೆಚ್​​​ಎಸ್​ಆರ್​ ಲೇಔಟ್ ಠಾಣೆ ಪೊಲೀಸರು ಸುರೇಶ್‌ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.

Tap to resize

Latest Videos

ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮಹೇಂದ್ರ ನಾಯಕ್!

ಲೋಕಾಯುಕ್ತ ದಾಳಿ ಇಬ್ಬರ ಬಂಧನ: ಲೋಕಾಯುಕ್ತ ಪೊಲೀಸರು ಬುಧವಾರ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ್ದು, ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ರಾಣಿಬೆನ್ನೂರು ಗ್ರಾಮೀಣ ಠಾಣೆ ಪೊಲೀಸ್‌ ಪೇದೆ ಹಾಗೂ ಸವಣೂರು ಪುರಸಭೆ ಕರವಸೂಲಿಗಾರನನ್ನು ಬಂಧಿಸಿದ್ದಾರೆ. ಸವಣೂರು ಪುರಸಭೆಯ ಕರವಸೂಲಿಗಾರ ಸುನೀಲ್‌ ಪೂಜಾರ ಹಾಗೂ ರಾಣಿಬೆನ್ನೂರು ಪೊಲೀಸ್‌ ಕಾನ್ಸಟೇಬಲ್‌ ಮಂಜುನಾಥ ಬಾಳಿಕಾಯಿ ಲೋಕಾ ಬಲೆಗೆ ಬಿದ್ದವರು. 

ಸವಣೂರು ಪಟ್ಟಣದ ನೂರಾನಿನಗರ ನಿವಾಸಿ ಹುಸೇನ್‌ ಮಿಯಾ ಬಿನ್‌ ದಸ್ತಗೀರ ಸಾಬ್‌ ರಾಯಚೂರು ಎಂಬವರು ತನ್ನ ಮನೆಯ ಇ-ಸ್ವತ್ತು ಮಾಡಿಸಲು ಹೋದಾಗ ಮನೆಯ ಅಳತೆಯು ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದನ್ನು ಸರಿಪಡಿಸಿಕೊಡಲು ಕೋರಿ ಸವಣೂರು ಪುರಸಭೆಗೆ ಮನವಿ ಸಲ್ಲಿಸಿದ್ದರು. ಕೆಲಸ ಮಾಡಿಕೊಡಲು 15 ಸಾವಿರ ರು. ಲಂಚಕ್ಕೆ ಸುನೀಲ್‌ ಬೇಡಿಕೆ ಇಟ್ಟಿದ್ದರು. ಇಂದು ಲಂಚದ ಹಣವನ್ನು ಪುರಸಭೆ ಕಾರ್ಯಾಲಯದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರಾಣಿಬೆನ್ನೂರು ತಾಲೂಕಿನ ಹೀಲದಹಳ್ಳಿ ನಿವಾಸಿ ಜಗದೀಶ ಕಲ್ಲಪ್ಪ ಮಲಬೇರ ಎಂಬವರ ಮೇಲೆ ದಾಖಲಾದ ಪ್ರಕರಣದಲ್ಲಿ ಆರೆಸ್ಟ್‌ ಮಾಡದೇ ನೋಡಿಸ್‌ ಮೇಲೆ ಬಿಡುತ್ತೇನೆ ಎಂದು ಹೇಳಿ ಪೊಲೀಸ್‌ ಕಾನ್ಸಟೇಬಲ್‌ ಮಂಜುನಾಥ ಬಾಳಿಕಾಯಿ 5 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ಪೊಲೀಸ್‌ ಠಾಣೆ ಎದುರು ರಸ್ತೆಯಲ್ಲಿ 4 ಸಾವಿರ ರು. ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು

ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ನೇತೃತ್ವದಲ್ಲಿ ಇನ್ಸಪೆಕ್ಟರ್‌ ಮುಸ್ತಾಕ ಆಹಮದ್‌ ಶೇಖ್‌, ಸಿಬ್ಬಂದಿ ಸಿ.ಎಂ. ಬಾರ್ಕಿ, ಎಂ.ಕೆ. ನದಾಫ್‌, ಆನಂದ ಶೆಟ್ಟರ್‌, ಬಿ.ಎಸ್‌.ಬಿಲ್ಲರ ತಂಡದಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಲಾಗಿದೆ. ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!