ಬಂಧಿಸಲು ಹೋದ ಪೊಲೀಸರಿಗೆ ಕೊಲೆ ಬೆದರಿಕೆ: ಲಕ್ಷ್ಮೇಶ್ವರ ರೌಡಿಗಾಗಿ ತೀವ್ರ ಶೋಧ

Published : Feb 01, 2023, 07:16 PM ISTUpdated : Feb 01, 2023, 07:21 PM IST
ಬಂಧಿಸಲು ಹೋದ ಪೊಲೀಸರಿಗೆ ಕೊಲೆ ಬೆದರಿಕೆ: ಲಕ್ಷ್ಮೇಶ್ವರ ರೌಡಿಗಾಗಿ ತೀವ್ರ ಶೋಧ

ಸಾರಾಂಶ

ಅರೆಸ್ಟ್ ಮಾಡಲು ಹೋದ ಪೊಲೀಸರಿಗೇ ಕೊಚ್ಚಿಹಾಕ್ತೀನಿ ಎಂದ ರೌಡಿ ಶೀಟರ್ ಪೊಲೀಸರ ಕಾಲಿಗೆ ಪರಾರಿಯಾದ ಪುಂಡ ಅಬ್ದುಲ್‌ ರಜಾಕ್‌ ಆಡೂರ  ಪೊಲೀಸರ ಕರ್ತವ್ಯಕ್ಕೆ ಸ್ಥಳೀಯ ಕೆಲವರಿಂದ ಅಡ್ಡಿ

ಗದಗ (ಫೆ.01): ಹಲ್ಲೆ, ಜೀವ ಬೆದರಿಕೆ ಸೇರಿದಂತೆ 5 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನ ಬಂಧಿಸಲು ಹೋಗಿದ್ದ ಗದಗ ಜಿಲ್ಲಾ ಪೊಲೀಸರಿಗೆ ಧಮ್ಕಿ ಹಾಕಿದ ಆರೋಪಿ ಮತ್ತೊಮ್ಮೆ ಅವರಿಂದ ತಪ್ಪಿಸಿಕೊಂಡು ಪರಾರಿ ಆಗಿರುವ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ. 

ಲಕ್ಷ್ಮೇಶ್ವರ ಪಟ್ಟಣದ ಅಬ್ದುಲ್ ರಜಾಕ್ ಆಡೂರನ್ನ ವರ್ಷ ಗಡಿಪಾರು ಮಾಡಿ ಜಿಲ್ಲಾ ದಂಡಾಧಿಕಾರಿಗಳು ಆದೇಶ ಮಾಡಿದ್ದರು. ಜನವರಿ ತಿಂಗಳಲ್ಲಿ ಪಟ್ಟಣಕ್ಕೆ ವಾಪಾಸಾಗಿದ್ದ ಅಬ್ದುಲ್ ಅವನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಇದಕ್ಕಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇಮಗೌಡ ಅವರ ನಿರ್ದೇಶನದಂತೆ ಲಕ್ಷ್ಮೇಶ್ವರ ಪಟ್ಟಣದ, ಅಂಚೆ ಕಚೇರಿ ಎದುರಿನ ಅಬ್ದುಲ್ ಆಡೂರು ಮನೆಗೆ ಬಂಧಿಸಲು ಪೊಲೀಸರ ತಂಡವು ತೆರಳಿತ್ತು. ಈ ವೇಳೆ ಅಬ್ದುಲ್ ರಜಾತ್ ಪುಂಡಾಟ ತೋರಿದ್ದಾನೆ. 

Bengaluru: ಮೂರೂವರೆ ವರ್ಷದ ಬಾಲಕಿ ರೇಪ್‌, ಹತ್ಯೆ: ತಾಯಿಯ ಪ್ರಿಯತಮನಿಂದಲೇ ಕೃತ್ಯ

 

ಪೊಲೀಸರ ಮೇಲೆಯೇ ಹಲ್ಲೆ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪ್ರಕಾಶ್.ಡಿ ಹಾಗೂ ತಂಡದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡೋದಕ್ಕೆ ಮುಂದಾಗಿದ್ದಾನೆ. ಜೊತೆಗೆ, ಸ್ಥಳದಲ್ಲಿ ಜಮಾಯಿಸಿದ್ದ 15 ಜನರು ಆರೋಪಿಯ ಬಂಧನಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಆರೋಪಿ ಅಬ್ದುಲ್‌ ಸೇರಿಕೊಂಡು ಪಿಎಸ್ ಐ ಪ್ರಕಾಶ್ ಅವರ ಕಾಲಿಗೆ ಹಲ್ಲೆ ಮಾಡಿದ್ದಾರೆ. ನಂತರ ಅಲ್ಲಿಂದ ಅಬ್ದುಲ್ ರಜಾಕ್ ಆಡೂರ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐವರ ಬಂಧನ: ಈ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಸದಸ್ಯ ಫಿರ್ದೊಷ್‌ ಆಡೂರ, ಇಸ್ಮಾಯಿಲ್‌ ಆಡೂರ, ಮೊಹಮ್ಮದ್‌ ಆಡೂರ, ನೌಶಾದ ಆಡೂರ, ಅತ್ತಾರಸಾಬ ಆಡೂರ, ನಿಜಾಮುದ್ದೀನ್‌ ಚಂಗಾಪೂರಿ, ಸುಲೇಮಾನ್‌ ಆಡೂರ ಹಾಗೂ ಬೆಂಬಲಿಗರು ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪೈಕಿ ಆರೋಪಿಗೆ ಸಹಕಾರ ನೀಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಆರೋಪದ ಅಡಿಯಲ್ಲಿ ಐವರನ್ನ ಬಂಧಿಸಲಾಗಿದೆ. ಜೊತೆಗೆ ತಲೆ ಮರೆಸಿಕೊಂಡ ಅಬ್ದುಲ್ ರಜಾಕ್‌ಗಾಗಿ ಪೊಲೀಸರಿಂದ ಹುಡುಕಾಟ ಮಾಡಲಾಗುತ್ತಿದೆ. 

ಪೊಲೀಸ್ರು ನಾಯಿ ಥರ ಮರಳು ದಂಧೆಕೋರರ ಹಿಂದೆ ಹೋಗ್ತಾರಲ್ಲ, ನಾಚಿಕೆ ಆಗಲ್ವಾ? : ಉಳ್ಳಾಲ ಪೊಲೀಸರಿಗೆ ಖಾದರ್ ಕ್ಲಾಸ್!

ಭೂಸ್ವಾಧೀನ ವಿರೋಧಿಸಿ ಹಲಕುರ್ಕಿ ಗ್ರಾಮಸ್ಥರ ಪ್ರತಿಭಟನೆ:
ಬಾಗಲಕೋಟೆ (ಫೆ.01):  ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದಲ್ಲಿ ಸರ್ಕಾರದ ಭೂಸ್ವಾಧೀನ ಕ್ರಮಕ್ಕೆ ರಸ್ತೆ ತಡೆ ನಡೆಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೆರೂರ ಬಾದಾಮಿ & ಬಾಗಲಕೋಟೆ ಬಾದಾಮಿ ಮಾರ್ಗದ ಸಂಚಾರ ಬಂದ್ ಮಾಡಲಾಗಿತ್ತು. ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದ ರೈತರು. ಕ್ಷೇತ್ರದ ಶಾಸಕ ಸಚಿವ ಮುರುಗೇಶ ನಿರಾಣಿ ನಡೆ ವಿರೋಧಿಸಿ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು
ಹಲಕುರ್ಕಿ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. 

ಪ್ರತಿಭಟನೆ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಇದರಿಂದಾಗಿ ಬಸ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಪರದಾಟ ಶುರುವಾಗಿತ್ತು. ಇನ್ನು ಈ ಮಾರ್ಗದಲ್ಲಿ ಗಂಟೆಗಟ್ಟಲೆ ಕಾಯುತ್ತಾ ವಾಹನಗಳನ್ನು ನಿಲ್ಲಿಸಿಕೊಂಡಿದ್ದರೂ ಪ್ರತಿಭಟನೆ ಮುಕ್ತಾಯ ಆಗದ ಹಿನ್ನೆಲೆಯಲ್ಲಿ ಜನರು ಬೇರೆ ಸ್ಥಳಗಳಿಂದ ಸುತ್ತವರೆದು ಸಂಚಾರ ಮಾಡುವಂತಾಗಿತ್ತು. ಇನ್ನು ಪೊಲೀಸರಿಂದ ಇದಕ್ಕೆ ರಕ್ಷಣೆಯೂ ಸಿಗಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ