Bengaluru: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ ಬಳಸಿ ಯುವತಿಗೆ ಬ್ಲ್ಯಾಕ್ಮೇಲ್‌: ಆರೋಪಿ ಬಂಧನ

By Govindaraj SFirst Published Dec 25, 2022, 11:48 AM IST
Highlights

ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.25): ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೇಂದ್ರನಗರ ನಿವಾಸಿ ಶೋಯೆಬ್‌ (22) ಬಂಧಿತ. ಆರೋಪಿ ಗೋಡೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾನೆ. ಈತನಿಂದ ಪೆನ್‌ಡ್ರೈವ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಸಿಮ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ. ಮುಂಬೈ ಮೂಲದ 25 ವರ್ಷದ ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಮೂಲದ ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ನಗರದ ಬೇಗೂರು ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಯುವತಿ ಪೆನ್‌ಡ್ರೈವ್‌ ಕಳೆದುಕೊಂಡಿದ್ದರು. ಈ ಪೆನ್‌ ಡ್ರೈವ್‌ ಆರೋಪಿ ಶೋಯೆಬ್‌ಗೆ ರಸ್ತೆಯಲ್ಲಿ ಸಿಕ್ಕಿದೆ. ಬಳಿಕ ಈ ಪೆನ್‌ಡ್ರೈವ್‌ ತೆರೆದಿರುವ ಆರೋಪಿಗೆ ಯುವತಿಯ ಖಾಸಗಿ ಫೋಟೊ ಹಾಗೂ ವಿಡಿಯೊಗಳು ಸಿಕ್ಕಿವೆ. ಪೆನ್‌ಡ್ರೈವ್‌ನಲ್ಲೇ ಸಿಕ್ಕ ದಾಖಲೆಗಳಲ್ಲಿ ಯುವತಿಯ ಮೊಬೈಲ್‌ ನಂಬರ್‌ ತೆಗೆದುಕೊಂಡು ವಾಟ್ಸಾಪ್‌ನಲ್ಲಿ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಕಳುಹಿಸಿದ್ದಾನೆ. ಜತೆಗೆ ಪೆನ್‌ಡ್ರೈವ್‌ ಫೋಟೊವನ್ನು ಕಳುಹಿಸಿದ್ದಾನೆ.

ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ: ಅಶ್ರಫ್ ಕಿನಾರ

70 ಸಾವಿರ ರು.ಗೆ ಬೇಡಿಕೆ: ಬಳಿಕ ಯುವತಿ ಜತೆಗೆ ಚಾಟಿಂಗ್‌ ಆರಂಭಿಸಿರುವ ಆರೋಪಿಯು ಈ ಪೆನ್‌ಡ್ರೈವ್‌ ವಾಪಾಸ್‌ ಕೊಡಬೇಕಾದರೆ, 70 ಸಾವಿರ ರು. ಹಣ ಕೊಡಬೇಕು. ನಾನು ನೀಡುವ ಕ್ಯೂಆರ್‌ ಕೋಡ್‌ ಸ್ಕಾ್ಯನ್‌ ಮಾಡಿ ಹಣ ಹಾಕಬೇಕು ಎಂದು ಕಿರುಕುಳ ನೀಡಲು ಆರಂಭಿಸಿದ್ದಾನೆ. ಈತನ ಕಾಟ ತಾಳಲಾರದೆ ಯುವತಿ, ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!