
ನವದೆಹಲಿ(ಫೆ. 16) ಮೆಟ್ರೋ ರೈಲಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಮೆಟ್ರೋ ರೈಲಿನಲ್ಲಿ ಪ್ಯಾಂಟ್ ಜಿಪ್ ತೆಗೆದು ಯುವತಿಗೆ ತನ್ನ ಗುಪ್ತಾಂಗ ತೋರಿಸಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಲಾಗಿದೆ.
ಆರೋಪಿ ತನ್ನ ಸ್ಮಾರ್ಟ್ ಕಾರ್ಡ್ನ್ನು ಮೊಬೈಲ್ ನಂಬರ್ ಮೂಲಕ ರೀಚಾರ್ಜ್ ಮಾಡಿಸಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಟ್ರೇಸ್ ಮಾಡಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಎಂಜಿ ರಸ್ತೆಯಲ್ಲಿ ಕಾಮಾಂಧರು ಮಾಡಿದ ನೀಚ ಕೆಲಸ
ಬಂಧಿತ ಆರೋಪಿ 28 ವರ್ಷದ ಸಿವಿಲ್ ಇಂಜಿನಿಯರ್ ಎಂದು ತಿಳಿದುಬಂದಿದೆ. ಹರಿಯಾಣದ ಗುರುಗಾಂವ್ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
2 ದಿನಗಳ ಹಿಂದೆ ಈ ಯುವಕ ತನ್ನ ಮುಂದೆ ನಿಂತಿದ್ದ ಯುವತಿಗೆ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದ. ಈ ವೇಳೆ ಹೆದರಿದ್ದ ಯುವತಿ ನಂತರ ಪೊಲೀಸ್ ಸ್ಟೇಷನ್ಗೆ ತೆರಳಿ ಯುವಕನ ಕೃತ್ಯದ ಬಗ್ಗೆ ದೂರು ನೀಡಿದ್ದರು.
ಜೀನ್ಸ್ ಪ್ಯಾಂಟ್, ಜಾಕೆಟ್ ಧರಿಸಿದ್ದ ಯುವಕತನ್ನ ಬ್ಯಾಕ್‍ಬ್ಯಾಗ್‍ನನ್ನು ಮುಂಭಾಗದಲ್ಲಿ ಹಾಕಿಕೊಂಡಿದ್ದ. ಆ ವಿಕೃತ ಕಾಮಿ ತನ್ನ ಜನನಾಂಗವನ್ನು ಹೊರಹೊಮ್ಮಿಸಿ ನನ್ನತ್ತ ಪ್ರದರ್ಶಿಸಿದ. ಬೇರೆಯವರಿಗೆ ಗೊತ್ತಾಗದಂತೆತನ್ನ ಬ್ಯಾಗ್‍ನನ್ನುಅಡ್ಡವಾಗಿಟ್ಟುಕೊಂಡಿದ್ದ. ಈ ಘಟನೆಯಿಂದ ನನಗೆ ಆಘಾತ ಮತ್ತು ಹೇಸಿಗೆಯಾಗಿತ್ತು ಎಂದು ಯುವತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ