'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

By Suvarna News  |  First Published Feb 15, 2020, 5:56 PM IST

ಭಾರತ ಸರ್ಕಾರದ ಕೋಟಾದಲ್ಲಿ ಹುಬ್ಬಳ್ಳಿಯ KLEಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆದುಕೊಂಡಿದ್ದ ಕಾಶ್ಮೀರಿಗಳು ಇದೀಗ ಪಾಕಿಸ್ತಾನದ ಪರ ಜೈಕಾರ ಹಾಕಿ ಅಂದರ್ ಆಗಿದ್ದಾರೆ.


ಹುಬ್ಬಳ್ಳಿ, (ಫೆ.15): ಪುಲ್ವಾಮಾ ದಾಳಿ ನಡೆದು ಫೆ.14ಕ್ಕೆ ಒಮದು ವರ್ಷ ಆಯ್ತು. ಈ ಕರಾಳ ನೆನಪಿಗೆ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಡೀ ಭಾರತವೇ ಗೌರವ ಸಲ್ಲಿಸಿದೆ. ಆದ್ರೆ, ಮತ್ತೊಂದೆಡೆ ಅದೇ ದಿನ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಮೂಲಕ ದೇಶದ್ರೋಹ ಕೆಲಸ ಮಾಡಿದ್ದಾರೆ.

ಹುಬ್ಬಳ್ಳಿಯ ಈ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. 

Latest Videos

undefined

ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

ಈ ವಿದ್ಯಾರ್ಥಿಗಳೆಲ್ಲರೂ ಕಾಶ್ಮೀರ ಮೂಲದವರು ಎಂದು ತಿಳಿದುಬಂದಿದ್ದು, ಹುಬ್ಬಳ್ಳಿಯ  KLE ಇಂಜಿನಿಯರಿಂಗ್ ಕಾಲೇಜಿನನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಾಶ್ಮೀರದ  ಶೋಫಿಯಾನ ಜಿಲ್ಲೆಯ ಆಮಿರ್ ಮೊಹಿದ್ದೀನ್ ವಾನಿ, ಬಾಸೀತ್  ಆಸೀಫ್  ಸೋಫಿ, ತಾಲಿಬ ಮಾಜಿದ್ ಎನ್ನುವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ವ್ಯಾಸಂಗ ಮಾಡುತ್ತಿದ್ದರು.

ಕೆಎಲ್‌ಇ ಕಾಲೇಜಿನ ಪ್ರಾಂಶುಪಾಲರ ಹೇಳಿಕೆ
 ಪಾಕಿಸ್ತಾನದ ಪರ ಘೋಷಣೆ ಕೂಗಿದ ಹಿನ್ನೆಲೆ ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಭಾರತ ಸರ್ಕಾರದ ಕೋಟಾದಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದರು. ಇದೀಗ ಅವರನ್ನ ಅಮಾನತು ಮಾಡಲಾಗಿದೆ. ಪಾಕಿಸ್ತಾನದ ಪರ ಜಯಘೋಷ ಕೂಗಿ ವಿಡಿಯೋ ವಿಷಯ ಗೊತ್ತಾಗುತ್ತಿದ್ದಂತೆ ಗೋಕುಲ ಠಾಣೆ ಪೊಲೀಸರಿಗೆ ತಿಳಿಸಿದ್ದೇವೆ. ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು

ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳುವುದೇನು..?
ಕಾಲೇಜಿನ  ಪ್ರಾಂಶುಪಾಲರ ದೂರಿನ ಅನ್ವಯ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಕಾಶ್ಮಿರದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಮೂವರ ವಿರುದ್ಧ ಸೆಕ್ಷನ್ 153/AB, 124/A ಅಡಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಿದ್ದು, ಯಾವುದಾದರೂ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದಾರಾ ಎಂದು ತನಿಖೆ ಮಾಡಲಾಗುತ್ತಿದೆ‌ ಎಂದು ಸುವರ್ಣ ನ್ಯೂಸ್ ಗೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಆರ್. ದಿಲೀಪ್ ತಿಳಿಸಿದರು.

click me!