ರೈಲು ಪ್ರಯಾಣದ ವೇಳೆ ನಿದ್ದೆಗೆ ಜಾರುವುದು ಸಹಜ. ಯುವತಿಯೊಬ್ಬಳು ನಿದ್ದೆಗೆ ಜಾರಿದ ಬೆನ್ನಲ್ಲೇ ಆಕೆಯ ಮುಖದ ಮೇಲೆ ಕಾಮುಕ ಹಸ್ತಮೈಥುನ ಮೂಲಕ ವೀರ್ಯ ಸ್ಖಲನ ಮಾಡಿದ ಘಟನೆ ನಡೆದಿದೆ. ಇದೀಗ ಕಾಮುಕ ಅರೆಸ್ಟ್ ಆಗಿದ್ದಾನೆ.
ಗೋಕರ್ಣ(ಜ.03) ರೈಲು, ಬಸ್ ಪ್ರಯಾಣದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಕಿರುಕುಳ, ಕಿರಿಕಿರಿ ಒಂದೆರಡಲ್ಲ. ಇದೀಗ ರೈಲು ಪ್ರಯಾಣದ ವೇಳೆ ನಿದ್ದೆಗೆ ಜಾರಿದ ಯುವತಿ ಮುಖದ ಮೇಲೆ ಹಸ್ತಮೈಥುನ ಮಲೂಕ ವೀರ್ಯ ಸ್ಖಲನ ಮಾಡಿದ ಕಾಮುಕನನ್ನು ಬಂಧಿಸಿದ ಘಟನೆ ಕರ್ನಾಟಕದ ಗೋಕರ್ಣದಲ್ಲಿ ನಡೆದಿದೆ. ಕೇರಳದಿಂದ ಗೋವಾಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಬೆನ್ನಲ್ಲೇ ಯುವತಿಯರ ಪ್ರಯಾಣದ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ.
ಕೇರಳದಿಂದ ಗೋವಾಗೆ ಸಂಚರಿಸುತ್ತಿದ್ದ ಕೇರಳದ ಕೋಝಿಕೋಡ್ ಮೂಲದ ಯುವತಿ ಹಾಗೂ ಇಬ್ಬರು ಗೆಳೆಯರು ಪ್ರಯಾಣಿಸಿದ್ದಾರೆ. ಯುವತಿ ಹಾಗೂ ಇಬ್ಬರು ಗೆಳೆಯರು ಕೆಲ ವಿಡಿಯೋ ಶೂಟ್ ಮಾಡಲು ಗೋವಾಗೆ ತೆರಳಿದ್ದಾರೆ. ಸಿನಿಮಾಟೋಗ್ರಫಿ, ವಿಡಿಯೋ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇವರು ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ.
ಜೂಮ್ ಕಾಲ್‌ನಲ್ಲಿದ್ದಾಗಲೇ ಹಸ್ತಮೈಥುನ, ಪತ್ರಕರ್ತ ಸಸ್ಪೆಂಡ್!
ಪ್ರಯಾಣದ ವೇಳೆ ಯುವತಿ ನಿದ್ದಿಗೆ ಜಾರಿದ್ದಾಳೆ. ಇತ್ತ ಇತರ ಇಬ್ಬರು ನಿದ್ದೆಗೆ ಜಾರಿದ್ದಾರೆ. ರೈಲು ಬೆಳಗ್ಗೆ 7.30ರ ವೇಳೆಗೆ ಕರ್ನಾಟಕದ ಗೋಕರ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಬೇರೆ ಸೀಟಿನಲ್ಲಿದ್ದ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ದತ್ತಾತ್ರೆಯ ಚವನ್, ಯುವತಿಯ ಹತ್ತಿರ ಬಂದು ಹಸ್ತಮೈಥುನ ಮಾಡಿದ್ದಾನೆ.
ಈ ವೇಳೆ ಯುವತಿ ನಿದ್ದೆಯಿಂದ ಎಚ್ಚರಗೊಂಡು ಸಹಾಯಕ್ಕಾಗಿ ಬೇಡಿದ್ದಾಳೆ. ಈ ವೇಳೆ ನಿದ್ದೆಗೆ ಜಾರಿದ್ದ ಇಬ್ಬರು ಎಚ್ಚರಗೊಂಡು ಕಾಮುಕನ ತಡೆದು ನಿಲ್ಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಆಗಮಿಸಿ ಕಾಮುಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆರೋಪಿ ಇದೇ ರೀತಿ ಇತರ ಮಹಿಳೆಯರಿಗೆ ಕಿರುಕುಳ ನೀಡಿರುವ ಸಾಧ್ಯವಿದೆ. ಹೀಗಾಗಿ ಪೊಲೀಸರು ಈತನ ಹಿಸ್ಟರಿ ತೆಗೆಯಲು ಮಹಾರಾಷ್ಟ್ರದ ಸಾಂಗ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕ್ಲಾಸ್‌ರೂಂನಲ್ಲಿ ಮಕ್ಕಳ ಎದುರೆ ಹಸ್ತಮೈಥುನ ಮಾಡ್ಕೊಂಡ ಶಿಕ್ಷಕಿ ವಿಡಿಯೋ ಬಿಟ್ಟಳು!
2023ರ ಆಗಸ್ಟ್ ತಿಂಗಳಲ್ಲಿ ದೆಹಲಿ ಮೆಟ್ರೋದಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಪ್ರಯಾಣಿಕನೊಬ್ಬ ಅಪ್ರಾಪ್ತ ಬಾಲಕಿ ಎದುರು ಹಸ್ತಮೈಥುನ ಮಾಡಿಕೊಂಡು ಆಕೆಯ ಮೈಮೇಲೆ ವೀರ‍್ಯಸ್ಖಲನ ಮಾಡಿಕೊಂಡ ಘಟನೆ ನಡೆದಿತ್ತು. ಕೆಂಪು ಮಾರ್ಗ ಮೆಟ್ರೋದಲ್ಲಿ ಪಶ್ಚಿಮ ಬಂಗಾಳ ಮೂಲದ ಪ್ರಯಾಣಿಕ ಈ ದುರ್ವರ್ತನೆ ತೋರಿದ್ದ. ಬಳಿಕ ಸಹ ಪ್ರಯಾಣಿಕರು ಆತನನ್ನು ಹಿಡಿದು ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.