ರೂಂನಲ್ಲಿ ತಂಗಿದ್ದ 27ರ ಹರೆಯದ ಮಾಡೆಲ್ ಹತ್ಯೆ, ಹೊಟೆಲ್ ಮಾಲೀಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

By Suvarna News  |  First Published Jan 3, 2024, 6:07 PM IST

ಹೊಟೆಲ್‌ನಲ್ಲಿ ರೂಂ ಪಡೆದು ತಂಗಿದ್ದ 27ರ ಹರೆಯದ ಯುವತಿ ನಿಗೂಢವಾಗಿ ಹತ್ಯೆಯಾಗಿದ್ದಾಳೆ. ಆದರೆ ಸಿಸಿಟಿವಿ ನಿಗೂಢ ಹತ್ಯೆ ರಹಸ್ಯ ಬಿಚ್ಚಿಟ್ಟಿದೆ. ಹೊಟೆಲ್ ಮಾಲೀಕನೇ ಯುವತಿಯನ್ನು ಹತ್ಯೆಗೈದು ಮೃತದೇಹವನ್ನು ಎಳದುಕೊಂಡು ಹೋಗುತ್ತಿರುವ ದೃಶ್ಯ ಬಯಲಾಗಿದೆ.


ಗುರುಗ್ರಾಂ(ಜ.03) ಹೊಟೆಲ್‌ನಲ್ಲಿ ರೂಂ ಪಡೆದು ತಂಗಿದ್ದ 27ರ ಹರೆಯದ ಯುವತಿಯ ಭೀಕರ ಹತ್ಯೆ ಆತಂಕದ ವಾತಾವರಣ ನಿರ್ಮಿಸಿದೆ. ಗುರುಗ್ರಾಂನ ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದ ಯುವತಿ ಇದಕ್ಕಿದ್ದಂತ ನಾಪತ್ತೆಯಾಗಿದ್ದಳು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಚ್ಚರಿ ಮಾಹಿತಿ ಬಹಿರಂಗವಾಗಿದೆ. ಯುವತಿಯನ್ನು ಹೊಟೆಲ್ ಮಾಲೀಕ ಹಾಗೂ ಆತನ ಸಹಚರರು ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಯುವತಿಯನ್ನು ಹತ್ಯೆಗೈದು ಮೃತದೇಹವನ್ನು BMW ಕಾರಿನಲ್ಲಿ ಸಾಗಿಸಿದ ದೃಶ್ಯ ಇದೀಗ ಕೊಲೆ ಹಿಂದಿನ ರಹಸ್ಯವನ್ನು ಬಯಲು ಮಾಡಿದೆ.

ದಿವ್ಯ ಪಹುಜಾ ಗುರುಗ್ರಾಂನ ಖಾಸಗಿ ಹೊಟೆಲ್‌ನಲ್ಲಿ ರೂಂ ಪಡೆದಿದ್ದಾಳೆ. ಜನವರಿ 2 ರಂದು ಸಿಟಿ ಪಾಯಿಂಟ್ ಹೊಟೆಲ್‌ಗೆ ಆಗಮಿಸಿ ದಿವ್ಯ ಪಹುಜಾಗೆ 111 ರೂಂ ನೀಡಲಾಗಿದೆ. ದಿವ್ಯಾ ಜೊತೆ ಹೊಟೆಲ್ ಮಾಲೀಕ ಅಭಿಜಿತ್ ಸಿಂಗ್ ಕೂಡ ಆಗಮಿಸಿದ್ದಾನೆ. ಹೊಟೆಲ್ ಮಾಲೀಕ ಅಭಿಜಿತ್ ಸಿಂಗ್ ಕೂಡ ಜೊತೆಯಲ್ಲಿದ್ದ ಕಾರಣ ಹೆಚ್ಚಿನ ಮಾಹಿತಿ ಪಡೆಯದೇ ಸಿಬ್ಬಂದಿಗಳು ರೂಂ ನೀಡಿದ್ದಾರೆ.

Latest Videos

undefined

ಜ್ಯುವೆಲ್ಲರಿ ಶಾಪ್‌ಗೆ ಕನ್ನ, 3 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ಕಳವು, ಸಿಸಿಟಿವಿ ದೃಶ್ಯ ಬಹಿರಂಗ!

ಆದರೆ ರಾತ್ರಿ ವೇಳೆ ಇದೇ ರೂಂನಿಂದ ದಿವ್ಯ ಪಹುಜಾ ಮೃತದೇಹವನ್ನು ಕವರ್ ಮಾಡಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ಅಭಿಜಿತ್ ಸಿಂಗ್ ತನ್ನ BMW ಕಾರಿನಲ್ಲಿ ಮೃತದೇಹ ಹಾಕಿದ್ದಾನೆ. ತನ್ನ ಸಹಚರರಿಗೆ 10 ಲಕ್ಷ ರೂಪಾಯಿ ನೀಡಿ, ಮೃತದೇಹವನ್ನು ಯಾರಿಗೂ ತಿಳಿಯದಂತೆ ಎಸೆಯಲು ಸೂಚಿಸಿದ್ದಾನೆ.

ದಿವ್ಯ ಅಹುಜಾ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿವ್ಯ ಅಹುಜಾ ನಾಪತ್ತೆ ಅನ್ನೋ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ದಿವ್ಯ ಹತ್ಯೆಯಾಗಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ದಿವ್ಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಹೊಟೆಲ್ ಸಿಸಿಟಿವಿ ದೃಶ್ಯಗಳು, ಹೊಟೆಲ್ ಹೊರಭಾಗದಲ್ಲಿರುವ ಇತರ ಅಂಗಡಿ ಮುಂಗಟ್ಟುಗಳು, ದಾರಿಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.  ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂದ ಕ್ರೈಂ ಬ್ರಾಂಚ್ ಪೊಲೀಸರು ಪಂಜಾಬ್‌ನ ಕೆಲ ಭಾಗದಲ್ಲಿ ರೇಡ್ ಮಾಡಿದ್ದಾರೆ. 

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 4 ತಿಂಗಳ ಬಳಿಕ ಪ್ರಕರಣ ಬಯಲಿಗೆ!

ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ಸ್ನೇಹಿತರೇ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿರುವ ಘಟನೆ ಹನುಮಂತನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಿವಾಸನಗರ ನಿವಾಸಿ ವಿಜಯ್‌ಕುಮಾರ್‌ (21) ಕೊಲೆಯಾದವರು. ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.
 

click me!