ವಿಮೆ ಹಣ ಪಡೆಯಲು ಪತ್ನಿಯ ಗುಂಡಿಕ್ಕಿ ಕೊಂದ, ಸಾಲ ತೀರಿಸುವ ಮೊದಲೇ ಪತಿ ಅಂದರ್!

By Suvarna News  |  First Published Aug 7, 2022, 4:57 PM IST

ಪತ್ನಿಗೆ ತಿಳಿಯದಂತೆ ಮೈತುಂಬ ಸಾಲ. ತೀರಿಸಲು ಯಾವ ದಾರಿ ಕಾಣದಾಗ, ಪತ್ನಿಯನ್ನೇ ಗುಂಡಿಕ್ಕಿ ಕೊಲ್ಲಲು ನಿರ್ಧರಿಸಿದ್ದ. ಇದಕ್ಕಾಗಿ ಯೂಟ್ಯೂಬ್ ಮೂಲಕ ಹಲವು ವಿಡಿಯೋಗಳನ್ನು ನೋಡಿ ಕೊನೆಗೆ ಗುಂಡಿಕ್ಕಿ ಕೊಲ್ಲುವ ಪ್ಲಾನ್ ಆಯ್ಕೆ ಮಾಡಿಕೊಂಡು. ಆದರೆ ಪತ್ನಿ ಉಳಿಯಲಿಲ್ಲ, ಹಣ ಬರಲಿಲ್ಲ, ಸಾಲ ಮುಗಿಯಲಿಲ್ಲ. ಈಗ ಪತಿ ಪೊಲೀಸರ ಅತಿಥಿ. 


ರಾಜಘಡ(ಆ.07):  ಪತ್ನಿಗೆ ತಿಳಿಯದಂತೆ ಸಾಲದ ಮೇಲೆ ಸಾಲ. ಬ್ಯಾಂಕ್ ಸೇರಿದಂತೆ ಸ್ನೇಹಿತರು, ಕುಟುಂಬಸ್ಥರಿಂದ ಸಾಲ ಪಡೆದುಕೊಂಡಿದ್ದಾನೆ. ತೀರಿಸಲು ಯಾವ ಮಾರ್ಗವೂ ಉಳಿದಿಲ್ಲ. ಮನೆ, ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಖಾತೆಯಲ್ಲಿ ಹಣ ಉಳಿದಿಲ್ಲ. ಆದರೆ ಪತ್ನಿಯ ಪ್ರತಿ ತಿಂಗಳು  ವಿಮೆ ಹಣವನ್ನು ಪಾವತಿ ಮಾಡುದನ್ನು ಗಮನಿಸಿದ್ದಾನೆ. ಹೀಗಾಗಿ ಪತ್ನಿಯ ವಿಮೆ ಮಾಹಿತಿ ಕಲೆಹಾಕಿದ ಗಂಡ, ಕೊನೆಗೆ ಪತ್ನಿಯನ್ನೇ ಕೊಲೈಗೈದು ವಿಮೆ ಹಣದಿಂದ ಸಾಲ ತೀರಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಯೂಟ್ಯೂಟ್ ಮೂಲಕ ಪತ್ನಿಯನ್ನು ಕೊಲೆ ಮಾಡಲು ಹಲವು ವಿಡಿಯೋಗಳನ್ನು ನೋಡಿದ್ದಾರೆ. ಕ್ರೈಮ್ ಕುರಿತು ಹಲವು ನ್ಯೂಸ್ ಸ್ಟೋರಿಗಳನ್ನು ನೋಡಿದ್ದಾರೆ. ಕೊನೆಗೆ ಗುಂಡಿಕ್ಕಿ ಕೊಲ್ಲುವ ಮಾರ್ಗ ಆಯ್ಕೆ ಮಾಡಿಕೊಂಡು ಮಾಡಿ ಮುಗಿಸಿದ್ದಾನೆ. ಆದರೆ ಪತ್ನಿಯನ್ನು ಕೊಂದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ನಡೆದ ಘಟನೆ ಬಹಿರಂಗವಾಗಿದೆ. ಇದೀಗ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ರಾಜಘಡದಲ್ಲಿ.

ಮದುವೆಯಾದ ಬಳಿಕ ಪತಿ ಕೆಲಸಕ್ಕೆ ತೆರಳದೇ ಪತ್ನಿಯ ಹಣದಲ್ಲೇ ಮಜಾ ಉಡಾಯಿಸುತ್ತಿದ್ದ. ಪತ್ನಿ ಕೆಲಸಕ್ಕೆ ತೆರಳಿ ಕುಟುಂಬ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತಿದ್ದಳು. ಪತ್ನಿ ತನ್ನ ಭವಿಷ್ಯಕ್ಕಾಗಿ ಪ್ರತಿ ತಿಂಗಳು ವಿಮೆ ಪಾವತಿಸುತ್ತಿದ್ದಳು. ಇತ್ತ ಪತಿ ಯಾವುದೇ ಕೆಲಸಕ್ಕೆ ಹೊಗಲು ತಯಾರಿರಲಿಲ್ಲ. ಆದರೆ ಮದುವೆಯಾಗಿದ್ದೇನೆ ಅನ್ನೋ ಕಾರಣಕ್ಕೆ ಪತ್ನಿ ತನ್ನ ವೇತನದಲ್ಲಿ ಹಣವನ್ನು ಗಂಡನ ಖರ್ಚು ವೆಚ್ಚಕ್ಕೂ ನೀಡುತ್ತಿದ್ದಳು. ಆದರೆ ಪ್ರತಿ ದಿನ ಮೋಜು ಮಸ್ತಿಯಲ್ಲೇ ಕಳೆಯುತ್ತಿದ್ದ ಪತಿ ಹಲವರಿಂದ ಸಾಲ ಮಾಡಿದ್ದ. ಬ್ಯಾಂಕ್‌ನಿಂದಲೂ ಸಾಲ ಪಡೆದಿದ್ದ. 

Tap to resize

Latest Videos

ಹಿಂದಿ ಟೀಚರ್ ಕಥೆ ಮುಗಿಸಿದ ಬಿಜೆಪಿ ಮುಖಂಡ, 6 ತಿಂಗ್ಳು ನಾಟಕವಾಡಿದ್ಲು ಕಿಲ್ಲರ್ ಕೌನ್ಸಿಲರ್!

ಸಾಲ ಮರುಪಾವತಿಸಲು ಸಾಧ್ಯವಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಪತಿಗೆ ಹೊಳೆದಿದ್ದು, ಪತ್ನಿಯ ವಿಮೆ. ಪತ್ನಿಯನ್ನೇ ಕೊಂದು ವಿಮೆ ಮೊತ್ತದಿಂದ ಬರುವ ಹಣದಿಂದ ಸಾಲ ಮರುಪಾವತಿಸಲು ಸಾಧ್ಯ. ಇನ್ನುಳಿದ ಹಣದಲ್ಲಿ ಲೈಫ್ ಸೆಟಲ್ ಆಗಲು ಸಾಧ್ಯವಿದೆ ಎಂದು ಆತ ನಿರ್ಧರಿಸಿದ್ದ. ಇದಕ್ಕಾಗಿ ಪತ್ನಿಯನ್ನು ಹೇಗೆ ಕೊಲ್ಲಬೇಕು ಅನ್ನೋದು ತಿಳಿಯಲು ಹಲವು ಯೂಟ್ಯೂಟ್ ವಿಡಿಯೋಗಳನ್ನು ನೋಡಿದ್ದಾರೆ. ಸುದ್ದಿ ವಾಹಿನಿಯಲ್ಲಿ ಬರವು ಕ್ರೈಮ್ ಸ್ಟೋರಿಗಳನ್ನು ನೋಡಿದ್ದಾನೆ. ಇಲ್ಲಿ ಆರೋಪಿಗಳ ಪ್ಲಾನ್, ಮರ್ಡರ್‌ಗೆ ಆಯ್ದುಕೊಂಡ ಮಾರ್ಗ, ಪೊಲೀಸರು ಯಾವ ಕಾರಣಕ್ಕೆ ಆರೋಪಿಗಳನ್ನು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಅನ್ನೋದನ್ನು ಗಮಿನಿಸಿದ್ದಾನೆ. ಬಳಿಕ ಗುಂಡಿಕ್ಕಿ ಕೊಲ್ಲುವ ಐಡಿಯಾ ಮಾಡಿದ್ದಾನೆ. 

 

Bengaluru Murder: ಕಳ್ಳತನ ಮಾಡಲು ಬಂದ ವ್ಯಕ್ತಿಯ ಕೊಲೆ..!

ಪತ್ನಿ ಮನೆಗೆ ಆಗಮಿಸುತ್ತಿದ್ದಂತೆ ಗುಂಡಿಕ್ಕಿದ್ದಾನೆ. ಬಳಿಕ ಪತ್ನಿಯನ್ನು ಆಸ್ಪತ್ರೆ ದಾಖಲಿಸಿ ನಾಟಕ ಆಡಿದ್ದಾನೆ. ನಾಲ್ವರ ಮೇಲೆ ಅನುಮಾನ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಈತನ ಮೇಲೆ ಅನುಮಾನಗೊಂಡಿದ್ದಾರೆ. ಇದಕ್ಕಾಗಿ ಪೊಲೀಸರು ಬಲ ಪ್ರಯೋಗಿಸಿದಾಗ ಈತ ಎಲ್ಲಾ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ.

click me!