Bengaluru Murder: ಕಳ್ಳತನ ಮಾಡಲು ಬಂದ ವ್ಯಕ್ತಿಯ ಕೊಲೆ..!

By Ravi Nayak  |  First Published Aug 7, 2022, 12:43 PM IST

ಬೈಕ್ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿಯ ದ್ವಾರಕ ನಗರದಲ್ಲಿ ನಡೆದಿದೆ. ಅಮರನಾಥ್ ಮಹಾತೋ ಕೊಲೆಯಾದ ವ್ಯಕ್ತಿಯಾಗಿದ್ದು, "ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್" ನಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಸಿಕ್ಕಿಬಿದ್ದು ಕೊಲೆಯಾಗಿದ್ದಾನೆ


ಬೆಂಗಳೂರು ಆ.7: ಬೈಕ್ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿಯ ದ್ವಾರಕ ನಗರದಲ್ಲಿ ನಡೆದಿದೆ. ಅಮರನಾಥ್ ಮಹಾತೋ ಕೊಲೆಯಾದ ವ್ಯಕ್ತಿಯಾಗಿದ್ದು, "ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್" ನಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಸಿಕ್ಕಿಬಿದ್ದು ಕೊಲೆಯಾಗಿದ್ದಾನೆ.  ಈ ಹಿಂದೆ ಹಲವು ಬಾರಿ ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಕಳುವು ಮಾಡಿದ್ದ ಆರೋಪಿ. ಮತ್ತೊಮ್ಮೆ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಪದೇ ಪದೆ ಕಳ್ಳತನವಾಗುತ್ತಿರುವ ಹಿನ್ನೆಲೆ ಈ ಬಾರಿ ಯಾರು ಬರ್ತಾರೆ ನೋಡುವ ಎಂದು ಮಾಲೀಕಕರುಣಾಕರನ್ ಅಂಡ್ ಟೀಂ../ ಕಾಯ್ದು ಕುಳಿತಿದ್ದ.\

ಕೋಲಾರ: ಆರೆಸ್ಸೆಸ್‌ ಮುಖಂಡನ ಮೇಲೆ ಹಲ್ಲೆ, ಕೊಲೆಗೆ ಯತ್ನ

Tap to resize

Latest Videos

ಬೆಳಗಿನ ಜಾವ ಕಳ್ಳತನಕ್ಕೆ ಯತ್ನ: ಬೆಳಗಿನ ವೇಳೆ ಜನರ ಓಡಾಟ ಕಡಿಮೆ ಎಂಬುದನ್ನ ತಿಳಿದುಕೊಂಡಿದ್ದ ಕಳ್ಳ. ಕಳ್ಳತನಕ್ಕೆ ಇಳಿಯಲು ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಕಳ್ಳತನಕ್ಕೆ ಇಳಿದಿದ್ದ ಅಮರನಾಥ್. ಆದರೆ ಅದಾಗಲೇ ಕಾಯ್ದು ಕುಳಿತಿದ್ದ ಮಾಲೀಕ  ಮತ್ತು ಅವನ ಟೀಂ. ಕಬ್ಬಿಣ ಕದಿಯುವಾಗ ಅಮರನಾಥ್ ಸಿಕ್ಕಿಬಿದ್ದಿದ್ದಾನೆ. ಹಿಗ್ಗಮುಗ್ಗ ಥಳಿಸಿ ಕೊಂದಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿ ಬಿಸಾಕಿ ಸೀನ್ ಕ್ರಿಯೆಟ್ ಮಾಡಿದ್ದ ಆರೋಪಿಗಳು. ಈ ಘಟನೆಯನ್ನು ತಾವೇ ನೋಡಿದಂತೆ ನಂಬಿಸಿ ಬಿಂಬಿಸಿ ಯಲಹಂಕ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದಾರೆ. ಸದ್ಯ ಕೊಲೆ ಮಾಡಿರುವ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ಹ್ಯಾಂಡ್‌ಲಾಕ್ ಮುರಿದು ಕಳ್ಳತನ ಮಾಡ್ತಿದ್ದ ಖದೀಮರ ಬಂಧನ: 

ಬೆಂಗಳೂರು ಜ್ಞಾನಭಾರತಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ. ಪಾರ್ಕ್, ಮನೆಮುಂದೆ ನಿಲ್ಲಿಸಿರುತ್ತಿದ್ದ ಬೈಕ್‌ಗಳೇ ಇವರ ಟಾರ್ಗೆಟ್ ಆಗಿದ್ದು.  ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡ್ತಿದ್ದರು.\

ಬುದ್ಧಿಮಾಂದ್ಯ ಮಗು, ತಾಳ್ಮೆ ಹೀನ ಅಮ್ಮ: ದೇಶವನ್ನೇ ಬೆಚ್ಚಿ ಬೀಳಿಸಿದ ವಿಲಕ್ಷಣ ಹತ್ಯೆ

ಪ್ರಸನ್ನ ಕುಮಾರ್ ಅಲಿಯಾಸ್ ಗಬ್ಬರ್  ಹಾಗೂ ಭರತ ಅಲಿಯಾಸ್ ಕರಿ ಭರತ ಬಂಧಿತ ಆರೋಪಿಗಳು.. ರಾತ್ರಿವೇಳೆ ಬೈಕ್ ಹ್ಯಾಂಡಲ್ ಲಾಕ್ ಮುರಿದು ಬೈಕ್ ಎಗರಿಸುತ್ತಿದ್ದ ಖದೀಮರು.. ಆರೋಪಿಗಳ ಬಂಧನದಿಂದ 7 ಬೈಕ್ ಕಳವು ಪ್ರಕರಣಗಳು ಬೆಳಕಿಗೆ. ಬಂಧಿತರಿಂದ 6 ಬೈಕ್, ಒಂದು ಕಾರ್ ವಶಕ್ಕೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಹಳೆ ದ್ವೇಷದ ಹಿನ್ನೆಲೆ ಕಲ್ಲು ಎತ್ತಿ ಹಾಕಿ ಕೊಲೆ: ಪಾಂಡುರಂಗ ಬೆಳಗಲಿ(38) ಕೊಲೆಯಾದ ವ್ಯಕ್ತಿ, ಬೇಡರಹಟ್ಟಿ ಗ್ರಾಮದ ನಿವಾಸಿಯಾಗಿರುವ ಪಾಂಡುರಂಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ, ಬೇಡರಹಟ್ಟಿ ಹಾಗೂ ಅಡಹಳ್ಳಿ ಗ್ರಾಮದ ಮಧ್ಯೆ ಕೊಲೆ, ಕೊಲೆ ಮಾಡಿ ರಸ್ತೆಯ ಮೇಲೆ ಶವ ಬಿಸಾಡಿ ಹೋದ ಕೀಚಕರು. ಸ್ಥಳಕ್ಕೆ ಐಗಳಿ ಪೊಲೀಸರ ಭೇಟಿ ಪರಿಶೀಲನೆ, ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟ‌ನೆ

click me!