
ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಟ್ರಕ್‌ನಿಂದ 2 ಚೀಲ ಗೋಧಿಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರಿಗೆ ಶಿಕ್ಷೆಯಾಗಿ ಟ್ರಕ್‌ನ ಬಾನೆಟ್‌ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರದಿಂದ ವೈರಲ್ ಆಗಿದೆ. ಟ್ರಕ್ ಚಾಲಕನ ಸಹಾಯಕ ಆತನ ಪಕ್ಕದಲ್ಲಿ ಕುಳಿತಿದ್ದಾಗ ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿಹಾಕಲಾಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಮಧ್ಯೆ, ಕಟ್ಟಿ ಹಾಕಲಾದ ವ್ಯಕ್ತಿ 2 ಚೀಲ ಗೋಧಿಯನ್ನು ಕದ್ದಿದ್ದು ಈ ಹಿನ್ನೆಲೆ ಅವನನ್ನು ಬಸ್ ನಿಲ್ದಾಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿರುವುದನ್ನು ಸಹಾಯಕ ಹೇಳುವುದನ್ನು ಇನ್ನೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರು ಕೇಳಿಸಿಕೊಂಡಿದ್ದಾರೆ.
ಇದನ್ನು ಓದಿ: ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ, ಕೈಗೆ ಕೋಳ ತೊಡಿಸಿ ಗಲ್ಲಿ ಮೆರವಣಿಗೆ
ಇನ್ನೊಂದೆಡೆ, ಈ ಘಟನೆಗೆ ಸಂಬಂಧಿಸಿದ ಎರಡು ವಿಡಿಯೋಗಳನ್ನು ನಾವು ನೋಡಿದ್ದೇವೆ ಎಂದು ಪಂಜಾಬ್‌ನ ಮುಕ್ತಸರ್ ನಗರ ಪೊಲೀಸರು ಹೇಳಿದ್ದಾರೆ. ಈ ಪೈಕಿ, ಒಂದು ವಿಡಿಯೋದಲ್ಲಿ ವ್ಯಕ್ತಿ ಟ್ರಕ್‌ನಿಂದ ಗೋಧಿ ಚೀಲಗಳನ್ನು ಕದಿಯುತ್ತಿರುವುದನ್ನು ನೋಡಲಾಗಿದೆ, ಮತ್ತು ಇನ್ನೊಂದು ವಿಡಿಯೋದಲ್ಲಿ ಅದೇ ವ್ಯಕ್ತಿಯನ್ನು ಟ್ರಕ್‌ನ ಬಾನೆಟ್‌ಗೆ ಕಟ್ಟಿ, ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದೂ ಪಂಜಾಬ್‌ನ ಮುಕ್ತಸರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 8 ವರ್ಷದ ಮಗನಿಗೆ ಚೀನಾ ದಂಪತಿ ನೀಡಿದ್ದಾರೆ ಇಂಥ Punishment..!
ಇದೇ ರೀತಿ, ಇತ್ತೀಚೆಗೆ ಅಪರಿಚಿತರ ಮದುವೆಗೆ ಹೋಗಿ ಊಟ ಮಾಡಿದ್ದ ವಿದ್ಯಾರ್ಥಿಯೊಬ್ಬರಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಲಾಗಿತ್ತು. ಕೆಲವರು ತಮಾಷೆಗಾಗಿ ಮತ್ತೆ ಕೆಲವರು ಮದುವೆಯಲ್ಲಿರುವ ಭೂರಿ ಬೋಜನದ ರುಚಿ ಸವಿಯಲು, ಅಪರಿಚಿತರ ಮದುಗೆ ಹೋಗಿ ಅವರ ನೆಂಟರು ಬಂಧುಗಳಂತೆ ಅಲ್ಲಿ ಊಟ ಮಾಡಿ ಬರುವವರಿದ್ದಾರೆ. ನಗರದ ಮದುವೆಗಳನ್ನು ಬಹುತೇಕ ಈವೆಂಟ್ ಮ್ಯಾನೇಜ್‌ಮೆಂಟ್‌ನವರೇ ನಡೆಸಿ ಕೊಡುವುದರಿಂದ ಅನೇಕರಿಗೆ ಅಪರಿಚಿತರು ಬಂದರೂ ತಿಳಿಯುವುದಿಲ್ಲ. ಈ ವಿಚಾರವನ್ನೇ ಬಂಡವಾಳವಾಗಿಸಿಕೊಂಡು ಮದುವೆ ಮನೆಗೆ ಹೋಗಿ ಭರ್ಜರಿಯಾಗಿ ಊಟ ಮಾಡಿದವ ಅಲ್ಲಿ ಮದುವೆ ಮನೆ ಮಂದಿಗೆ ಸಿಕ್ಕಿ ಬಿದ್ದಿದ್ದಾನೆ. ಮದ್ವೆ ಮನೆಯವರು ಆತನಿಗೆ ಪಾತ್ರ ತೊಳೆಯುವ ಶಿಕ್ಷೆ ನೀಡಿದ್ದ ಘಟನೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಹಾಗೂ, ಎಂಬಿಎ ಓದುತ್ತಿದ್ದ ವಿದ್ಯಾರ್ಥಿ ಈ ರೀತಿ ಅಪರಿಚಿತರ ಮದುವೆಗೆ ಹೋಗಿದ್ದ ಎಂದೂ ತಿಳಿದುಬಂದಿದೆ.
ಇನ್ನೊಂದೆಡೆ, ಚೀನಾದ 8 ವರ್ಷದ ಬಾಲಕ ಅತಿಯಾಗಿ ಟಿವಿ ವೀಕ್ಷಣೆ ಮಾಡ್ತಿದ್ದ ಅಂತ ಅತಿಯಾಗಿ ಟಿವಿ ನೋಡುವ ಮಗುವಿನ ಅಭ್ಯಾಸದಿಂದ ಅಸಮಾಧಾನಗೊಂಡ ಈ ಚೀನಾದ ದಂಪತಿ ರಾತ್ರಿಯಿಡೀ ಟಿವಿ ನೋಡುವಂತೆ ಮಗುವಿಗೆ ಶಿಕ್ಷೆ ವಿಧಿಸಿದ್ದ ಘಟನೆ ನೆದಿತ್ತು ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ತಮಾಷೆಗೆಂದು ಅಪರಿಚಿತರ ಮದ್ವೆಗೆ ಹೋಗಿ ಊಟ ಮಾಡದಿರೀ ಜೋಕೆ... ಇಲ್ಲೇನಾಯ್ತು ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ