Bengaluru Crime: ಅಪ್ರಾಪ್ತೆ ಮೇಲೆ ಅತ್ಯಾಚಾರ: ವೃದ್ಧನ ಹೊಡೆದು ಕೊಂದ ಕುಟುಂಬಸ್ಥರು

Published : Dec 12, 2022, 12:52 PM ISTUpdated : Dec 12, 2022, 05:31 PM IST
Bengaluru Crime:  ಅಪ್ರಾಪ್ತೆ ಮೇಲೆ ಅತ್ಯಾಚಾರ: ವೃದ್ಧನ ಹೊಡೆದು ಕೊಂದ ಕುಟುಂಬಸ್ಥರು

ಸಾರಾಂಶ

ಹೆಣ್ಣೂರು ಬಳಿ 16 ವರ್ಷದ ಅಪ್ರಾಪ್ತ ಬಾಲಕಿಗೆ ಜ್ಯೂಸ್‌ನಲ್ಲಿ ಆಲ್ಕೋಹಾಲ್‌ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಮಾಡಿದ್ದ, ವೃದ್ಧ ಕುಪ್ಪಣ್ಣ (73)ನನ್ನು ಬಾಲಕಿಯ ಸಂಬಂಧಿಕರು ಕೊಲೆ ಮಾಡಿರುವ ಘಟನೆ ನಡೆದಿದೆ. 

ಬೆಂಗಳೂರು (ಡಿ.12): ಬೆಂಗಳೂರಿನ ಹೆಣ್ಣೂರು ಬಳಿ 16 ವರ್ಷದ ಅಪ್ರಾಪ್ತ ಬಾಲಕಿಗೆ ಜ್ಯೂಸ್‌ನಲ್ಲಿ ಆಲ್ಕೋಹಾಲ್‌ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರ ಮಾಡಿದ್ದ, ವೃದ್ಧ ಕುಪ್ಪಣ್ಣ (73)ನನ್ನು ಬಾಲಕಿಯ ಸಂಬಂಧಿಕರು ಕೊಲೆ ಮಾಡಿರುವ ಘಟನೆ ನಡೆದಿದೆ. 

ಹೆಣ್ಣೂರಿನ ಬಾಬುಬಸಾಬ್‌ ಪಾಳ್ಯದಲ್ಲಿ (Babusabpalya) ಹಲವು ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಕುಪ್ಪಣ್ಣ ತನಗೆ 4 ವರ್ಷದಿಂದ ಪರಿಚಯವಿದ್ದ ಬಾಲಕಿಯನ್ನು ಜ್ಯೂಸ್‌ (Juce) ಕೊಡುವುದಾಗಿ ಮನೆಗೆ ಕರೆದಿದ್ದಾನೆ. ವೃದ್ಧನನ್ನು ನಂಬಿಕೊಂಡು ಜ್ಯೂಸ್‌ ಕುಡಿಯಲು ಹೋದ ಬಾಲಕಿಗೆ ಜ್ಯೂಸ್‌ನಲ್ಲಿ ಮಧ್ಯವನ್ನು ಮಿಶ್ರಣ ಮಾಡಿ ಕುಡಿಸಿದ್ದಾನೆ. ನಂತರ, ಬಾಲಕಿಗೆ ಮತ್ತೇರಿದ ನಂತರ ಬಲವಂತವಾಗಿ ಅತ್ಯಾಚಾರ (Rape) ಮಾಡಿದ್ದಾನೆ. ಘಟನೆ ವಿಚಾರವನ್ನು ಬಾಲಕಿ ಕಣ್ಣೀರು ಹಾಕುತ್ತ ಮನೆಯವರಿಗೆ ವಿವರವಾಗಿ ತಿಳಿಸಿದ್ದಾಳೆ. ಆಗ ಬಾಲಕಿ ಕುಟಂಬದ ಮೂವರು ಕುಪ್ಪಣ್ಣ ಮನೆಯಲ್ಲಿರುವುದನ್ನು ಗಮನಿಸಿ ಹೋಗಿ ಆತನ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ (Murder) ಮಾಡಿದ್ದಾರೆ ಎಂದು ತಿಳಿದುಬಂದಿದೆ.

Davanagere Crime News: 80 ವರ್ಷದ ಒಂಟಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ 30ರ ಯುವಕ

ಬಟ್ಟೆ ತರಲು ಹೋಗಿದ್ದ ಬಾಲಕಿ: ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ (Bheemashankar guled) ಅವರು, ಕುಪ್ಪಣ್ಣ ಕಳೆದ  ನಾಲ್ಕು ವರ್ಷಗಳಿಂದ ಬಾಬುಸಾಪಾಳ್ಯದಲ್ಲಿ ವಾಸವಿದ್ದನು. ಕುಪ್ಪಣ್ಣ ಮೂಲತಃ ತಮಿಳುನಾಡು (Tamilnadu) ಮೂಲದವನು. ಅಪ್ರಾಪ್ತ ಬಾಲಕಿ (Minor girl) ಕೂಡ ಪಕ್ಕದ ಮನೆಯಲ್ಲಿ ವಾಸವಾಗಿದ್ದಳು. ಮನೆಯ ಮೇಲೆ ಒಣಗಿಸಲು ಹಾಕಿದ್ದ ಬಟ್ಟೆ (Cloths) ತರಲು ಬಾಲಕಿ ಮಧ್ಯಾಹ್ನ ಮಹಡಿ ಮೇಲೆ ತೆರಳಿದ್ದಳು. ಈ ವೇಳೆ ಮನೆಯ ಒಳಗೆ ಬಾಲಕಿಯನ್ನು ವೃದ್ಧ ಕರೆದಿದ್ದಾನೆ. ನಂತರ ಬಾಲಕಿಗೆ ಜೂಸ್ ಕೊಟ್ಟು ಕುಡಿಯಲು ಹೇಳಿದ್ದಾನೆ. ಜೂಸ್ ಕುಡಿದಿದ್ದೇ ಅಸ್ವಸ್ಥವಾಗಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸಂಜೆಯಾದರೂ ಬಾಲಕಿ ಮನೆಗೆ ಬಾರದಿದ್ದಾಗ ಮನೆಯವರು ಬಾಲಕಿಗಾಗಿ ಹುಡುಕಾಡಿದ್ದಾರೆ ಎಂದು ಹೇಳಿದರು.

ಅಸ್ವಸ್ಥವಾಗಿ ಬಿದ್ದಿದ್ದ ಬಾಲಕಿ: ಮಹಡಿ ಮನೆಯಲ್ಲಿರುವ ವೃದ್ಧ ಕುಪ್ಪಣ್ಣನ ಮನೆಯಲ್ಲಿ ಸಂಜೆ ವೇಳೆ ಬಾಲಕಿ ಅಸ್ವಸ್ಥವಾಗಿ ಬಿದ್ದಿರೋದು ಗೊತ್ತಾಗುತ್ತದೆ. ತಕ್ಷಣವೇ ಬಾಲಕಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ (Hospital) ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಘಟನೆ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಕುಪ್ಪಣ್ಣನ ಮನೆಗೆ ಹೋಗಿ ಥಳಿಸಿದ್ದಾರೆ. ಬಾಲಕಿ ಮನೆಯವರು ಥಳಿಸಿದ ಬಳಿಕ ಮನೆಗೆ ವಾಪಸ್ಸಾಗಿದ್ದು, ಮುಂಜಾನೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವೇಳೆ ಮನೆಯ ಬಳಿ ಪೊಲೀಸರು ಹೋಗಿ ನೋಡಿದಾಗ ವೃದ್ದ (Old Man) ಮೃತಪಟ್ಟಿದ್ದನು. ವೃದ್ಧ ಕುಪ್ಪಣ್ಣ ಗಾರೆ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ವಾಸವಾಗಿದ್ದ ಎಂದು ತಿಳಿಸಿದ್ದಾರೆ. 

ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಇರಲಿ ಎಚ್ಚರ!

ಮನೆಯಲ್ಲಿಯೇ ಹೊಡೆದು ಕೊಲೆ: ಬಾಲಕಿ ಹೇಳಿದ ವಿಚಾರದಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ವೃದ್ಧನ ಮನೆಗೆ ನುಗ್ಗಿ ಮನೆಯಲ್ಲಿಯೇ ಕುಪ್ಪಣ್ಣನನ್ನು ಹೊಡೆದು ಕೊಲೆ ಮಾಡಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ಪಡೆದು ಹೆಣ್ಣೂರು ಪೊಲೀಸರು ವಿಚಾರಣೆ ಮಾಡುತತಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಕುರಿತು ಎರಡು ಪ್ರಕರಣಗಳು ದಾಖಲಾಗಿವೆ. ಕುಪ್ಪಣ್ಣ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ಹಾಗೂ ಸಂತ್ರಸ್ಥ ಬಾಲಕಿ ಮನೆಯವರ ಮೇಲೆ ಕುಪ್ಪಣ್ಣನನ್ನು ಕೊಲೆ ಮಾಡಿದ ಕೇಸ್ ದಾಖಲಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ