
ಹಾಲು (milk) ಆರೋಗ್ಯಕ್ಕೆ ಒಳ್ಳೆಯದು. ಕ್ಯಾಲ್ಸಿಯಂ ಮೂಲವಾಗಿರುವ ಹಾಲು ನಾನಾ ರೋಗಕ್ಕೆ ಮದ್ದು. ಬೆಳಿಗ್ಗೆ ಎದ್ದ ತಕ್ಷಣ ಕುಡಿಯೋ ಬೆಡ್ ಟೀ, ಕಾಫಿಯಿಂದ ರಾತ್ರಿ ಮಲಗುವವರೆಗೂ ನಾವು ನಾನಾ ರೀತಿಯಲ್ಲಿ ಹಾಲನ್ನು ಬಳಸ್ತೇವೆ. ಆದ್ರೆ ಶುದ್ಧ ಅಂದ್ಕೊಂಡಿದ್ದ ಹಾಲನ್ನು ಜನರು ಹಣದಾಸೆಗೆ ಕಲುಷಿತ ಮಾಡ್ತಿದ್ದಾರೆ. ನಾವು ಕುಡಿಯುತ್ತಿರೋ ಕೆಲ ಹಾಲು ಹಸು, ಎಮ್ಮೆಯದ್ದಲ್ವೇ ಅಲ್ಲ. ಕೆಮಿಕಲ್ ಬಳಸಿ ಕೃತಕವಾಗಿ ಹಾಲು ತಯಾರಿಸಿ ಗ್ರಾಹಕರಿಗೆ ಬರೀ ಮೋಸ ಮಾಡ್ತಿಲ್ಲ, ಅವರ ಜೀವದ ಜೊತೆ ಆಟ ಆಡ್ತಿದ್ದಾರೆ. ಈಗ ಗುಜರಾತಿನಲ್ಲಿ ರಾಸಾಯನಿಕ ಬಳಸಿ ನಕಲಿ ಮಜ್ಜಿಗೆ, ಹಾಲು ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದು ಪತ್ತೆಯಾಗಿದೆ.
ಗುಜರಾತ್ನ ಸಬರ್ಕಾಂತದಲ್ಲಿ ಡಿಟರ್ಜೆಂಟ್, ಯೂರಿಯಾ ಮತ್ತು ಇತರ ರಾಸಾಯನಿಕಗಳನ್ನು ಬಳಸಿ ನಕಲಿ ಹಾಲು ಮತ್ತು ಮಜ್ಜಿಗೆ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪತ್ತೆಹಚ್ಚಲಾಗಿದೆ. ಈ ಕಾರ್ಖಾನೆ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಅಧಿಕಾರಿಗಳು 7.1 ಲಕ್ಷ ಮೌಲ್ಯದ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ್ದ ಸುಚಿತ್ರಾ! ಈಕೆ ಹುಡುಗರನ್ನು ಪಟಾಯಿಸ್ತಿದ್ದ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ. ಶ್ರೀ ಸತ್ಯ ಡೈರಿ ಪ್ರಾಡಕ್ಟ್ಸ್ ಎಂಬ ಘಟಕದಲ್ಲಿ ದಾಳಿ ನಡೆಸಲಾಗಿದ್ದು, ಅಲ್ಲಿ ನೀರು, ಹಾಲಿನ ಪುಡಿ, ಕಾಸ್ಟಿಕ್ ಸೋಡಾ, ಸಂಸ್ಕರಿಸಿದ ಪಾಮ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ, ಡಿಟರ್ಜೆಂಟ್ ಪೌಡರ್ ಮತ್ತು ಯೂರಿಯಾ ಗೊಬ್ಬರವನ್ನು ಬೆರೆಸಿ ಹಾಲು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾಎ, ಆರೋಪಿಗಳು ಪ್ರತಿದಿನ 1,700 ರಿಂದ 1,800 ಲೀಟರ್ ಹಾಲು ಉತ್ಪಾದಿಸಲು 300 ಲೀಟರ್ ನಿಜವಾದ ಹಾಲನ್ನು ವಿವಿಧ ರಾಸಾಯನಿಕಗಳೊಂದಿಗೆ ಬೆರೆಸುತ್ತಿದ್ದರು. ನಂತರ ಈ ಹಾಲನ್ನು ಪ್ಯಾಕ್ ಮಾಡಿ ಹಳ್ಳಿಗಳಿಗೆ ಸರಬರಾಜು ಮಾಡುತ್ತಿದ್ದರು. ಪೊಲೀಸರು ವಶಪಡಿಸಿಕೊಂಡ ಕಲಬೆರಕೆ ವಸ್ತುಗಳಲ್ಲಿ 450 ಕೆಜಿ ಹಾಲೊಡಕು ಪುಡಿ, 625 ಕೆಜಿ ಕೆನೆ ತೆಗೆದ ಹಾಲಿನ ಪುಡಿ, 300 ಕೆಜಿ ಪ್ರೀಮಿಯಂ ಎಸ್ಎಂಪಿ ಪುಡಿ, ಯೂರಿಯಾ ಗೊಬ್ಬರ, ಕಾಸ್ಟಿಕ್ ಸೋಡಾ, ಡಿಟರ್ಜೆಂಟ್ ಪೌಡರ್, ಸೋಯಾಬೀನ್ ಎಣ್ಣೆ ಮತ್ತು ಪಾಮ್ ಎಣ್ಣೆ ಸೇರಿವೆ. ಮಾರಾಟಕ್ಕೆ ಸಿದ್ಧವಾಗಿದ್ದ 1,962 ಲೀಟರ್ ಕಲಬೆರಕೆ ಹಾಲು ಮತ್ತು 1,180 ಲೀಟರ್ ಕಲಬೆರಕೆ ಮಜ್ಜಿಗೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಬೇಟೆ, ಕೇರಳದಲ್ಲಿ ಹುಲಿ ಚರ್ಮ, ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಖದೀಮರ ಬಂಧನ
ಹಾಲು ದಪ್ಪವಾಗಿದೆ, ಪ್ರೋಟೀನ್ ಅಂಶದಿಂದ ಕೂಡಿದೆ ಎಂಬುದನ್ನು ತೋರಿಸಲು ಈ ಎಲ್ಲ ಕಲಬೆರಿಕೆಯನ್ನು ಬಳಸಲಾಗುತ್ತಿತ್ತು. ನಿರ್ದಿಷ್ಟ ಮಾಹಿತಿಯ ಮೇರೆಗೆ, ಸ್ಥಳೀಯ ಅಪರಾಧ ವಿಭಾಗ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ, ಆಹಾರ ಮತ್ತು ಔಷಧ ಇಲಾಖೆಯ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಅಧಿಕಾರಿಗಳು ಹಾಲಿನ ಉತ್ಪಾದನೆ ಮತ್ತು ಪ್ಯಾಕೇಜಿಂಗ್ನಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕಗಳು, ಕಲಬೆರಕೆ ವಸ್ತುಗಳು ಮತ್ತು ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ವಸ್ತುಗಳ ಸಂಖ್ಯೆ ಹೆಚ್ಚಾಗಿದೆ. ಹಣ್ಣಿನಿಂದ ಹಿಡಿದು ಬೇಳೆಕಾಳು, ಹಾಲಿನವರೆಗೆ ಎಲ್ಲವೂ ಕಲಬೆರಿಕೆಯಾಗಿದ್ದು, ಖರೀದಿ ವೇಳೆ ಎಷ್ಟು ಎಚ್ಚರಿಕೆವಹಿಸಿದ್ರೂ ಸಾಲ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ