ಮೈಗೆ ಎಣ್ಣೆ ಸವರಿಕೊಂಡು ಬೆತ್ತಲಾಗಿ ಕಳವಿಗೆ ಇಳಿಯುತ್ತಿದ್ದ ಖದೀಮ ಅಂದರ್

By Anusha KbFirst Published Sep 23, 2022, 4:57 PM IST
Highlights

ಮೈಗೆ ಎಣ್ಣೆ ಉಜ್ಜಿಕೊಂಡು ಸಂಪೂರ್ಣ ಬೆತ್ತಲಾಗಿ ಕಳ್ಳತನಕ್ಕೆ ಇಳಿದು ಹಲವು ಮನೆಗಳನ್ನು ದೋಚಿದ ವಿಚಿತ್ರ ಕಳ್ಳನೋರ್ವನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ.

ಥಾಣೆ: ಕಳ್ಳರು ಸ್ಮಾರ್ಟ್‌ಫೋನ್ ತರ ಇತ್ತೀಚೆಗೆ ಬಹಳ ಸ್ಮಾರ್ಟ್ ಆಗುತ್ತಿದ್ದಾರೆ. ಮೈಗೆ ಎಣ್ಣೆ ಉಜ್ಜಿಕೊಂಡು ಸಂಪೂರ್ಣ ಬೆತ್ತಲಾಗಿ ಕಳ್ಳತನಕ್ಕೆ ಇಳಿದು ಹಲವು ಮನೆಗಳನ್ನು ದೋಚಿದ ವಿಚಿತ್ರ ಕಳ್ಳನೋರ್ವನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. 24 ವರ್ಷದ ಈ ಕಳ್ಳ ಕಳವು ಕೃತ್ಯಕ್ಕೆ ತೆರಳುವ ಮುನ್ನ ಮೈ ಪೂರ್ತಿ ಚೆನ್ನಾಗಿ ಎಣ್ಣೆ ಸವರಿಕೊಳ್ಳುತ್ತಿದ್ದ, ನಂತರ ಸಂಪೂರ್ಣ ಬೆತ್ತಲಾಗಿ ಕಳವಿಗೆ ನಸುಕಿನ ಜಾವದಲ್ಲಿ ಮನೆಗಳ ಕಳ್ಳತನಕ್ಕೆ ಇಳಿಯುತ್ತಿದ್ದ. 

ಈತ ಹೀಗೆ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಅಲ್ಲಿ ಸುತ್ತಮುತ್ತಲಿದ್ದ ಸಿಸಿಟಿವಿಗಳಲ್ಲಿ (cctv) ಸೆರೆ ಆಗಿತ್ತು. ಇದಾದ ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಆಗಿದ್ದು, ಇದನ್ನು ನೋಡಿದ ಅಲ್ಲಿನ ನಿವಾಸಿಗಳು ಭಯಗೊಂಡಿದ್ದರು. ಇದಾದ ಬಳಿಕ ಥಾಣೆಯ (Thane) ರಬಲೆ (Rabale) ಪೊಲೀಸರು ಈ ವಿಲಕ್ಷಣ ವರ್ತನೆಯ ಕಳ್ಳನಿಗಾಗಿ ಬಲೆ ಬೀಸಿದ್ದು, ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  

ಖತರ್ನಾಕ್ ಕಳ್ಳರನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು

ಈ ಕಳ್ಳ ಮಧ್ಯರಾತ್ರಿಯ ನಂತರ ಹಾಗೂ ನಸುಕಿನ ಜಾವದ (Wee hours) ಸಮಯದಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದ ಈತ ಜನರ ಅಮೂಲ್ಯ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ. ದರ ಜೊತೆಗೆ ಮೈಗೆ ಎಣ್ಣೆ ಉಜ್ಜಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ ಈತನನ್ನು ಹಿಡಿಯುವುದು ಪೊಲೀಸರಿಗೂ ಸವಾಲಿನ ವಿಚಾರವಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳು ಈತನ ಬಗ್ಗೆ ಮಹತ್ವದ ಸುಳಿವು ನೀಡಿದವು. ವಿಡಿಯೋ ವೈರಲ್ ಆಗಿದ್ದರಿಂದ ಆತನನ್ನು ಹಿಡಿಯವುದು ಪೊಲೀಸರಿಗೆ ನಿರ್ಣಾಯಕವಾಗಿತ್ತು. ಈ ಕಳ್ಳನಿಂದಾಗಿ ಜನರಲ್ಲಿ ಎದುರಾಗಿದ್ದ ಆತಂಕವನ್ನು ನಿವಾರಿಸುವ ಗುರಿಯನ್ನು ಪೊಲೀಸರು ಹೊಂದಿದ್ದರು ಎಂದು ರೆಬೆಲೆ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್  ಸುಧೀರ್ ಪಾಟೀಲ್ (Sudhir Patil) ಹೇಳಿದರು. 

ಈತನನ್ನು ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳ ಸಹಾಯದಿಂದಲೇ ಬಂಧಿಸಲಾಗಿದೆ ಈತನನ್ನು ಕಲ್ವಾದಲ್ಲಿ ಬಂಧಿಸಲಾಗಿದೆ. ಜನರಲ್ಲಿ ಉಂಟಾಗಿದ್ದ ಆತಂಕವನ್ನು ನಿವಾರಿಸಲು ಆತನನ್ನು ಸೆರೆ ಹಿಡಿಯುವುದು ನಮಗೆ ಅನಿವಾರ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಕಲ್ವಾ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈತನನ್ನು ಬಂಧಿಸುವ ವೇಳೆ ಈತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಮೊದಲು ವೈದ್ಯಕೀಯ ಚಿಕಿತ್ಸೆ ನೀಡಿ ಬಳಿಕ ಈ ಕಳ್ಳವು ಪ್ರಕರಣಗಳ ಬಗ್ಗೆ ಚೆನ್ನಾಗಿ ರುಬ್ಬಲು ಪೊಲೀಸರು ನಿರ್ಧರಿಸಿದ್ದಾರೆ.

ಹೈಕೋರ್ಟ್ ತರಾಟೆ, ಪೊಲೀಸ್ ಅಲರ್ಟ, ಖತರ್ನಾಕ್ ಕಳ್ಳಿಗಾಗಿ ಫೀಲ್ಡಿಗಿಳಿದ ಖಾಕಿ ಪಡೆ

ಒಮ್ಮೆ ಆತ ವೈದ್ಯಕೀಯವಾಗಿ ಸಧೃಡನಾಗಿದ್ದಾನೆ (Medically Fit) ಎಂದು ಘೋಷಣೆಯಾದ ನಂತರ ಆತ ಭಾಗಿಯಾದ ಕಳವು ಪ್ರಕರಣಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸುಧೀರ್ ಪಾಟೀಲ್ ಹೇಳಿದ್ದಾರೆ. ಆದರೆ ಈತ ಹೀಗೆ ವಿಚಿತ್ರವಾಗಿ ಕಳ್ಳತನಕ್ಕೆ ಇಳಿಯುತ್ತಿದ್ದಿದ್ದು ಏಕೆ ಎಂದು ಪೊಲೀಸರು ವಿಚಾರಿಸಿದ್ದು, ಬೆಲೆಬಾಳುವ ವಸ್ತುಗಳನ್ನು (Valuable things) ಕಳವು ಮಾಡಲು ಹಾಗೂ ಕಿರಿದಾದ ಜಾಗಗಳಲ್ಲಿ ಹೀಗೆ ಸಾಗಲು ಈತ ಈ ರೀತಿ ವಿಲಕ್ಷಣವಾಗಿ ಕಳ್ಳತನಕ್ಕೆ ಇಳಿದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಮೈಗೆ ಎಣ್ಣೆ ಸವರಿಕೊಂಡು ಕಳ್ಳತನಕ್ಕೆ ಇಳಿದ ಬಗ್ಗೆ ಪ್ರಶ್ನಿಸಿದಾಗ ಆತ ಒಂದು ವೇಳೆ ಜನರ ಕೈಗೆ ಸಿಕ್ಕರೆ ಸುಲಭವಾಗಿ ಜಾರಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಹೀಗೆ ಮಾಡಿದ್ದಾಗಿ ಹೇಳಿದ್ದಾಗಿ ತಿಳಿದು ಬಂದಿದೆ. 
 

click me!