ವಿಡಿಯೋವನ್ನು ಮೊದಲು ಮರಾಠಿ ನ್ಯೂಸ್ ಚಾನಲ್ ಲೋಕಶಾಹಿ ಪ್ರಸಾರ ಮಾಡಿದ್ದು, ಬಳಿಕ ಇದು ವೈರಲ್ ಆಗಿದೆ. 8 ತಾಸಿನ ವಿಡಿಯೋ ಬಹಿರಂಗವಾಗಿದ್ದು, ಮಹಿಳೆ ಜತೆ ಸೋಮಯ್ಯ ರಾಸಲೀಲೆ ನಡೆಸಿದ ದೃಶ್ಯಗಳಿವೆ ಎನ್ನಲಾಗಿದೆ.
ಮುಂಬೈ (ಜುಲೈ 19, 2023): ಮಹಾರಾಷ್ಟ್ರದ ರಾಜಕಿಯ ಬಿಕ್ಕಟ್ಟಿನ ನಡುವೆಯೇ ಬಿಜೆಪಿ ಮುಖಂಡ ಕಿರಿಟ್ ಸೋಮಯ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಡ್ ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ ಪ್ರಸಾರವಾದ ಬೆನ್ನಲ್ಲೇ ‘ಆಡಳಿತ ಮೈತ್ರಿಕೂಟದ ನಿಜವಾದ ಮುಖ ಈಗ ಹೊರಬಂದಿದೆ’ ಎಂದು ವಿಪಕ್ಷಗಳು ಟೀಕಿಸಿವೆ. ಆದರೆ ಈ ವಿಡಿಯೋ ನಕಲಿಯಾಗಿದ್ದು, ನಾನು ಯಾವ ಮಹಿಳೆಗೂ ಕಿರುಕುಳ ನೀಡಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಿರಿಟ್ ಸೋಮಯ್ಯ ಆಗ್ರಹಿಸಿದ್ದಾರೆ.
ವಿಡಿಯೋವನ್ನು ಮೊದಲು ಮರಾಠಿ ನ್ಯೂಸ್ ಚಾನಲ್ ಲೋಕಶಾಹಿ ಪ್ರಸಾರ ಮಾಡಿದ್ದು, ಬಳಿಕ ಇದು ವೈರಲ್ ಆಗಿದೆ. 8 ತಾಸಿನ ವಿಡಿಯೋ ಬಹಿರಂಗವಾಗಿದ್ದು, ಮಹಿಳೆ ಜತೆ ಸೋಮಯ್ಯ ರಾಸಲೀಲೆ ನಡೆಸಿದ ದೃಶ್ಯಗಳಿವೆ ಎನ್ನಲಾಗಿದೆ. ಆದರೆ ವಿಡಿಯೋದಲ್ಲಿನ ಮಹಿಳೆ ಈವರೆಗೂ ದೂರು ನೀಡಿಲ್ಲ. ‘ಹೀಗಾಗಿ ಮಹಿಳೆಯು ಕಾನೂನು ಮೇಲೆ ನಂಬಿಕೆ ಇರಿಸಿ ದೂರು ನೀಡಬೇಕು’ ಎಂದು ಮಹಾರಾಷ್ಟ್ರ ವಿಧಾನಪರಿಷತ್ ಉಪಸಭಾಪತಿ ನೀಲಂ ಗೋರೆ ಆಗ್ರಹಿಸಿದ್ದಾರೆ. ಇದರ ನಡುವೆ ಫಡ್ನವೀಸ್ ತನಿಖೆಗೆ ಆದೇಶಿಸಿದ್ದು, ‘ವಿಡಿಯೋದಲ್ಲಿನ ಮಹಿಳೆ ಪತ್ತೆ ಮಾಡಲಾಗುವುದು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು’ ಎಂದಿದ್ದಾರೆ.
ಇದನ್ನು ಓದಿ: ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ
ಆದರೆ ವಿಪಕ್ಷಗಳು, ‘ಆಡಳಿತ ಮೈತ್ರಿಕೂಟದ ಸ್ವಭಾವ ಮತ್ತು ನಿಜವಾದ ಮುಖ ಈಗ ಬಹಿರಂಗಗೊಂಡಿದೆ. ಕಿರಿಟ್ ಸೋಮಯ್ಯ ಹಲವು ಶಾಸಕರು ಮತ್ತು ಸಂಸದರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದಾರೆ. ಇದೀಗ ಸಾಕಷ್ಟು ಮಹಿಳೆಯರನ್ನು ಇ.ಡಿ. ತನಿಖೆ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಈಗ ಅವರು ಕಿರಿಟ್ ಸೋಮಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: 'ಮಹಾ' ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ; ಶರದ್ ಪವಾರ್‌ಗೆ ಮತ್ತೆ ಸೆಡ್ಡು; 9 ಎನ್‌ಸಿಪಿ ನಾಯಕರ ಸಾಥ್