ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಪ್ಲ್ಯಾನ್‌: ಐವರು ಶಂಕಿತ ಉಗ್ರರು ಅರೆಸ್ಟ್‌; ಮಾಸ್ಟರ್‌ಮೈಂಡ್‌ ಎಸ್ಕೇಪ್‌!

By BK Ashwin  |  First Published Jul 19, 2023, 9:00 AM IST

ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದ ಮಾಹಿತಿ ಮೇರೆಗೆ ಐವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.


ಬೆಂಗಳೂರು (ಜುಲೈ 19, 2023): ಬೆಂಗಳೂರಲ್ಲಿ ಶಂಕಿತ ಉಗ್ರರು ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಇವರನ್ನು ವಶಕ್ಕೆ ಪಡೆದಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದ ಮಾಹಿತಿ ಮೇರೆಗೆ ಐವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾನಿ ಸೇರಿ ಐವರ ಬಂಧನವಾಗಿದ್ದು, ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ. ಇನ್ನು, ಮಾಸ್ಟರ್‌ಮೈಂಡ್‌ ಜುನೈದ್‌ ಎಸ್ಕೇಪ್‌ ಆಗಿದ್ದಾನೆ ಎಂದೂ ವರದಿಯಾಗಿದೆ. 

ಐವರು ಶಂಕಿತ ಉಗ್ರರ ಬಳಿಯ ಮೊಬೈಲ್, ಅವರ ಬಳಿ ಸಿಕ್ಕಿರೋ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ಅವ್ರ ಮೊಬೈಲ್‌ಗಳನ್ನು ಪರಿಶೀಲನೆ ಮಾಡಲಾಗ್ತಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸಿಸಿಬಿ ಟೀಂ ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸ್ತಿದ್ದು, ಇನ್ನೂ ಇಬ್ಬರು ಇವ್ರ ಜೊತೆ ಲಿಂಕ್‌ನಲ್ಲಿರೋ ಮಾಹಿತಿ ಕೇಳಿಬಂದಿದೆ. 

Tap to resize

Latest Videos

ಇದನ್ನು ಓದಿ: ಬೆಳಗಾವಿ ಜೈಲಿಂದಲೇ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕರೆ: ಬೆದರಿಕೆ ಹಿಂದಿದೆ ಲಷ್ಕರ್‌ ಉಗ್ರರ ನಂಟು!

 ಈ ಹಿನ್ನೆಲೆ, ಆ ಇಬ್ಬರ ಬಗ್ಗೆಯೂ ಸಿಸಿಬಿ ಮಾಹಿತಿ ಕಲೆ ಹಾಕ್ತಿದ್ದು, ಮಡಿವಾಳ ಟೆಕ್ನಿಕಲ್ ಸೆಲ್‌ನಲ್ಲಿ ಶಂಕಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗಿದೆ. ಸಿಸಿಬಿ ವಶದಲ್ಲಿರೋ ಶಂಕಿತರು ಬೆಂಗಳೂರಿನ ಆರ್‌.ಟಿ. ನಗರದ ರೌಡಿಶೀಟರ್‌ಗಳಾಗಿದ್ದು, ಕೊರೊನಾ ಟೈಮಲ್ಲಿ ಓರ್ವನನ್ನ ಕಿಡ್ನ್ಯಾಪ್‌ ಮಾಡಿ ಕೊಲೆ ಮಾಡಿದ್ರು. ಈ ಎಲ್ಲರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಅವರ ಜೊತೆ ಕಾಂಟ್ಯಾಕ್ಟ್ ಮಾಡಿಕೊಂಡು ಟ್ರೈನಿಂಗ್ ಪಡೆದಿದ್ದ ಶಂಕಿತರು. ಬಳಿಕ, ಶಂಕಿತ ಉಗ್ರರು ಹೊರ ಬಂದು ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದರು ಎಂದು ತಿಳಿದುಬಂದಿದೆ. 

ಬಾಂಬ್‌ಗೆ ಬೇಕಾದ ರಾ ಮೆಟೀರಿಯಲ್ ಎಲ್ಲಾ ರೆಡಿ ಮಾಡಿದ್ರು. ಇವರ ಜೊತೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಪ್ಲ್ಯಾನ್‌ ನಡೆಸಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಇವರಿಗೆ ಲಿಂಕ್ ಇರೋ ಮತ್ತಷ್ಟು ಜನರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸದ್ಯ ಸಿಸಿಬಿ ಶಂಕಿತ ಉಗ್ರರ ತೀವ್ರ ವಿಚಾರಣೆ ಮಾಡ್ತಿದೆ. 

ಇದನ್ನೂ ಓದಿ: PubG ಲವ್‌: ಪಾಕ್‌ ಮಹಿಳೆ ವಾಪಸ್‌ ಕಳಿಸದಿದ್ದರೆ ಭಾರತದಲ್ಲಿ ಮತ್ತೊಂದು 26/ ಉಗ್ರ ದಾಳಿ; ಪೊಲೀಸರಿಗೆ ಬಂತು ಬೆದರಿಕೆ ಕರೆ!

ಶಂಕಿತ ಉಗ್ರರ ಮೇಜರ್ ಆಪರೇಷನ್ ಫೇಲ್ ಮಾಡಿದ ಸಿಸಿಬಿ..!

ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟ ನಡೆಸಲು ಶಂಕಿತರ ಟೀಂ ಎಲ್ಲ ಪ್ಲ್ಯಾನ್‌ ಮಾಡಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಜನರಿಂದ ಬೃಹತ್ ಸ್ಫೋಟಕ ಮಾಡೋ ಪ್ಲಾನ್ ನಡೀತಿದ್ದ ಮಾಹಿತಿ ಕೇಳಿಬಂದಿದೆ. ಬೆಂಗಳೂರು ಸಿಸಿಬಿ ಟೀಂಗೆ ಮಾಹಿತಿ ಸಿಕ್ಕ ಕೂಡಲೇ ಅಲರ್ಟ್ ಆಗಿದ್ದ ಟೀಂ ಶಂಕಿತರ ಲೊಕೇಶನ್ ಟ್ರೇಸ್ ಮಾಡಿದ್ರು. ಈ ಹಿನ್ನೆಲೆ ಬೃಹತ್ ಸ್ಫೋಟ ಪ್ಲ್ಯಾನ್‌ಗೆ ತಡೆ ಬಿದ್ದಿದೆ. 

ಕನಕನಗರದ ಸುಲ್ತನಾಪಾಳ್ಯದ ಮಸೀದಿ ಬಳಿ ಟೆರರ್ ಮೀಟಿಂಗ್ ವೇಳೆ ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದು, 2017 ರಲ್ಲಿ ಆರ್ ಟಿ ನಗರದ ನೂರ್ ಕೊಲೆ ಕೇಸ್‌ನಲ್ಲಿ ಬಂಧಿತರ ಪೈಕಿ ಐವರಿಗೆ ಟೆರರ್ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾನಿಗೆ ಟೆರರ್ ಲಿಂಕ್ ಇದ್ದು, ಇವ್ರಿಗೆ 2008ರ ಬೆಂಗಳೂರು ಸೀರಿಯಲ್‌ ಬ್ಲಾಸ್ಟ್ ಕೇಸ್‌ ರೂವಾರಿ ಜುನೈದ್ ಪರಿಚಯವಾಗಿದೆ. ಜುನೈದ್ ಮೂಲಕ ಸ್ಫೋಟಕ್ಕೆ ಈ ಐವರು ಸಂಚು ಹೂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ

ಹಾಗಾದ್ರೆ ಬಂಧನದ ವೇಳೆ ಸಿಸಿಬಿಗೆ ಸಿಕ್ಕಿದ್ದಾದ್ರೂ ಏನು..? ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಾರ್ಯಾಚರಣೆ ವೇಳೆ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್‌ಗಳು, ಲ್ಯಾಪ್ ಟಾಪ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ. 
 

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!

click me!