ಲವ್ ಜಿಹಾದ್ ಕೇಸ್, ಯುವತಿ ತುಟಿಗೆ ಫೆವಿಕ್ವಿಕ್ ಅಂಟಿಸಿ ಅತ್ಯಾಚಾರ ಎಸಗಿದ ಆಯನ್ ಪಠಾನ್ ಮನೆ ಧ್ವಂಸ!

Published : Apr 21, 2024, 04:25 PM ISTUpdated : Apr 21, 2024, 04:26 PM IST
ಲವ್ ಜಿಹಾದ್ ಕೇಸ್, ಯುವತಿ ತುಟಿಗೆ ಫೆವಿಕ್ವಿಕ್ ಅಂಟಿಸಿ ಅತ್ಯಾಚಾರ ಎಸಗಿದ ಆಯನ್ ಪಠಾನ್ ಮನೆ ಧ್ವಂಸ!

ಸಾರಾಂಶ

ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ಚೀರಾಡದಂತೆ ತುಟಿಗೆ ಫೆವಿಕ್ವಿಕ್ ಗಮ್ ಅಂಟಿಸಿ ಅತ್ಯಾಚಾರ ಎಸಗಿದ ಆರೋಪಿ ಆಯನ್ ಪಠಾನ್ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಧ್ವಂಸಗೊಳಿಸಿದೆ.  

ಗುನಾ(ಏ.21) ಲವ್ ಜಿಹಾದ್ ಪ್ರಕರಣಗಳು, ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತಿದೆ. ಕರ್ನಾಟದ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹೀರೆಮಠ ಹತ್ಯೆ ಪ್ರಕರಣ ಸೇರಿದಂತೆ ಹಲವು ಘಟನೆಗಲ್ಲಿ ಲವ್ ಜಿಹಾದ್ ಆರೋಪಗಳು ಕೇಳಿಬಂದಿದೆ. ಇತ್ತೀಚೆಗೆ ಮಧ್ಯಪ್ರದೇಶ ಗುನಾ ಜಿಲ್ಲೆಯಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಆಕೆ ಮೇಲೆ ಹಲ್ಲೆ ನಡೆಸಿ, ಭೀಕರವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿತ್ತು. ಅತ್ಯಾಚಾರದ ವೇಳೆ ಆಕೆ ಚೀರಾಡದಂತೆ ತುಟಿಯನ್ನು ಫೆವಿಕ್ವಿಕ್ ಗಮ್‌ನಿಂದ ಅಂಟಿಸಿ, ಕಣ್ಣಿಗೆ ಖಾರದ ಪುಡಿ ಹಾಕಿ ಅತ್ಯಾಚಾರ ಮಾಡಿದ್ದ ಆರೋಪಿ ಆಯನ್ ಫಠಾನ್‌ನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಮಧ್ಯ ಪ್ರದೇಶ ಸರ್ಕಾರ ಬುಲ್ಡೋಜರ್ ಶಿಕ್ಷೆ ಜಾರಿಗೊಳಿಸಿದೆ. ಆರೋಪಿ ಆಯನ್ ಪಠಾಣ್ ಮನೆಯನ್ನು ಧ್ವಂಸಗೊಳಿಸಿದೆ.

ಆಯನ್ ಪಠಾಣ್ ಬಂಧನವಾಗುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಅಯನ್ ಪಠಾಣ್ ಇತಿಹಾಸ ತೆಗೆಯುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಈತನ ಮನೆ, ವೃತ್ತಿ ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕಿ ಸ್ಥಳೀಯ ಜಿಲ್ಲಾಡಳಿತ ಪರಿಶೀಲನೆ ನಡೆಸಿತ್ತು. ಈ ವೇಳೆ ಅಯನ್ ಪಠಾಣ್ ಮನೆ ಅಕ್ರಮ ಅನ್ನೋದು ಪತ್ತೆಯಾಗಿದೆ. ಇಷ್ಟೇ ಅಲ್ಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಜಾಗ ಕಬಳಿಸಲಾಗಿದೆ ಅನ್ನೋದು ಬಹಿರಂಗವಾಗಿದೆ. 

ಬಾಯಿಗೆ ಖಾರಪುಡಿ ತುರುಕಿ ತುಟಿಗೆ ಫೆವಿಕ್ವಿಕ್ ಅಂಟಿಸಿ ರೇಪ್, ಆರೋಪಿ ಆಯನ್ ಪಠಾಣ್ ಅರೆಸ್ಟ್!

ಸ್ಥಳೀಯ ಜಿಲ್ಲಾಡಳಿತ ಪೊಲೀಸ್ ಜೊತೆಗೆ ಅಯನ್ ಪಠಾಣ್ ಮನೆಗೆ ಆಗಮಿಸಿದೆ. ಬುಲ್ಡೋಜರ್ ಜೊತೆ ಆಗಮಿಸಿ ಮನೆಯನ್ನು ಧ್ವಂಸ ಮಾಡಿದೆ. ಈ ಮೂಲಕ ಮಧ್ಯಪ್ರದೇಶ ಸರ್ಕಾರ ಲವ್ ಜಿಹಾದ್ ಹಾಗೂ ಅತ್ಯಾಚಾರ ಪ್ರಕರಣ ಕೈಹಾಕುವ ಕಿಡಿಗೇಡಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.  

 

 

23 ವರ್ಷದ ಹಿಂದು ಯುವತಿಯನ್ನು ಪ್ರೀತಿಸುವಂತೆ ಆರೋಪಿ ಅಯನ್ ಪಠಾನ್ ನಾಟಕವಾಡಿದ್ದ. ಯುವತಿ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಯುವತಿ ಮಾತ್ರ ಆಯನ್ ಪಠಾಣ್‌ನನ್ನೇ ಪ್ರೀತಿಸಿದ್ದಳು. ಅಯನ್ ಪಠಾಣ್ ಕಾಟ ತಡೆಯಲಾಗದೆ ಯುವತಿ ಪೋಷಕರು ಗುನಾ ಜಿಲ್ಲೆ ತೊರೆದಿದ್ದರು. ಆದರೆ ಯುವತಿಯನ್ನು ಬೆಂಬಿಡದ ಅಯನ್ ಪಠಾಣ್ ಮದುವೆಯಾಗುವುದಾಗಿ ನಂಬಿಸಿ ಮತ್ತೆ ಗುನಾ ಜಿಲ್ಲೆಗೆ ಕರೆದುಕೊಂಡು ಬಂದಿದ್ದಾನೆ.

ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ರೇಪ್ ಕೇಸ್‌ಗೂ ಉಂಟು, ಸಚಿವ ಮಂಕಾಳು ವೈದ್ಯನ 2 ಕೋಟಿ ರೂ. ಡೀಲ್‌ ನಂಟು!

ಯುವತಿ ಅಯನ್ ಪಠಾಣ್ ಹತ್ತಿರ ಬರುತ್ತಿದ್ದಂತೆ ಈತನ ಸ್ವಭಾವ ಬದಲಾಗಿದೆ. ಕೋಣೆಯಲ್ಲಿ ಕೂಡಿಟ್ಟು ಚಿತ್ರ ಹಿಂಸೆ ನೀಡಲು ಆರಂಭಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಅಯನ್ ಪಠಾಣ್, ಯುವತಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಯುವತಿಯ ಚೀರಾಟ ಹೆಚ್ಚಾಗುತ್ತಿದ್ದಂತೆ ತುಟಿಗಳಿಗೆ ಫೆವಿಕ್ವಿಕ್ ಗಮ್ ಹಾಕಿ ಅಂಟಿಸಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!