ಬೀದರ್‌ನಲ್ಲಿ ಮತ್ತೊಂದು ಲವ್ ಜಿಹಾದ್? ಪ್ರೀತಿ ಹೆಸರಲ್ಲಿ ಅನ್ಯಕೋಮಿನ ಯುವಕನಿಂದ 9ನೇ ತರಗತಿ ಬಾಲಕಿಯ ಅತ್ಯಾಚಾರ

Published : Apr 21, 2024, 01:57 PM IST
ಬೀದರ್‌ನಲ್ಲಿ ಮತ್ತೊಂದು ಲವ್ ಜಿಹಾದ್? ಪ್ರೀತಿ ಹೆಸರಲ್ಲಿ ಅನ್ಯಕೋಮಿನ ಯುವಕನಿಂದ 9ನೇ ತರಗತಿ ಬಾಲಕಿಯ ಅತ್ಯಾಚಾರ

ಸಾರಾಂಶ

ಹುಬ್ಬಳ್ಳಿಯ ನೇಹಾ ಹತ್ಯೆಯ ಬೆನ್ನಲ್ಲಿಯೇ ಬೀದರ್‌ನಲ್ಲಿಯೂ ಕೂಡ ಪ್ರೀತಿಯ ಹೆಸರಿನಲ್ಲಿ ಹಿಂದೂ ಧರ್ಮದ 9ನೇ ತರಗತಿ ಬಾಲಕಿಯನ್ನು ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

ಬೀದರ್ (ಏ.21): ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ಬೆನ್ನಲ್ಲಿಯೇ ಮತ್ತೊಂದು ಇಂತಹದ್ದೇ ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಅನ್ಯಕೋಮಿನ ಯುವಕ ಕಳೆದ ಎರಡು ವರ್ಷಗಳಿಂದ ಹಿಂದೂ ಧರ್ಮದ 9ನೇ ತರಗತಿ ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಮಾಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕ ಫಯಾಜ್ ಲವ್‌ ಫೇಲ್ಯೂರ್‌ ನೆಪವೊಡ್ಡಿ ಹಿಂದೂ ಯುವತಿ ನೇಹಾ ಹಿರೇಮಠರನ್ನು ಕಾಲೇಜು ಆವರಣದಲ್ಲಿಯೇ ಕೊಲೆ ಮಾಡಿದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದರ ಹಿಂದೆ ಲವ್ ಜಿಹಾದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲಿಯೇ ಬೀದರ್‌ನಲ್ಲಿ ಇಂತಹದೇ ಲವ್‌ ಜಿಹಾದ್ ಹೆಸರಿನಲ್ಲಿ ಹಿಂದೂ ಧರ್ಮದ 9ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದಾರೆ.

ಕರ್ನಾಟಕದಲ್ಲಿ ಲವ್ ಜಿಹಾದ್ ಹಾಗೂ ಮತಾಂತರದ ಟ್ರೈನಿಂಗ್ ಸೆಂಟರ್ ಇದೆ; ಮಾಜಿ ಸಿಎಂ ಜಗದೀಶ್ ಶೆಟ್ಟರ್

ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮುಸ್ಲಿಂ ಯುವಕ ಲಾಯಕ್ ಅಲಿ (20) ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೈಸ್ಕೂಲ್ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಅಶ್ಲೀಲ ಪೊಟೊಗಳನ್ನ ತೆಗೆದುಕೊಂಡಿದ್ದಾನೆ. ನಂತರ, ಆಕೆಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಅಂತಾ ಬೆದರಿಸಿ, ತಾನು ಹೇಳಿದಲ್ಲಿಗೆ ಬರಬೇಕೆಂದು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ವಿದ್ಯಾರ್ಥಿನಿ ತಾಯಿ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಹೈಸ್ಕೂಲ್ ಮೆಟ್ಟಿಲೇರುತ್ತಿದ್ದಂತೆಯೇ ರೋಡ್‌ ರೋಮಿಯೋನಂತೆ ಹಿಂದೆ ಬಿದ್ದ ಮುಸ್ಲಿಂ ಯುವಕ ಬಾಲಕಿ 9ನೇ ತರಗತಿಗೆ ಬರುವಷ್ಟರಲ್ಲಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ತೆರಳುವಾಗ ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದನು. ನಂತರ, ಪ್ರೀತಿಯ ನಾಟಕವಾಡಿ ಜೊತೆಗೆ ಸುತ್ತಾಡುವಾಗ ಆಕೆಗೆ ಗೊತ್ತಿಲ್ಲದೇ ಕೆಲವು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ನಂತರ, ನಾನು ವಿದ್ಯಾರ್ಥಿನಿಗೆ ಪ್ರೀತಿಸುತ್ತೇನೆ ಅಂತಾ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ನಂತರ ಯುವತಿ ಆತನೊಂದಿಗೆ ಹೋಗುವುದು ಬೇಡವೆಂದು ನಿರಾಕರಣೆ ಮಾಡಿದಾದ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾಗೆ ಹಾಕುತ್ತೇನೆ. ಇದರಿಂದ ನಿನ್ನ ಮತ್ತು ನಿನ್ನ ಕುಟುಂಬದ ಮಾನ ಮರ್ಯಾದೆ ಬೀದಿಗೆ ಬರುತ್ತದೆ ಎಂದು ಬೆದರಿಸಿದ್ದಾನೆ. ಇದಕ್ಕೆ ಬೆದರಿದ ವಿದ್ಯಾರ್ಥಿನಿ ಆತ ಕರೆದಲ್ಲಿಗೆ ಹೋಗುತ್ತಿದ್ದಳು. ಹೀಗೆ, ಒಂದು ದಿನ ಮುಸ್ಲಿಂ ಯುವಕ ಹಿಂದೂ ಬಾಲಕಿಯನ್ನು ತನ್ನ ಬಾಡಿಗೆ ಮನೆಗೆ ಜರೆದೊಯ್ಯುವಾಗ ಭಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಆಗ, ಹಿಂದೂ ಯುವತಿ ಆತ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದು, ಆಕೆಯನ್ನು ಭಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

ಹುಬ್ಬಳ್ಳಿ ನೇಹಾ ಕೊಂದವನನ್ನು ಗಲ್ಲಿಗೇರಿಸಿ ಎಂದ ಸಚಿವ ಪಾಟೀಲ್: ಬೇಡ ಜನರಿಗೊಪ್ಪಿಸಿ ಎಂದ ನಟಿ ರಚಿತಾ ರಾಮ್

ನಂತರ, ಅನ್ಯಕೋಮಿನ ಯುವಕನನ್ನು ಹಾಗೂ ವಿದ್ಯಾರ್ಥಿನಿಯನ್ನ ತಕ್ಷಣವೇ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆ ಸ್ಥಳಕ್ಕೆ ಹಿಂದೂ ಬಾಲಕಿಯ ತಾಯಿಯೂ ಆಗಮಿಸಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಹೈಸ್ಕೂಲ್ ಯುವತಿ ಎಲ್ಲ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ನಂತರ, ಅಶ್ಲೀಲ ಪೊಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ್ದಾಣೆ ಎಂದು ಆರೋಪಿ ಲಾಯಕ್ ಅಲಿ ವಿರುದ್ದ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!