* ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್‌ನಲ್ಲಿ ನಡೆದ ಘಟನೆ
* ಇಬ್ಬರು ಯುವತಿಯರನ್ನ ಪ್ರೀತಿಸಿದ್ದ ಯುವಕ
* ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಯಚೂರು(ಏ.23): ಒಂದೇ ಸೀರೆಗೆ ನೇಣು ಹಾಕಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು(Raichur) ಜಿಲ್ಲೆಯ ಸಿಂಧನೂರು(Sindhanur) ತಾಲೂಕಿನ ಆರ್.ಎಚ್. ಕ್ಯಾಂಪ್ - 3ರಲ್ಲಿ ಇಂದು(ಶನಿವಾರ) ನಡೆದಿದೆ. ಲವ್ ಸರ್ಕಾರ್( 24) ಮತ್ತು ಕರೀನಾ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.
ಲವ್ ಸರ್ಕಾರ್ ಇಬ್ಬರು ಯುವತಿಯರನ್ನ ಪ್ರೀತಿಸಿದ್ದನು(Love). ಹೀಗಾಗಿ ಕರೀನಾಗೆ ಕೈಕೊಟ್ಟು ಬೇರೆಯೊಬ್ಬಳ ಜೊತೆಗೆ ಮದುವೆ(Marriage) ಆಗಿದ್ದ ಲವ್ ಸರ್ಕಾರ್. ಲವ್ ಸರ್ಕಾರ್ ಬೇರೆ ಯುವತಿ ಜೊತೆಗೆ ವಿವಾಹವಾಗಿದ್ದಕ್ಕೆ ಕರೀನಾ ತೀವ್ರವಾಗಿ ಮನನೊಂದಿದ್ದಳು ಅಂತ ಹೇಳಲಾಗುತ್ತಿದೆ.
ಸುಳ್ಯದಲ್ಲಿ ಚಲಿಸುತ್ತಿರುವ ಲಾರಿ ಅಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ವಿಡಿಯೋ
ಇತ್ತ ಕರೀನಾಳನ್ನೂ ಬಿಟ್ಟು ಇರಲು ಆಗದೇ ಲವ್ ಸರ್ಕಾರ್, ಕರೀನಾ ಜತೆ ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.