Suicide Cases: ಡ್ಯಾಂಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ: ಕಾರಣ?

By Kannadaprabha News  |  First Published Feb 24, 2022, 9:55 AM IST

*  ಬಾಚಣಕಿ ಜಲಾಶಯಕ್ಕೆ ಧುಮುಕಿದ್ದ ಪ್ರೇಮಿಗಳಿಬ್ಬರು
*  2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ, ಯುವತಿ
*  ಮೂರು ದಿನಗಳ ನಂತರ ಯುವಕನ ಶವ ಪತ್ತೆ
 


ಮುಂಡಗೋಡ(ಫೆ.24):  ಬಾಚಣಕಿ ಜಲಾಶಯಕ್ಕೆ ಧುಮುಕಿ ಪ್ರೇಮಿಗಳಿಬ್ಬರು(Lovers) ಆತ್ಮಹತ್ಯೆಗೆ(Suicide) ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಶವ ಬುಧವಾರ ಪತ್ತೆಯಾಗಿದೆ.

ಬಿಎ ವಿದ್ಯಾರ್ಥಿ, ಹನುಮಾಪುರದ ನಿವಾಸಿ ಮಹೇಶ ಒದ್ದೋಣಿ (19) ಆತ್ಮಹತ್ಯೆಗೆ ಶರಣಾದ ಯುವಕ. ಈತ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಲಕೇರಿಯ ತನುಜಾ ಪಾಟೀಲ ಇಬ್ಬರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಈ ವಿಷಯ ಇಬ್ಬರ ಕುಟುಂಬಸ್ಥರಿಗೆ ತಿಳಿದಿದೆ. ಇದರಿಂದ ಗಾಬರಿಗೊಂಡಿದ್ದ ಇವರು ಸೋಮವಾರ ಬೆಳಗ್ಗೆ ಮುಂಡಗೋಡಿನ ಕಾಲೇಜಿಗೆ ಬಂದು ತರಗತಿಗೆ ಹಾಜರಾಗಿದ್ದರು. ಬಳಿಕ ಒಂದೇ ಬಸ್‌ನಲ್ಲಿ ಬಾಚಣಕಿ ಜಲಾಶಯಕ್ಕೆ ತೆರಳಿ ವಿಷ(Poison) ಸೇವಿಸಿ ನೀರಿನಲ್ಲಿ ದುಮುಕಿದ್ದಾರೆ. ಇದನ್ನು ಗಮನಿಸಿದ ಕೆಲವರು ಪೊಲೀಸರಿಗೆ(Police) ಮಾಹಿತಿ ನೀಡಿದ್ದರು. 
ಸ್ಥಳಕ್ಕೆ ದಾವಿಸಿದ ಮುಂಡಗೋಡ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ತೀವ್ರ ಹುಡುಕಾಟ ನಡೆಸಿದಾಗ ಯುವತಿಯ ಶವ ಮಾತ್ರ ಪತ್ತೆಯಾಗಿತ್ತು. ಇದೀಗ ಮೂರು ದಿನಗಳ ನಂತರ ಬುಧವಾರ ಯುವಕನ ಶವ(Deadbody) ದೊರೆತಿದೆ.

Tap to resize

Latest Videos

Crime News ಮದ್ವೆಯಾಗಿ 10 ತಿಂಗಳಿಗೆ ಜೀವನ ಸಾಕಾಯ್ತೆ? ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ

ಪರೀಕ್ಷೆ ಭಯಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ(Chikkaballapur): ಎಸ್ಸೆಸ್ಸೆಲ್ಸಿ ಪರೀಕ್ಷೆ(SSLC Exam) ಭಯದಿಂದ ವಿದ್ಯಾರ್ಥಿನಿಯೊಬ್ಬಳು(Student) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲಾ ಕೇಂದ್ರದ 1ನೇ ವಾರ್ಡ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ನಗರದ ವಾಪಸಂದ್ರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಬೇಬಿ (16) ಆತ್ಮಹತ್ಯೆ ಮಾಡಿಕೊಂಡಾಕೆ. ಮೊದಲಿನಿಂದಲೂ ಶಾಲೆಗೆ ಹೋಗಲು ನಿರಾಸಕ್ತಿ ಹೊಂದಿದ್ದ ಬೇಬಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಸಿದ್ದತಾ ಪರೀಕ್ಷೆಗೂ ಹೋಗಿರಲಿಲ್ಲ.

ಹಲವಾರು ಬಾರಿ ಶಾಲೆಯ ಶಿಕ್ಷಕರು ಮನೆಗೆ ಬಂದು ಬಾಲಕಿ ಮನವೊಲಿಸಿ ಶಾಲೆಗೆ ಕರೆಸಿದ್ದರು. ಆದರೆ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ ಬೇಬಿ ಮನೆಯಲ್ಲೇ ಇರುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಿಲ್ಲವಾದರೂ ಪರೀಕ್ಷೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಬ್ರಹ್ಮಾವರ: ಇಲ್ಲಿನ ಕಾಡೂರು ಗ್ರಾಮದ ಶಾಲೆಯ ಬಳಿಯ ನಿವಾಸಿ ದಿನೇಶ (39) ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆಲವು ದಿನಗಳಿಂದ ಕಾಣೆಯಾದ ತಮ್ಮನ ನೆನಪಿನಲ್ಲಿ ಮಾನಸಿಕ ಅಸ್ವಸ್ಥರಾಗಿದ್ದರು. ಮಂಗಳವಾರ ರಾತ್ರಿ ಮನೆ ಸಮೀಪದ ಕಣಪೆ ಎಂಬಲ್ಲಿ ಹಾಡಿಯ ಮಧ್ಯದಲ್ಲಿ ಮತ್ತಿಮರಕ್ಕೆ ಟೆವೆಲ್‌ ಕಟ್ಟಿಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News ವಿಚಿತ್ರ ಘಟನೆ, ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ಯುವಕ, ಯುವತಿ

ಸಾಲಬಾಧೆ; ರೈತ ಆತ್ಮಹತ್ಯೆ

ಹುಬ್ಬಳ್ಳಿ(Hubballi): ಸಾಲಬಾಧೆಗೆ(Loan) ಬೇಸತ್ತ ಅಣ್ಣಿಗೇರಿ ತಾಲೂಕಿನ ಮಣಕವಾಡದ ರೈತ ಚೆನ್ನಬಸಪ್ಪ ನೀಲಪ್ಪ ಪಲ್ಲೇದ(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೇರೆಯವರ ಜಮೀನು ಲಾವಣಿ ಮಾಡುತ್ತಿದ್ದ ಚೆನ್ನಬಸಪ್ಪ ಅವರು ಹುಬ್ಬಳ್ಳಿಯ ಖಾಸಗಿ ಬ್ಯಾಂಕಿನಲ್ಲಿ .1,25000, ನವಲಗುಂದದ ಖಾಸಗಿ ಬ್ಯಾಂಕಿನಲ್ಲಿ .60,000 ಮತ್ತು ಗ್ರಾಮದಲ್ಲಿ ಕೈಗಡ ಸಾಲ ಮಾಡಿದ್ದರು. ಕಳೆದ ಬಾರಿ ಅಕಾಲಿಕ ಮಳೆಯಿಂದ ಮೆಣಸಿನ ಬೆಳೆ ಹಾಳಾಗಿದ್ದರಿಂದ ಮತ್ತಷ್ಟುನೊಂದಿದ್ದ ಅವರು ಸೋಮವಾರ ಮಣಕವಾಡ ಗ್ರಾಮದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಣ್ಣಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಉಡುಪಿ: ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆಎಂಬಲ್ಲಿ ಜಿಶನ್‌ ಕುಮಾರ್‌ (16) ಎಂಬಾತ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ಈತ, ಸೋಮವಾರ ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆಗೆ ಹೋಗದೇ ಮನೆಯಲ್ಲಿದ್ದಾಗ ತಾಯಿ ಆಕ್ಷೇಪಿಸಿದ್ದರು. ಅವರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಜಿಶನ್‌ ಮನೆಯ ಬಾಗಿಲಿನ ಚಿಲಕ ಹಾಕಿ, ಮಲಗುವ ಕೋಣೆಯಲ್ಲಿ ಮಾಡಿಗೆ ಸೀರೆ ಕಟ್ಟಿನೇಣು ಬಿಗಿದುಕೊಂಡು ಮೃತಪಟ್ಟಿದ್ದು ಪತ್ತೆಯಾಗಿದೆ. ಪರೀಕ್ಷೆಯ ಭಯದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!