ಫೆ.14 ವ್ಯಾಲೆಂಟೈನ್ಸ್ ಡೇ. : ಜಗತ್ತಿನಾದ್ಯಂತ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದೆ. ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಉಡುಗೊರೆ ಕೊಟ್ಟು ಪ್ರೇಮಿಗಳ ದಿನ ಆಚರಿಸಿದ್ದಾರೆ. ಆದ್ರೆ, ಪ್ರೇಮಿಗಳ ದಿನದಂದೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಡಗು, (ಫೆ.14): ಇಂದು [ಶುಕ್ರವಾರ] ಪ್ರೇಮಿಗಳ ದಿನದಂದೇ ಪ್ರೇಮಿಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹಾರಂಗಿಯಲ್ಲಿ ನಡೆದಿದೆ.
ಪ್ರೀತಿಸಿದ್ದ ಹುಡುಗಿಗೆ ಬೇರೆ ಹುಡುಗನೊಂದಿಗೆ ಮದುವೆ ಫಿಕ್ಸ್ ಮಾಡಿದ್ದರಿಂದ ನೊಂದ ಯುವತಿ ಪ್ರೀತಿಸಿದ ಹುಡುಗನೊಂದಿಗೆ ಹಾರಂಗಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಶರಣಾಗಿದ್ದಾರೆ.
ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕ, ಶಿಕ್ಷಕಿ ಆತ್ಮಹತ್ಯೆ
ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಯಮಗುಂಬಾ ಗ್ರಾಮದ ಸಿಂಧೂಶ್ರೀ (19) ಮತ್ತು ಪಟ್ಟೆಗಾಲ ಗ್ರಾಮದ ಯುವಕ ಸಚಿನ್ (25) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.
ಸಿಂಧೂಶ್ರೀ ಹಾಗೂ ಸಚಿನ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ವಿವಾಹಕ್ಕೆ ಇಬ್ಬರ ಕುಟುಂಬದಲ್ಲಿ ಸಮ್ಮತಿ ಇರಲಿಲ್ಲ. ಅಷ್ಟೇ ಅಲ್ಲದೇ ಸಿಂಧೂಶ್ರೀಗೆ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.
ಇದರಿಂದ ಮನನೊಂದ ಇಬ್ಬರು ಪ್ರೇಮಿಗಳು ಕೊಡಗಿನ ಹಾರಂಗಿ ಜಲಾಶಯಕ್ಕೆ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಜಲಾಶಯಕ್ಕೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತದೇಹಗಳನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ.