
ಬೆಂಗಳೂರು(ಫೆ. 14) ಕಿಡ್ನಿ ವಂಚನೆ ಜಾಲವೊಂದು ಬಯಲಾಗಿದೆ. ಒಂದು ಕಿಡ್ನಿಗೆ ನಾಲ್ಕು ಕೋಟಿ ಎಂದು ಹೇಳೀ ಕಿಡ್ನಿ ಡೋನರ್ ಗೆ ವೆಬ್ ಸೈಟ್ ತೆರೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆಬಂದಿದೆ.
ಕೆಮರೂನ್ ದೇಶದ ಪ್ರಜೆ ಕರ್ನಾಟಕಲ್ಲಿ ಹೈಟೆಕ್ ವಂಚನೆ ಮಾಡಿದ್ದಾನೆ. Sell your kidney.in ನಲ್ಲಿ ಕಿಡ್ನಿಗಾಗಿ ಆ್ಯಡ್ ಹಾಕುತ್ತಿದ್ದ. ಪ್ರತಿಷ್ಠಿತ ಡಾ. ಫೋಟೋ ಅಪ್ಲೋಡ್ ಮಾಡಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ.
ನಾರಾಯಣ ಕ್ಲೀನಿಕ್ ಲೋಗೋ ಹಾಕಿ ಕಿಡ್ನಿ ಡೋನರ್ ಗಳಿಗೆ ವಂಚನೆ ಮಾಡಿರುವ ಪ್ರಕರಣ ಇದು. ಕಿಡ್ನಿ ಕೊಡಲು ಮುಂದಾದವರಿಗೆ ಆರಂಭದಲ್ಲಿ ಎರಡು ಕೋಟಿ. ಮಾರಟದ ನಂತರ ಎರಡು ಕೋಟಿ ಆಫರ್ ಸಹ ನೀಡಿದ್ದ.
ನಾಲ್ಕು ಕೋಟಿ ಆಸೆಗೆ ಬಿದ್ದು ಕಂಟಾಕ್ಟ್ ವೆಬ್ ಸೈಟ್ ಸಂಪರ್ಕ ಮಾಡುತ್ತಿದ್ದವರನ್ನು ವಾಟ್ಸ್ ಆಪ್ ಚಾಟ್ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿ ರಕ್ತ ಪರೀಕ್ಷೆ ಅಂತ ಅಡ್ವಾನ್ಸ್ ಹೆಸರಿನಲ್ಲಿ 15 ಸಾವಿರ ಹಣ ಹಾಕಿಸಿಕೊಳ್ಳುತ್ತಿದ್ದ. ಮಿಜೋರಾಮ್ ನಲ್ಲಿದ್ದ ಬ್ಯಾಂಕ್ ಖಾತೆಗ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ.
ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆಸಿ ಫನ್ ಮಾಡಿದ್ದವ ಸಿಕ್ಕಿಬಿದ್ದ
ಈ ಹಣದಲ್ಲಿ ಶೇ. 20ನ್ನು ಇಟ್ಟುಕೊಂಡು ಉಳಿದ ಹಣ ಕೆಮರೂನ್ ಗೆ ಅಕೌಂಟ್ ಗೆ ಹಣ ಮಿಜೋರಾಮ್ ವ್ಯಕ್ತಿ ವರ್ಗಾವಣೆ ಮಾಡುತ್ತಿದ್ದ. ಬೆಂಗಳೂರನಲ್ಲಿ ಇದ್ದುಕೊಂಡೆ ಇಷ್ಟೆಲ್ಲಾ ವಂಚನೆ ಮಾಡುತ್ತಿದ್ದೆ ಕೆಮರೂನ್ ಪ್ರಜೆ ತ಼ ಬ್ವೆರ್ಕಾ ಜಪ಼್ ಡೆಕ್ಲನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಮಹಿಳೆ ಒಬ್ಬರ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಬಂಧಿತನಿಂದ ಪೆನ್ ಡ್ರೈ. ಎಟಿಎಂ ಕಾರ್ಡ್ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಫರಾನ ಕಾಲೇಜ್ ನಲ್ಲಿ ಬಿಸಿಎ ಎರಡು ಸೆಮ್ ಫೇಲ್ ಆಗಿದ್ದ ಆರೋಫಿ ವೆಬ್ ಡಿಸೈನ್ ಕಲಿತುಕೊಂಡಿದ್ದ.
ಲ್ಯಾಪ್ ಟಾಪ್ ನೋಡಿ ಶಾಕ್ ಆದ ಪೊಲೀಸರು: ಲ್ಯಾಪ್ ಟಾಪ್ ನೋಡಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಕೇವಲ ಕಿಡ್ನಿ ಡೋನರ್ ಹೆಸರಲ್ಲಿ ಅಷ್ಟೇ ಅಲ್ಲ ಹಸುಗಳ ಹೆಸರಿನಲ್ಲಿಯೂ ಸಖತ್ತಾಗಿಯೇ ವಂಚನೆ ಮಾಡಿರುವುದು ಗೊತ್ತಾಗಿದೆ. ಡೈರಿ ಫಾರ್ಮ್ ಲಿ.(hope diary for melts.com) ವೆಬ್ ಕ್ರಿಯೇಟ್ ಮಾಡಿ ಗಿರ್. ಹೆಚ್ ಎಫ್ ಸೇರಿ ಹಲವು ತಳಿ ಹಸುಗಳ ಕಡಿಮೆ ಬೆಲೆ ಅಂತ ಪ್ರಚಾರ ಮಾಡಿದ್ದಾನೆ.
ಹಸುಗೆ ಅಧಿಕ ಬೆಲೆಯ ರಾಸುಗಳು ಅತ್ಯಂತ ಕಡಿಮೆ ಬೆಲೆಗೆ ಕೊಡ್ತಿವಿ ಅಂತ ಪ್ರಚಾರ ಮಾಡಿಕೊಂಡಿದ್ದಾನೆ. ರಾಸುಗಳ ಸ್ಟೇಟ್ ಟ್ರಾನ್ಸಫರ್.ಇನ್ಶುರೆನ್ಸ್. ಮತ್ತು ವೆಟನರಿ ಸ್ಟೇಟ್ ಕ್ಲಿಯರೆನ್ಸ್ ಅಂತ ಚಾರ್ಜ್ ಮಾಡಿ ಹಣ ವಸೂಲಿ ಮಾಡಿದ್ದಾನೆ. ಕನಕಪುರ ಗೌತಮ್ ಹಸುಗಳ ಆಸೆಗೆ ಬಿದ್ದು 6 ಲಕ್ಷ ರೂ. ಕಳೆದುಕೊಂಡಿರುವುದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ