ಹೊಸ ಡ್ರೆಸ್ ನೋಡಲು ಬಾರೋ ಎಂದು ಕರೆದ ಪ್ರೇಯಸಿ: ಕರೆಗೆ ಓಗೊಟ್ಟು ಬಂದು ಹೆಣವಾದ ಪ್ರಿಯಕರ

Published : Jun 17, 2026, 02:29 PM IST
Lover's death

ಸಾರಾಂಶ

ಬಿಹಾರದ ಜಮುಯಿಯಲ್ಲಿ, ಪ್ರೇಯಸಿ ಆರತಿ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರೇಮಿ ಸಣ್ಣಲಾಲ್‌ನನ್ನು, ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಆರತಿ ಎಂಬ ಯುವತಿ ತನ್ನ ಪ್ರೇಮಿ ಸಣ್ಣಲಾಲ್‌ಗೆ ಫೋನ್ ಮಾಡಿ, “ನಾನು ಹೊಸ ಡ್ರೆಸ್ ತಂದಿದ್ದೇನೆ, ನೋಡಲು ಬಾ” ಎಂದು ಕರೆದಿದ್ದಾಳೆ. ಪ್ರೇಯಸಿಯ ಮಾತನ್ನು ಕೇಳಿ ಸಂತೋಷಗೊಂಡ ಸಣ್ಣಲಾಲ್ ತನ್ನ ಬೈಕ್ ಹತ್ತಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸಿ, ರಾತ್ರಿ ಒಂಬತ್ತುವರೆ ಗಂಟೆಗೆ ಆಕೆಯ ಮನೆಯ ಹತ್ತಿರ ತಲುಪಿದ್ದಾನೆ.

ನೋಡಿದ ಹುಡುಗಿಯ ತಂದೆ

ತನ್ನ ಸ್ನೇಹಿತ ಮನೋಜ್ ಜೊತೆ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ, ಹುಡುಗಿಯ ತಂದೆ ಇವರನ್ನು ಮೇಲುಗಡೆಯಿಂದ ನೋಡಿಬಿಟ್ಟಿದ್ದಾರೆ. ತನ್ನ ಮಗಳ ಲವರ್​ ಎಂದು ತಿಳಿದ ತಕ್ಷಣ, ಸಿಡಿಮಿಡಿಗೊಂಡ ತಂದೆ, ಕೂಡಲೇ ಸಣ್ಣಲಾಲ್ ಮೇಲೆ ದಾಳಿ ಮಾಡಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸ್ನೇಹಿತ ಮನೋಜ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಹೆಣವಾಗಿ ಹೋದ

ಅಷ್ಟರಲ್ಲಿಯೇ ಹುಡುಗಿಯ ಮನೆಯವರು ಸಣ್ಣಲಾಲ್ ಶವವನ್ನು ಜಲಾಶಯದಲ್ಲಿ ಬೀಸಾಡಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತೆ ಖರೀದಿ ಮಾಡಿದ ಹೊಸ ಡ್ರೆಸ್​ ನೋಡಲು ಬಂದವ ಹೆಣವಾಗಿ ಹೋಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ-ಬನ್​ ಬಿಟ್ಟಿ ತಿಂದು ಕುಡಿದು ಸೆಲ್ಯೂಟ್ ಹೊಡೆಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಈ 'ಐಪಿಎಸ್​ ಅಧಿಕಾರಿ'
ಹೆಣ್ಮಕ್ಕಳ ಅ*ಶ್ಲೀ*ಲ ವಿಡಿಯೋ ಮಾಡಿ, ಒಪ್ಪಿಗೆ ಇಲ್ಲದೇ ಶೇರ್‌ ಮಾಡಿದ್ರೆ ಜೈಲೂಟ ಫಿಕ್ಸ್! ನಮ್ಮ ರಾಜ್ಯದಲ್ಲಿ ಹೊಸ ಮಾರ್ಗಸೂಚಿ