ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪ: ಯುವಕನ ಅಪಹರಿಸಿ ಹಲ್ಲೆ, ಬೇಲೂರಲ್ಲಿ ಭಾರೀ ಘರ್ಷಣೆ

Published : Jul 15, 2026, 10:11 PM IST
Hassan News

ಸಾರಾಂಶ

Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.

ಹಾಸನ (ಜು.15): ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಘರ್ಷಣೆ ವೇಳೆ ಮೂರು ಕಾರುಗಳು ಜಖಂಗೊಂಡಿದ್ದು, ಜಗಳ ಬಿಡಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆದ ಪರಿಣಾಮ ಸಿಪಿಐ ಹಾಗೂ ಎಎಸ್‌ಐ ಗಾಯಗೊಂಡಿದ್ದಾರೆ.

ಹಲ್ಲೆಗೊಳಗಾದ ಯುವಕನನ್ನು ರೋಷನ್ ಎಂದು ಗುರುತಿಸಲಾಗಿದೆ. ಜುಲೈ 1ರಂದು ಬಂಟೇನಹಳ್ಳಿ ಗ್ರಾಮದ ಸಾನಿಯಾ ಹಾಗೂ ಮುದಿಗೆರೆ ಗ್ರಾಮದ ಆಸೀಫ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಈ ವಿವಾಹಕ್ಕೆ ರೋಷನ್ ಬೆಂಬಲ ನೀಡಿದ್ದಾನೆ ಎಂಬ ಆರೋಪದ ಜೊತೆಗೆ, ಜೆಪಿ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಶಾಹೀಂ ಜೊತೆಗಿನ ಹಳೆಯ ವೈಷಮ್ಯವೂ ಘಟನೆಯ ಹಿನ್ನೆಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆಯ ದಿನ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡುತ್ತಿದ್ದ ರೋಷನ್ ಅವರನ್ನು "ಮಾತನಾಡಬೇಕಿದೆ" ಎಂದು ಹೇಳಿ ಇನ್ನೋವಾ ಕಾರಿನಲ್ಲಿ ಕರೆದೊಯ್ದ ಶಾಹೀಂ ಹಾಗೂ ಶಿವಮೊಗ್ಗ ಮತ್ತು ಮಂಗಳೂರು ಮೂಲದ ಕೆಲ ಯುವಕರು, ನಾಗೇನಹಳ್ಳಿ ಗ್ರಾಮದ ಸಮೀಪ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಹಲ್ಲೆಗೊಳಗಾದ ರೋಷನ್ ಅವರನ್ನು ಅದೇ ಕಾರಿನಲ್ಲಿ ಮತ್ತೆ ಜೆಪಿ ನಗರಕ್ಕೆ ಕರೆತಂದು ಬಿಟ್ಟು ಹೋಗಲು ಯತ್ನಿಸಿದ್ದಾರೆ.

ಇದನ್ನು ಗಮನಿಸಿದ ರೋಷನ್ ಸ್ನೇಹಿತರು ಹಾಗೂ ಸ್ಥಳೀಯರು ಆಕ್ರೋಶಗೊಂಡು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದ ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂರು ಕಾರುಗಳು ಜಖಂಗೊಂಡಿದ್ದು, ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರೂ, ಜಗಳ ಬಿಡಿಸಲು ಯತ್ನಿಸಿದ ವೇಳೆ ಪುಂಡರು ಪೊಲೀಸರನ್ನೇ ತಳ್ಳಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಪಿಐ ರೇವಣ್ಣ ಹಾಗೂ ಎಎಸ್‌ಐ ಸೋಮಶೇಖರ್ ಗಾಯಗೊಂಡಿದ್ದು, ಅವರ ಮೊಬೈಲ್ ಫೋನ್‌ಗಳೂ ಜಖಂಗೊಂಡಿವೆ.

ಘರ್ಷಣೆಯಲ್ಲಿ ಗಾಯಗೊಂಡಿರುವ ರೋಷನ್, ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರೇಮ ವಿವಾಹದ ವಿಚಾರವಾಗಿ ಆರಂಭವಾದ ವಿವಾದ ಎರಡು ಗುಂಪುಗಳ ಹಿಂಸಾತ್ಮಕ ಘರ್ಷಣೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರವಾಡ ವೈದ್ಯ ಪತಿ ಕೊಂದ ವೈದ್ಯೆ ಪತ್ನಿ; ರಕ್ತ ಹರಿದು ಒದ್ದಾಡುತ್ತಿದ್ದ ಮಗನ ಪಕ್ಕ ಕೂತು ರೀಲ್ಸ್ ನೋಡ್ತಿದ್ದ ತಾಯಿ!
ಕೇತನ್ ಕೊಲೆ : ಪ್ರಧಾನಿಗೆ ತಲುಪಿದ ತಾಯಿಯ ಕಣ್ಣೀರ ಪತ್ರ! ದಯವಿಟ್ಟು ಇದನ್ನು ಇನ್ನೊಂದು ಘಟನೆಯಾಗಿಸಬೇಡಿ