
ಬೆಂಗಳೂರು: ಬಸ್ಗಳಲ್ಲಿ, ಟ್ರೈನ್ಗಳಲ್ಲಿ ಕಳ್ಳರಿಗಿಂತಲೂ ಕಳ್ಳಿಯರ ಹಾವಳಿ ಸಿಕ್ಕಾಪಟ್ಟೆ ಆಗುತ್ತಿದೆ. ಅದರಲ್ಲಿಯೂ ಬಸ್ ರಶ್ ಇದ್ದರಂತೂ ಮುಗಿದೇ ಹೋಯ್ತು. ಮಹಿಳೆಯರು ಎನ್ನುವ ಕಾರಣಕ್ಕೆ ಯಾರಿಗೂ ಹೆಚ್ಚು ಡೌಟ್ ಬರಲ್ಲ ಎನ್ನುವ ಕಾರಣಕ್ಕೆ ಕಳ್ಳಿಯರ ಕೈಚಳಕ ಹೆಚ್ಚಾಗುತ್ತಲೇ ಇದೆ. ಇದೀಗ ಜನರು ಡಿಜಿಟಲ್ ವ್ಯವಹಾರ ಮಾಡುವ ಕಾರಣದಿಂದ ಪರ್ಸ್ ಎಗರಿಸಿದ್ರೂ ಪ್ರಯೋಜನ ಇಲ್ಲ ಎಂದುಕೊಂಡ ಕಳ್ಳಿಯೊಬ್ಬಳು ಬಿಎಂಟಿಸಿ ಬಸ್ ಕಂಡಕ್ಟರ್ ಪರ್ಸ್ ಅನ್ನೇ ಎಗರಿಸಿ ಸಿಕ್ಕಿಬಿದ್ದಿರುವ ಶಾಕಿಂಗ್ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಎಂಟಿಸಿ ಬಸ್ ನಂಬರ್ KA-57 F 6331 ನಲ್ಲಿ ಈ ಘಟನೆ ನಡೆದಿದೆ. ಬಸ್ ರಶ್ ಇದ್ದ ಕಾರಣ, ಈ ಕಳ್ಳಿ, ಆ ಬಸ್ ಹತ್ತಿದ್ದಾಳೆ. ಆ ಬಳಿಕ, ಬೇರೆಯವರ ಪರ್ಸ್ ಕದ್ದರೆ ಪ್ರಯೋಜನ ಇಲ್ಲ ಎಂದುಕೊಂಡು, ಚಾಣಾಕ್ಷತನದಿಂದ ಬಸ್ ಕಂಡಕ್ಟರ್ ಬ್ಯಾಗ್ ಎಗರಿಸಿದ್ದಾಳೆ. ಅದು ಯಾರಿಗೂ ಗೊತ್ತಾಗಬಾರದು ಎಂದು ಅದರಲ್ಲಿ ಇದ್ದ ಟಿಕೆಟ್ ಮತ್ತು ಬ್ಯಾಗ್ ಅನ್ನು ಮೆಲ್ಲನೇ ತಾನು ತಂದಿದ್ದ ಬ್ಯಾಗ್ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ಆದರೆ ಪಾಪ ಅವಳಿಗೆ ಅಲ್ಲಿದ್ದ ಸಿಸಿಟಿವಿಯಲ್ಲಿ ಎಲ್ಲವೂ ರೆಕಾರ್ಡ್ ಆಗಿರುತ್ತದೆ ಎನ್ನುವುದು ತಿಳಿದೇ ಇರಲಿಲ್ಲ.
ಕೊನೆಗೆ ಲಗುಬಗೆಯಿಂದ ಮುಂದಿನ ಸ್ಟಾಪ್ನಲ್ಲಿಯೇ ಇಳಿಯುವ ನಿರ್ಧಾರ ಮಾಡಿದ್ದಾಳೆ. ಆದರೆ ಅಷ್ಟರಲ್ಲಿಯೇ ಕಂಡಕ್ಟರ್ ಅವರಿಗೆ ಬ್ಯಾಗ್ ಕಳುವು ಆಗಿರುವುದು ತಿಳಿದಿದೆ. ಕೂಡಲೇ ಬಸ್‍ನ ಡೋರ್ ಕ್ಲೋಸ್ ಮಾಡಿಸಿದ್ದಾರೆ. ಮಹಿಳೆಗೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಆದರೂ ಅಮಾಯಕಿಯಂತೆ ಏನೂ ಗೊತ್ತಿಲ್ಲದಂತೆ ನಟಿಸಿರುವ ಕಳ್ಳಿ, ಡೋರ್ ಓಪನ್ ಮಾಡುವಂತೆ ಡ್ರೈವರ್ಗೆ ಅಂಗಲಾಚಿದ್ದಾಳೆ. ನಾನು ಏನೂ ಕದ್ದಿಲ್ಲ ಎಂದಿದ್ದಾಳೆ. ಕೂಡಲೇ ಡೋರ್ ಓಪನ್ ಮಾಡಬೇಡಿ, ಪೊಲೀಸರನ್ನು ಕರೆಯಿಸಿ ಎಂದು ಕಂಡಕ್ಟರ್ ಹೇಳಿದಾಗ, ಅಲ್ಲಿ ಲೇಡಿ ಆಫೀಸರ್ ಅನ್ನು ಕರೆಸಲಾಗಿದೆ.
ಕೊನೆಗೆ ಬ್ಯಾಗ್ ಚೆಕ್ ಮಾಡಿದಾಗ, ಆಕೆಯ ಬ್ಯಾಗ್ ಒಳಗೆ ಕಂಡಕ್ಟರ್ ಬ್ಯಾಗ್ ಸಿಕ್ಕಿದೆ. ಆದರೂ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು ಇದು ಹೇಗೆ ಬಂತೋ ಗೊತ್ತಿಲ್ಲ. ಈ ಬ್ಯಾಗ್ನಲ್ಲಿ ಏನೂ ಇಲ್ಲ ನೋಡಿ ಎಂದು ಕಂಡಕ್ಟರ್ ಬ್ಯಾಗ್ ತೋರಿಸಿದಾಗ, ಅದರಲ್ಲಿ ಇರುವ ಎಲ್ಲಾ ದುಡ್ಡು ನಾಪತ್ತೆಯಾಗಿರುವುದು ತಿಳಿದಿದೆ. ಕೂಡಲೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಈಕೆ ತಮಿಳುನಾಡಿನವಳು ಎಂದು ಹೇಳಲಾಗುತ್ತಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ