
ಭಾಘ್ ಪತ್(ನ. 19) ಹಲವು ರಾಜಗ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿರುವ ಸಂದರ್ಭದಲ್ಲಿಯೇ ಪ್ರಕರಣವೊಂದು ವರದಿಯಾಗಿದೆ. ಉತ್ತರ ಪ್ರದೇಶದ ಭಾಘ್ ಪತ್ ವೈದ್ಯರ ಮೇಲೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಮುಸ್ಲಿಂ ಆಗಿದ್ದರೂ ತನ್ನ ಗುರುತನ್ನು ಮರೆ ಮಾಚಿ ಏಳು ತಿಂಗಳಿನಿಂದ ಹಿಂದೂ ನರ್ಸ್ ಒಬ್ಬರನ್ನು ಪ್ರೇಮದ ಬಲೆಗೆ ಕೆಡವಿಕೊಂಡು ದೈಹಿಕ ಸಂಪರ್ಕವನ್ನು ಬೆಳೆಸಿದ್ದ.
ಇದೆಲ್ಲದರ ಪರಿಣಾಂ ನರ್ಸ್ ಗರ್ಭಿಣಿಯಾಗಿದ್ದಾಳೆ. ಈ ವೇಳೆ ತನ್ನ ನಿಜರೂಪ ಬಹಿರಂಗ ಮಾಡಿದ ವೈದ್ಯ ಮದುವೆಯಾಗಬೇಕು ಎಂದಾದರೆ ಇಸ್ಲಾಂಗೆ ಮತಾಂತರ ಆಗಬೇಕು ಎಂದು ಪಟ್ಟು ಹಿಡಿದಿದ್ದಾನೆ.
ಲವ್ ಜಿಹಾದ್; ಈ ರಾಜ್ಯದಲ್ಲಿ ಕಾನೂನು ಜಾರಿ
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದಾರೆ. ತಕ್ಷಣ ಕಾರ್ಯನಿರತರಾದ ಪೊಲೀಸರು ಆರೋಪಿಯ ಹೆಂಡತಿ ಮತ್ತು ತಮ್ಮನ ಬಂಧನ ಮಾಡಿದ್ದು ಮುಖ್ಯ ಆರೋಪಿ ವೈದ್ಯನಿಗಾಗಿ ಬಲೆ ಬೀಸಿದ್ದಾರೆ.
ತನಿಷ್ಕ್ ಜಾಹೀರಾತು ಲವ್ ಜಿಹಾಸ್ ಎಂದ ಕಂಗನಾ
ತನ್ನ ಗುರುತನ್ನು ಮುಚ್ಚಿಟ್ಟ ವೈದ್ಯ ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ. ಮದುವೆಯಾಗಿರುವುದನ್ನು ಮುಚ್ಚಿಟ್ಟಿದ್ದಾನೆ. ಈತನಿಗೆ ಇಬ್ಬರು ಮಕ್ಕಳು ಇದ್ದಾರೆ.
ಅಕ್ರಂ ಖುರೇಶಿ ಎಂಬ ಅಸಲಿ ಹೆಸರು ಇದ್ದರೂ ತನ್ನನ್ನು ಅಕ್ಷಯ್ ಎಂದು ಪರಿಚಯ ಮಾಡಿಕೊಂಡು ನಂಬಿಸಿದ್ದಾನೆ. ನನಗೆ ವಿಚ್ಛೇದನ ಸಿಕ್ಕಿದ್ದು ಮದುವೆಯಾಗಲು ನೋಡುತ್ತಿದ್ದೇನೆ. ಇ ಮಧ್ಯೆ ಸಂತ್ರಸ್ತೆಯೊಂದಿಗೆ ಏಕಾಂತದಲ್ಲಿ ಇದ್ದಿದ್ದನ್ನು ವಿಡಿಯೋ ಮಾಡಿ ಇಟ್ಟುಕೊಂಡಿದ್ದು ಮದುವೆ ವಿಚಾರ ಮಾತನಾಡಿದಾಗಲೆಲ್ಲ ಬೆದರಿಕೆ ಹಾಕುತ್ತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ