ಹುಬ್ಬಳ್ಳಿ: ಖತರನಾಕ್‌ ಮೊಬೈಲ್‌ ಕಳ್ಳನ ಬಂಧನ

By Kannadaprabha NewsFirst Published Nov 19, 2020, 2:41 PM IST
Highlights

ಲಾರಿಗಳ ಗ್ಲಾಸ್‌ ಕತ್ತರಿಸಿ ಒಳಗಿದ್ದ ಮೊಬೈಲ್‌ ಕದಿಯುತ್ತಿದ್ದ ಕಳ್ಳ|ಬಂಧಿತ ಕಳ್ಳನಿಂದ 80 ಸಾವಿರ ಮೌಲ್ಯದ ಒಂದು ಐಫೋನ್‌ 8 ಪ್ಲಸ್‌ ಸೇರಿ 9 ಮೊಬೈಲ್‌ ವಶ|  ತನಿಖೆ ಆರಂಭಿಸಿದ ಪೊಲೀಸರು|

ಹುಬ್ಬಳ್ಳಿ(ನ.19): ದಾಬಾಗಳ ಪಕ್ಕ ನಿಲ್ಲಿಸಿದ ಲಾರಿಗಳ ಗ್ಲಾಸ್‌ ಕತ್ತರಿಸಿ ಒಳಗಿದ್ದ ಮೊಬೈಲ್‌ ಕದಿಯುತ್ತಿದ್ದ ಕಳ್ಳನನ್ನು ಇಲ್ಲಿನ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ ಬರೋಬ್ಬರಿ 1.72 ಲಕ್ಷ ಮೌಲ್ಯದ 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಳೆ ಹುಬ್ಬಳ್ಳಿ ಮಾರುತಿ ನಗರದ ರಫೀಕ್‌ ಪತ್ತೆಸಾಬ ಧಾರವಾಡ (35) ಆರೋಪಿ. ಈತ ಈಚೆಗೆ ಬಂಧಿತನಾದ ವಿಜಯ ಹುಸೇನಪ್ಪ ಅಣ್ಣಿಗೇರಿ ಎಂಬಾತನ ಜತೆ ಸೇರಿಕೊಂಡು ಬೈಕ್‌ ಕಳ್ಳತನ ಮಾಡುತ್ತಿದ್ದ. ಅಲ್ಲದೆ, ರಾತ್ರಿ ವೇಳೆ ತಾನೊಬ್ಬನೆ ದಾಬಾಗಳ ಬಳಿ ತೆರಳಿ ಲಾರಿಗಳ ಎದುರಿನ ಗ್ಲಾಸ್‌ ಅಳವಡಿಸುತ್ತಿದ್ದ ರಬ್ಬರನ್ನು ಕತ್ತರಿಸಿ ಬಾಯ್ನೆಟ್‌ ಮೇಲಿರುತ್ತಿದ್ದ ಮೊಬೈಲ್‌ ಕಳವು ಮಾಡುತ್ತಿದ್ದ. ಈತನಿಂತ 80 ಸಾವಿರ ಮೌಲ್ಯದ ಒಂದು ಐಫೋನ್‌ 8 ಪ್ಲಸ್‌ ಸೇರಿ 9 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. 

ಪೊಲೀಸರ ಸೋಗಲ್ಲಿ ಜ್ಯುವೆಲ್ಲರಿ ಮಳಿಗೆಯಲ್ಲಿ ಒಡವೆ ದರೋಡೆ

ಇನ್‌ಸ್ಪೆಕ್ಟರ್‌ ಎಸ್‌.ಕೆ. ಹೊಳೆಯಣ್ಣವರ, ಪಿಎಸ್‌ಐ ಸೀತಾರಾಮ್‌ ಲಮಾಣಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದು, ತನಿಖೆ ಮುಂದುವರಿದಿದೆ.
 

click me!