ಪ್ರೇಮ ವೈಫಲ್ಯ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ರೈಲ್ವೆ ನಿಲ್ದಾಣದ ಬಳಿಯ ಶ್ರೀನಿವಾಸ ಲಾಡ್ಜ್‌ನಲ್ಲಿ ನಡೆದಿದೆ.
ಧಾರವಾಡ (ಸೆ.8) ಪ್ರೇಮ ವೈಫಲ್ಯ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ರೈಲ್ವೆ ನಿಲ್ದಾಣದ ಬಳಿಯ ಶ್ರೀನಿವಾಸ ಲಾಡ್ಜ್‌ನಲ್ಲಿ ನಡೆದಿದೆ.
ಚಿನ್ಮಯ ಎಸ್.ಜಿ, ಆತ್ಮಹತ್ಯೆ ಮಾಡಿಕೊಂಡ ಯುವಕ, ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿಯಾಗಿರುವ ಯುವಕ. ಕಳೆದ ಸೆ.4 ರಂದು ರಾತ್ರಿ ಧಾರವಾಡ ಶ್ರೀನಿವಾಸ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಯುವಕ. ಸೆ.6 ರಂದು ರೂಂ ನಂಬರ್ 212ಕ್ಕೆ ಕ್ಲೀನ್ ಮಾಡಲು ಹೋಗಿದ್ದ ಲಾಡ್ಜ್ ಸಿಬ್ಬಂದಿ. ಈ ವೇಳೆ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಬಾಗಿಲು ತೆರೆಯುವಂತೆ ಡೂರ್ ಬಡಿದ್ರೂ ಕೂಗಿ ಹೇಳಿದ್ರೂ ಓಪನ್ ಆಗದ ಡೂರ್. ಸೆ.7ರಂದು ಮತ್ತೆ ರೂಂ ಬಾಗಿಲು ತಟ್ಟಿರುವ ಸಿಬ್ಬಂದಿ ಆಗಲೂ ಬಾಗಿಲು ತೆಗೆದಿಲ್ಲ. ಹೀಗಾಗಿ ಅನುಮಾನಗೊಂಡಿರುವ ಸಿಬ್ಬಂದಿ ಬೇರೊಂದು ಕೀ ಬಳಸಿ ರೂಂ ಲಾಕ್ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಾರವಾರ: ಗಣೇಶನ ಪೂಜೆ ವೇಳೆ ದೇವರಿಗಿಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ!
ಆತ್ಮಹತ್ಯೆ ಘಟನೆ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ಕೊಟ್ಟ ಲಾಡ್ಜ್ ಮಾಲೀಕ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಯುವಕನ ಮನೆಯವರೊಂದಿಗೆ ಮಾತಾಡಿ ವಿಷಯ ತಿಳಿಸಿದ ಪೊಲೀಸರು.
ಇಂದು ಬೆಳಗ್ಗೆ ಧಾರವಾಡಕ್ಕೆ ಬಂದ ಮೃತ ಯುವಕನ ಪೋಷಕರು. ಮೃತ ಶರೀರ ಲಾಡ್ಜ್‌ನಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿದ ಪೊಲೀಸರು. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.