
ಬೆಂಗಳೂರು(ಅ. 24) ಪ್ರೇಮ ವೈಫಲ್ಯದಿಂದ (Love failure) ಮನನೊಂದ ಯುವಕ ವಿಡಿಯೋ(Video) ಮಾಡಿ ಆತ್ಮಹತ್ಯೆಗೆ (Suicide)ಶರಣಾಗಿದ್ದಾನೆ. ಕಾರ್ತಿಕ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರ್ ಆರ್ ನಗರದ ಮಾರಪ್ಪಲೇಔಟ್ ನಲ್ಲಿ ಘಟನೆ ನಡೆದಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೃತ್ತಿಯಲ್ಲಿ ಜಿಮ್ ಟ್ರೈನರ್ (Gym trainer)ಆಗಿದ್ದ ಕಾರ್ತಿಕ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಲವ್ ಮಾಡುತ್ತಿದ್ದ. ಇತ್ತೀಚಿಗೆ ಯುವತಿ ದೂರವಾಗಿದ್ದಳು. ಯುವತಿ ನೆನಪಲ್ಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಾರ್ತಿಕ್ ಸುಸೈಡ್ ಮಾಡಿಕೊಂಡಿದ್ದಾರೆ.
ಒಂದೇ ಕುಟುಂಬದ ಐವರ ಆತ್ಮಹತ್ಯೆ.. ಮೆಡಿಕಲ್ ರಿಪೋರ್ಟ್ ನಲ್ಲಿ ರಹಸ್ಯ ಬಹಿರಂಗ
ಪ್ರೇಮ ವೈಫಲ್ಯ ಬಗ್ಗೆ ಆಪ್ತರ ಬಳಿ ಕಾರ್ತಿಕ್ ಹೇಳಿಕೊಂಡಿದ್ದ. ಈ ವಿಚಾರ ತಿಳಿದ ಪೋಷಕರು ಮದುವೆ ಮಾಡಲು ಮುಂದಾಗಿದ್ದರು. ಭಾನುವಾರ ಕಾರ್ತಿಕ್ ಗೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಬೇಕಾಗಿತ್ತು. ಅದ್ರೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಕಾರ್ತಿಕ್ ಮೊಬೈಲ್ ನಲ್ಲಿ ಸಿಕ್ಕಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಮಾಸದ ಬೆಂಗಳೂರು ಮಾಸ್ ಸುಸೈಡ್ ಪ್ರಕರಣ; ತಂದೆ ಮತ್ತು ಪತಿಯ ಕುಟುಂಬದವರ ವಿರುದ್ಧ ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿತ್ತು. ಮನೆ ಮಾಲೀಕನ ಆಸ್ತಿ ಸಂಪಾದನೆಯ ಮೇಲೂ ತನಿಖೆ ಆರಂಭವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ