ವಿಜಯನಗರ;  ಆಡು ಮೇಯಿಸಲು ಹೋದವರಿಗೆ ಸಿಡಿಲಾಘಾತ, ತಂದೆ-ಮಗ ಸೇರಿ ಮೂವರ ದುರ್ಮರಣ

By Suvarna NewsFirst Published Oct 24, 2021, 8:50 PM IST
Highlights

* ಸಿಡಿಲು ಬಡಿದು ಅಪ್ಪ ಮಗ ಸೇರಿ ಮೂವರ ಸಾವು

* ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಘಟನೆ

* ತಂದೆ ಶಿವರಾಯಪ್ಪ (34), ಮಗ ಮೈಲಾರಪ್ಪ (11), ಹನುಮಂತಪ್ಪ (35) ಮೃತ ದುರ್ದೈವಿಗಳು..

* ಸಿಡಿಲಿನ ಬಡಿತಕ್ಕೆ 2 ಆಡುಗಳ ಸಹ ಸಾವು

ವಿಜಯನಗರ (ಬಳ್ಳಾರಿ) (ಅ. 24) ಸಿಡಿಲು (Lighting Strike) ಬಡಿದು ಅಪ್ಪ ಮಗ ಸೇರಿ ಮೂವರು ದಾರುಣ ಸಾವು (Death) ಕಂಡಿದ್ದಾರೆ. ವಿಜಯನಗರ (Vijaynagar) ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.

ತಂದೆ ಶಿವರಾಯಪ್ಪ (34), ಮಗ ಮೈಲಾರಪ್ಪ (11), ಹನುಮಂತಪ್ಪ (35) ಮೃತ ದುರ್ದೈವಿಗಳು. ಸಿಡಿಲಿನ ಬಡಿತಕ್ಕೆ 2 ಆಡುಗಳು ಮರಣ  ಹೊಂದಿವೆ. ಆಡು ಮೇಯಿಸಲು ತೋಟಕ್ಕೆ ಹೋಗಿದ್ದ ವೇಳೆ ಸಿಡಿಲು ಯಮನಾಗಿ ಬಂದಿದೆ. ಸತತ ಒಂದು ಗಂಟೆಯಿಂದ ಸುರಿಯುತ್ತಿದ್ದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಮದುವೆ ಸಮಾರಂಭಕ್ಕೆ ಸಿಡಿಲು ಬಡಿದು ಹದಿನಾರು ಜನ ಸಾವು

ಘೋರ ಪ್ರಕರಣ; ಬೆಂಗಳೂರಿನ ನೈಸ್ ರಸ್ತೆಯಲ್ಲಿ ದಾರುಣ ಘಟನೆ ನಡೆದಿತ್ತು.  ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರ ಪುತ್ರನಿಗೂ ಸಿಡಿಲು ಬಡಿದಿದೆ. ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದರು. ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ  ತಂದೆ ಮಗ ತೆರಳಿದ್ದರು. ಟಿ ದಾಸರಹಳ್ಳಿಯಲ್ಲಿರು ಮನೆಗೆ ವಾಪಾಸ್ ಬರುತ್ತಿರುವಾಗ  ಸಾವು ಕಾದಿತ್ತು.

ಸಿಡಿಲಿನಿಂದ ರಕ್ಷಣೆ ಹೇಗೆ? ಬಯಲು ಪ್ರದೇಶದಲ್ಲಿದ್ದರೆ ತಕ್ಷ ಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಒದ್ದೆ ನೆಲದೊಂದಿಗೆ ನಿಮ್ಮ ಇಡೀ ದೇಹಕ್ಕೆ ಸಂಪರ್ಕವಿರಬಾರದು. ಕುಕ್ಕರುಗಾಲಿನಲ್ಲಿ ಕುಳಿತು, ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಮರಗಳಿಂದ ದೂರವಿದ್ದು ಸಣ್ಣ ಗಿಡಗಳ ಆಶ್ರಯ ಪಡೆದುಕೊಳ್ಳುವುದು ಒಳ್ಳೆಯದು. ದೊಡ್ಡ ಮರಗಳಿಗೆ ಸಿಡಿಲು ಬಡಿಯುವುದು ಜಾಸ್ತಿ.  ಲೋಹದ ವಸ್ತುಗಳಿಂದ ದೂರ ಇರಿ, ಈಜುವುದು, ನೀರಿನಲ್ಲಿ ಆಡುವ ದುಸ್ಸಾಹಸ ಬೇಡ. ತಂತಿ ಬೇಲಿಗಳಿಂದ ದೂರ ಇರಿ. ಪೋನ್  ಮಾಡುವ ಸಾಹಸವೂ ಬೇಡ.. ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಒಳಿತು.  ಯಾವುದಕ್ಕೂ ತಾಗಿಕೊಂಡು ಇರದೇ ಮಧ್ಯದಲ್ಲಿ ಇರುವುದು ಉತ್ತಮ.  

 


 

 

click me!