ಕಲಬುರಗಿ: 3 ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ, ಒಂದು ಮಗು ರಕ್ಷಣೆ

By Suvarna News  |  First Published Oct 24, 2021, 1:12 PM IST

*  ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ನಡೆದ ಘಟನೆ
*  ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಗಂಡ ಹಾಗೂ ಗಂಡನ ಮನೆಯವರಿಂದ ಕಿರುಕುಳ 
*  ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 
 


ಕಲಬುರಗಿ(ಅ.24):  ಮೂರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ(Kalaburagi) ಜಿಲ್ಲೆ ಆಳಂದ(Aland) ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಘಟನೆಯಲ್ಲಿ ತಾಯಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದು(Dealth), ಓರ್ವ ಮಗು ಬುದಕುಳಿದಿದೆ ಎಂದು ತಿಳಿದು ಬಂದಿದೆ.

ತಾಯಿ ಲಕ್ಷ್ಮಿ ಏಳಕೆ (28),‌ ಮಕ್ಕಳಾದ ಗೌರಮ್ಮ (6), ಸಾವಿತ್ರಿ (1) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಾಲ್ಕು ವರ್ಷದ ಬಾಲಕಿ ಈಶ್ವರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

Latest Videos

undefined

ಗದಗ: ಕಿತ್ತು ತಿನ್ನುವ ಬಡತನ, ಮಗಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ

ಮೂರು ಜನ ಹೆಣ್ಣು ಮಕ್ಕಳಿರುವ ಕಾರಣಕ್ಕೆ ಗಂಡ ಹಾಗೂ ಗಂಡನ ಮನೆಯವರು ಲಕ್ಷ್ಮಿ ಏಳಕೆ ಅವರಿಗೆ ನಿರಂತರವಾಗಿ ಕಿರುಕುಳ(Harassment) ನೀಡುತ್ತಿದ್ದರು ಎಂಬ ಆರೋಪ(Allegation) ಕೇಳಿ ಬಂದಿದೆ. 
ಗಂಡ ಹಾಗೂ ಗಂಡನ ಮನೆಯವರ ನಿರಂತರ ಕಿರುಕುಳದಿಂದ ಬೇಸತ್ತ ಲಕ್ಷ್ಮಿ ಏಳಕೆ ತನ್ನ ಮೂರು ಮಕ್ಕಳೊಂದಿಗೆ ಗ್ರಾಮದ ಹೊರವಲಯದ ಜಮೀನೊಂದರ ಬಾವಿಯಲ್ಲಿ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ನಿಂಬರ್ಗಾ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!