ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 5% ಲಂಚಕ್ಕೆ ಬೇಡಿಕೆ ಇಟ್ಟ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧೀನದ ಕಾರಂಜಾ ಯೋಜನೆ ನಿರ್ಮಾಣ ವಿಭಾಗದ ಎಫ್‌ಡಿಎ ಅಧಿಕಾರಿ ಚಂದ್ರಕಾಂತ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ಬೀದರ್ (ಏ.8): ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 5% ಲಂಚಕ್ಕೆ ಬೇಡಿಕೆ ಇಟ್ಟ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧೀನದ ಕಾರಂಜಾ ಯೋಜನೆ ನಿರ್ಮಾಣ ವಿಭಾಗದ ಎಫ್‌ಡಿಎ ಅಧಿಕಾರಿ ಚಂದ್ರಕಾಂತ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ ಕಾರಂಜಾ ಜಲಾಶಯ. ಡ್ಯಾಂ ನಿರ್ಮಾಣದ ವೇಳೆ ಹಲವು ಹಳ್ಳಿಗಳ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಂಡಿದ್ದರು. ಭೂಮಿ ಕಳೆದುಕೊಂಡ ರೈತರು ಸೂಕ್ತ ಪರಿಹಾರಕ್ಕಾಗಿ ಹಲವು ವರ್ಷಗಳ ಪ್ರತಿಭಟನೆ ಬಳಿಕ ರೈತರಿಗೆ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ ಪರಿಹಾರದ ಹಣದಲ್ಲಿ 30 ಸಾವಿರಕ್ಕೆ ಬೇಡಿಕೆ ಇಟ್ಟಿಕದ್ದ ಭ್ರಷ್ಟ ಅಧಿಕಾರಿ ಚಂದ್ರಕಾಂತ್.
ಬಿಬಿಎಂಪಿ ಚೀಫ್ ಇಂಜಿನಿಯರ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ!
ರೈತನಿಂದ 30 ಸಾವಿರ ರೂಪಾಯಿ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಅಧಿಕಾರಿ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಾರಂಜಾ ಇಲಾಖೆಯ ಎಇ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇದೀಗ ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟು ಲೋಕಸಭಾ ಬಲೆಗೆ ಬಿದ್ದ ಎಫ್‌ಡಿಎ ಅಧಿಕಾರಿ.